ಪ್ರತಿಯೊಬ್ಬರು ಭಕ್ತಿ ಜ್ಞಾನ ವೈರಾಗ್ಯದಿಂದ ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು- ಗುರುಸಿದ್ದೇಶ್ವರ ಸ್ವಾಮಿಜಿ
Everyone should make their life meaningful through devotion, knowledge, and detachment - Gurusiddhe
ಯಮಕನಮರಡಿ 16: ಸಮೀಪದ ಇಂದಿರಾನಗರದಲ್ಲಿ ದಿ. 13 ರಿಂದ ದಿ 15 ರವರೆಗೆ ಪಾಂಡುರಂಗ ಮಂದಿರದಲ್ಲಿ ಹರಿದಾಸ ಸಪ್ತಾಹ ಹಾಗೂ ಆಧ್ಯಾತ್ಮೀಕ ಪ್ರವಚನ ಕೇಳಿ ಮನುಷ್ಯನು ತಮ್ಮ ಆತ್ಮ ವೈರಾಗ್ಯವನ್ನು ಭಕ್ತಿ, ಜ್ಞಾನ ದಿಂದ ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಹತ್ತರಗಿ ಕಾರಿಮಠದ ಗುರುಸಿದ್ದಮಹಾಸ್ವಾಮಿಗಳು ಧಿವ್ಯಸಾನಿಧ್ಯ ವಹಿಸಿ ದಿ.15 ರಂದು ಆಶೀರ್ವಚನ ನಿಡಿದರು. ಮುಂಜಾನೆ 9 ಗಂಟೆಯಿಂದ ಸಾಯಂಕಾಲದ ವರೆಗೆ ಪಾಂಡರಂಗನ ಪಲ್ಲಕ್ಕಿ ಮೇರವಣಿಗೆ ಮನೆಮನೆಗೆ ಪಾದಪೂಜೆ ಇತ್ಯಾದಿಕಾರ್ಯಕ್ರಮಗಳು ಜರುಗಿ ಸಂಜೆ 4 ಗಂಟೆಗೆ ಮಹಾಪ್ರಸಾದ ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಕೊಡುಗೈ ದಾನಿಗಳು ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ರವಿಂದ್ರ ಅಣ್ಣಾ ಜಿಂಡ್ರಾಳಿ ಮಾಜಿ ತಾಲೂಕ ಪಂಚಾಯತ ಅಧ್ಯಕ್ಷ ದಸ್ತಗೀರ ಬಸ್ಸಾಪುರಿ ಉಪಸ್ಥಿತರಿದ್ದು ಮಾತನಾಡುತ್ತಾ ಸದರಿ ದೇವಸ್ಥಾನ ಜಿರ್ಣೋದಾರಕ್ಕೆ ಮುಂದಿನ ದಿನಮಾನಗಳಲ್ಲಿ ಸಚಿವರ ಮಾರ್ಗದರ್ಶನದಂತೆ ಮಂದಿರವನ್ನು ಅಭಿವೃದ್ದಿ ಪಡಿಸಲು ಧನ ಸಹಾಯ ಮಂಜೂರು ಮಾಡಲಾಗುವುದೆಂದು ಹೆಳುತ್ತಾ ಸದರಿ ಇಂದಿರಾನಗರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ
ಮುಂದಿನ ದಿನಮಾನಗಳಲ್ಲಿ ಇನ್ನೂಳಿದ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುವುದು ಸದರಿ ಇಂದಿರಾನಗರ ಗ್ರಾಮವು ಗಿಡಮರಗಳಿಂದ ಉತ್ತಮ ಪರಿಸರ ಹೊಂದಿದ್ದು ಇರುತ್ತದೆ. ಸದರಿ ದೇವಸ್ಥಾನ ಕಮೀಟಿಯ ಸರ್ವಸದಸ್ಯರ ಶ್ರಮದಿಂದ ಸದರೀ ದೇವಸ್ಥಾನವು ಪ್ರತಿವರ್ಷವೂ ಅಭಿವೃದ್ದಿ ಹೊಂದುತ್ತ ಬಂದಿರುವುದು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಹೆಳಿದರು 3ದಿನಗಳ ಆದ್ಯಾತ್ಮೀಕ ಭಜನೆ ಕಿರ್ತನೆ ಕಾರ್ಯಕ್ರಮಕ್ಕೆ ಕಿತ್ತೂರು ಹಾಗೂ ಇತರೆ ಗ್ರಾಮಗಳಿಂದ ಅಪಾರ ಭಕ್ತಾದಿಗಳು ಸಂತರು ಶರಣರು ಆಗಮಿಸಿ ತಮ್ಮ ಕಿರ್ತನೆ ಪ್ರವಚನೆಗಳಿಂದ ಸಕಲ ಭಕ್ತಾದಿಗಳ ಮನಸ್ಸನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು ಸದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಅಪಾರ ಗೋಂಧಳಿ ಸಮಾಜದ ಕುಲಬಾಂದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಪಾಂಡರಂಗನ ಕೃಪೆಗೆ ಸಾಕ್ಷಿಯಾದರು ಪ್ರಾರಂಭದಲ್ಲಿ ಹಿರಿಯ ಪತ್ರಕರ್ತರಾದ ಗೋಪಾಲ ಚಪಣಿ ಅತಿಥಿಗಳನ್ನು ಸ್ವಾಗತಿಸಿ ಮುಂದಿನ ಬೇಡಿಕೆಗಳನ್ನು ಯುವಧುರಿಣರಾದ ರವೀಂದ್ರ ಜಿಂಡ್ರಾಳಿ ರವರ ಗಮನಕ್ಕೆ ತಂದು ನಿರೂಪಿಸಿ ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 