ಮಹಾಸಭೆಯಲ್ಲಿ ಕಾಯಕಕಟ್ಟೆಯಿಂದ ವಸ್ತುಪ್ರದರ್ಶನ, ಮಾರಾಟ ಮೇಳ
Exhibition and sales fair from Kayakakatte at Mahasabha
ಮಹಾಸಭೆಯಲ್ಲಿ ಕಾಯಕಕಟ್ಟೆಯಿಂದ ವಸ್ತುಪ್ರದರ್ಶನ, ಮಾರಾಟ ಮೇಳ
ಬೆಳಗಾವಿ 29: ಕಾಯಕ ಕಟ್ಟೆ ವೀರಶೈವ ಲಿಂಗಾಯತ ಮಹಿಳಾ ಉದ್ದಿಮೆದಾರರ ಬಳಗವು ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕ ಬೆಳಗಾವಿ ಇವರ ಸಹಯೋಗದೊಂದಿಗೆ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸ್ಥಳೀಯ ಶಿವಬಸವ ನಗರ ಲಿಂಗಾಯತ ಭವನದಲ್ಲಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಇದೆ 26.7.2025 ರಂದು ಆಯೋಜಿಸಿತ್ತು.
ವಸ್ತು ಪ್ರದರ್ಶನವನ್ನು ಕಾರ್ೋರೇಟ್ ತರಬೇತುದಾರ ಡಾ.ಮಾಧುರಿ ಹೆಬ್ಭಾಳಕರ ಬಸವಭಾವಪೂಜೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಶರಣ ಸಂಸ್ಕೃತಿಯ ಮೂಲ ಸಿದ್ಧಾಂತವಾದ ಕಾಯಕ ಮತ್ತು ದಾಸೋಹವನ್ನೆ ತಳಹದಿಯಾಗಿರಿಸಿಕೊಂಡು ರೂಪುಗೊಂಡಂತಹ ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರನ್ನು ಅಭಿನಂದಿಸುತ್ತಾ, ನಮ್ಮ ದೇಶದ ಆರ್ಥಿಕ ಅಭಿವೃದ್ಧಿಗೆ ಹಾಗೂ ಸರ್ವಾಂಗೀಣ ಏಳಿಗೆಗೆ ಮಹಿಳೆಯರ ಪಾಲು ದೊಡ್ಡದಾಗಿದೆ. ಮಹಿಳೆಯರು ಸಣ್ಣ ಕಾಯಕ ಮಾಡಿದರು ಅದರಿಂದ ದೊರೆಯುವ ಫಲ ಹಾಗೂ ಯಶಸ್ಸು ಬಲುದೊಡ್ಡಮಟ್ಟದ್ದಾಗಿರುತ್ತದೆ. ಕಾರಣ ಅವರು ಶ್ರದ್ಧೆ ನಿಷ್ಠೆ ಇಂದ ಮಾಡುವ ಕೆಲಸ ಅದು ಕೇವಲ ಹಣಗಳಿಸುವ ಮೂಲವಾಗದೆ ದೇಶದ ಸಂಸ್ಕೃತಿ ಹಾಗೂ ಸಂಪತ್ತನ್ನು ಉಳಿಸಿ ಬೆಳೆಸುವಲ್ಲಿ ಬಲುದೊಡ್ಡ ಕಾಣಿಕೆಯಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ತಾವು ಕೂಡಾ ಈ ಸಂಘಟನೆಯ ಉತ್ಪನ್ನಗಳನ್ನು ರಾಷ್ಟೊಮಟ್ಟದಲ್ಲಿ ಗುರುತಿಸುವಂತೆ ಮಾಡಲು ಕೈಜೋಡಿಸುತ್ತೇವೆ ಅಂತಾ ಹೇಳಿದರು. ಈ ಮೇಳದಲ್ಲಿ ವಿವಿಧ ವಸ್ತುಗಳ, ಉಡುಪುಗಳು, ತಿಂಡಿತಿನಿಸುಗಳ ಸುಮಾರು 30 ಮಳಿಗೆಗಳನ್ನು ನಿಯೋಜಿಸಲಾಗಿತ್ತು. ಪ್ರತಿ ಮಳಿಗೆಯ ವಸ್ತುಗಳು ಕೂಡಾ ಕೌಶಲ್ಯಾಧಾರಿತವಾಗಿ ತಯಾರಿಸಿದ ವಸ್ತುಗಳಾಗಿದ್ದವು.
ಪ್ರಾಯೋಗಿಕವಾಗಿ ಮಾತುಗಳನ್ನಾಡಿದ ಕಾಯಕ ಕಟ್ಟೆ ಸಂಸ್ಥಾಪಕರು ಹಾಗೂ ಪ್ರಧಾನ ನಿರ್ದೇಶಕಿ ಆಶಾ ಎಸ್ ಯಮಕನಮರಡಿ ಅವರು ಸಂಘಟನೆ ಉದ್ದೇಶ ಬೆಳೆದು ಬಂದ ದಾರಿ ಹಾಗು ಮುಂದಿನ ಗುರಿಗಳ ಬಗ್ಗೆ ತಿಳಿಸುತ್ತಾ, ಕಾಯಕ ಕಟ್ಟೆ ಪ್ರತಿಯೊಬ್ಬ ಮಹಿಳಾ ಉದ್ದಿಮೆದಾರರು ನಮ್ಮ ಸಮಾಜದ ಸಾಧಕರ ಸಾಲಿನ ಹೆಮ್ಮೆಯಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಘಟಕ ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತಾ ನಮ್ಮ ಸಮಾಜ ಹೆಣ್ಣುಮಕ್ಕಳ ಅಭಿವೃದ್ಧಿಗೆ ಹಾಗೂ ಅವರ ಸಬಲೀಕರಣಕ್ಕೆ ಮಹಾಸಭೆಯ ಸದಾ ಕಾರ್ಯಪ್ರವರ್ತರಾಗಿರುತ್ತದೆ. ಅವರ ಅಭಿವೃದ್ಧಿ ನಮ್ಮ ಸಮಾಜದ ಬೆಳವಣಿಗೆ ಎಂದು ಪ್ರೋತ್ಸಾಹದಾಯಕ ಮಾತುಗಳನ್ನಾಡಿದು. ಇದೆ ಸಂದರ್ಭದಲ್ಲಿ ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರ ಬಳಗವು ‘ವಿ5 ಈವೆಂಟ್ ಪ್ಲ್ಯಾನರ’ ಎಂಬ ಶುಭ ಸಮಾರಂಭಗಳ ಆಯೋಜನಾ ಘಟಕ ಪ್ರಾರಂಭಿಸುವ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಇದೊಂದು ಕಾಯಕ ಕಟ್ಟೆಯ ಬೆಳವಣಿಗೆಯ ಹೊಸಹೆಜ್ಜೆ ಆಗಿದೆ. ಕಾಯಕ ಕಟ್ಟೆ ಮುಖ್ಯ ನಿರ್ವಾಹಕರಾದ ಶೈಲಾ ಸಂಸುದ್ದಿ ಅವರು ಸ್ವಾಗತಪರ ಮಾತುಗಳನ್ನಾಡಿದರು. ನಿರ್ವಾಹಕ ಮಂಡಳಿಯ ಇನ್ನೋರ್ವ ಸದಸ್ಯರಾದ ಸುಧಾ ಪಾಟೀಲ ಅತಿಥಿ ಪರಿಚಯ ಮಾಡಿದರು. ವಿದ್ಯಾ ಸವದಿ ಪ್ರಾರ್ಥನೆ ಮಾಡಿದರು. ಸಂಘಟನೆ ಕ್ರಿಯಾಶೀಲ ಸದಸ್ಯೆ ಶ್ವೇತಾ ಹೆದ್ದೂರಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು ಐಶ್ವರ್ಯ ವಂದನಾರೆ್ಣ ಮಾಡಿದರು.
ಮೇಳಕ್ಕೆ ಸಮಾಜದ ಅನೇಕ ಗಣ್ಯರು, ವಿವಿಧ ಮಹಿಳಾ ಸಂಘಟೆಗಳ ಪದಾಧಿಕಾರಿಗಳು, ಸದಸ್ಯರು, ಜಿಲ್ಲೆಯ ಹಿರಿಯ ಸಾಹಿತಿಗಳು ಭೇಟಿ ನೀಡಿದರು. ಕಳೆದ ನಾಲ್ಕು ವರುಷಗಳಿಂದ ವಸ್ತುಪ್ರದರ್ಶನ ಮಾರಾಟ ಮೇಳ ನಡೆಸುತ್ತಿರುವ ಕಾಯಕ ಕಟ್ಟೆ ದಿನದಿಂದ ದಿನಕ್ಕೆ ತನ್ನ ನಿರಂತರ ಕಾರ್ಯಚಟುವಟಿಕೆಗಳಿಂದ ಜಿಲ್ಲೆಯಾದ್ಯಂತ ಜನಪ್ರಿಯತೆ ಪಡೆದಿದೆ.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 