ಪ್ರತಿಯೊಬ್ಬರೂ ಶುಚಿತ್ವಕ್ಕೆ ಆದ್ಯತೆ ನೀಡಬೇಕು: ಆನಂದ ಬಡಕುಂದ್ರಿ
Everyone should prioritize cleanliness: Ananda Badakundri
ಯರಗಟ್ಟಿ, 12 : ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಬಳಸುವವರ ಸಂಖ್ಯೆ ಬಹಳ ಕಡಿಮೆ ಇದ್ದು, ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮ ಪಂಚಾಯತ ಸಭಾಭವನದಲ್ಲಿ ಈಚಗೆ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆ, ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಗ್ರಾಮ ಪಂಚಾಯತ ಸನ್ 2025,26ನೇ ಸಾಲಿನ್ ಕಾಯಕ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಶಾಲೆಗೆ ಬೇಕಾಗುವ ಶೌಚಾಲಯ, ಅಡುಗೆ ಕೋಣೆ, ಕಾಂಪೌಂಡ, ಆಟದಮೈದಾನ, ಸ್ವಚ್ಛತೆ ಅವುಗಳನ್ನು ಪರೀಶೀಲಿಸಿ ಯಾವ ಶಾಲೆಗೆ ಯಾವುದು ಅವಶ್ಯಕವಾಗಿದೆ ಅವುಗಳನ್ನು ಕಡ್ಡಾಯವಾಗಿ ಹೆಸರನ್ನು ಸೇರಿಸಿ ಕ್ರಿಯಾಯೋಜನೆಯಲ್ಲಿ ತಯಾರಿಸಬೇಕು. ಆಸ್ತಿ ತೆರಿಗೆ ಸಂಗ್ರಹ ಮಾಸಾಂತ್ಯ ದೊಳಗೆ ನಿಗದಿತ ಗುರಿ ಸಾಧಿಸಿ ಎಂದರು. ಪಿಡಿಒ ರಾಘವೇಂದ್ರಕುಮಾರ ಎಸ್.ಪಿ ಮಾತನಾಡಿ, ಗ್ರಾಮಸ್ಥರು ನೀರನ್ನು ಮಿತವಾಗಿ ಬಳಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರಡ್ಡಿ, ಉಪಾಧ್ಯಕ್ಷೆ ರುಕ್ಷ್ಮೀಣಿ ನಾಯ್ಕರ, ಎಡಿ ಆರ್.ಎ.ಪಾಟೀಲ, ಕ್ಲರ್ಕ ರಾಜಶೇಖರ ಅಣ್ಣಿಗೇರಿ, ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ಶಿವಾನಂದ ಅಣ್ಣಿಗೇರಿ, ಲೋಕನಾಥ ಪೂಜೇರ, ದೀಪಾ ಸಾಲಿ, ಗೀತಾ ಸಕ್ರಿ, ಅಕ್ಷತಾ ಸಾಲಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 