ಪ್ರತಿಯೊಬ್ಬರು ಪರೋಪಕರ ಮನೋಭಾವನೆ ರೂಡಿಸಿಕೊಳ್ಳಬೇಕು: ಶಿವಾಚಾರ್ಯ ಮಹಾಸ್ವಾಮೀಜಿ

ಪ್ರತಿಯೊಬ್ಬರು ಪರೋಪಕರ ಮನೋಭಾವನೆ ರೂಡಿಸಿಕೊಳ್ಳಬೇಕು: ಶಿವಾಚಾರ್ಯ ಮಹಾಸ್ವಾಮೀಜಿ Everyone should cultivate a charitable attitude: Shivacharya Mahaswamiji

                 ರಾಣೇಬೆನ್ನೂರ:8 ಸಮಾಜದಲ್ಲಿ ಪರೋಪಕರ ಮಾಡುವರು ತಮ್ಮಗೆ ಅರಿವಿಲ್ಲದಂತೆ ಭಗವಂತನಿಗೆ ಪ್ರಿಯವಾಗಿರುತ್ತಾರೆ. ಈ ನಿಟ್ಟಿನಲ್ಲಿ ಕಾಕಿ ಕುಟುಂಬ ಮಾದರಿಯಾಗಿದೆ. ಇದೇ ರೀತಿ ಪ್ರತಿಯೊಬ್ಬರು ಪರೋಪಕರ ಮನೋಭಾವನೆ ಜೀವನದಲ್ಲಿ ರೂಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಹುಬ್ಬಳ್ಳಿ ನೀಲಕಂಠೇಶ್ವರ ಮಠದ ಶ್ರೀಶೈಲಂ ಆದೀಪೀಠ ಸೂರ್ಯ ಸಿಂಹಾಸನಾದೀಶ್ವರ ಜಗದ್ಗುರು ಶಿವಶಂಕರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

                 ನಗರದ ಹುಣಿಸಿಕಟ್ಟಿ ರಸ್ತೆಯ ಜೆಸಿ ಅರಮನೆಯಲ್ಲಿ ಶ್ರೀ ನೀಲಕಂಠೇಶ್ವರ ಕಾರ್ತಿಕೋತ್ಸವ ಅಂಗವಾಗಿ ದೊಡ್ಡನಾಗಪ್ಪ ಹಾಗೂ ಸಣ್ಣನಾಗಪ್ಪ ಸ್ಮರಣಾರ್ಥವಾಗಿ ಸೋಮವಾರ ಕಾಕಿ ಜನಸೇವಾ ಸಂಸ್ಥೆ ಹಾಗೂ ಕುರುಹಿನ ಶೆಟ್ಟಿ ಸೇವಾ ಸಮಾಜ ಸಂಯುಕ್ತಾಶ್ರಯದಲ್ಲಿ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ, ಧರ್ಮಸಭೆ ಹಾಗೂ ಜನಸೇವಾ ಸಂಸ್ಥೆಯ ಇಬ್ಬರು ಸದಸ್ಯರಿಗೆ ಉಚಿತ ನಿವೇಶನ ವಿತರಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು, ಯಾವುದೇ ಜಾತಿ-ಮತ- ಪಂಥ ಎನ್ನದೇ ಸರ್ವ ಜನಾಂಗದ ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ಇಂತಹ ಕಾರ್ಯಕ್ರಮ ಮಾಡುವುದು ಉತ್ತಮವಾಗಿದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಪರಸ್ಪರ ಪ್ರೀತಿ ನಂಬಿಕೆಯೊಂದಿಗೆ ಜೀವನ ಸಾಗಿಸಬೇಕು. ಅಂದಾಗ ಮಾತ್ರ ಜೀವನ ಎಂಬ ಜಂಜಾಟದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.

                 ನವ ದಂಪತಿಗಳು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ನವ ದಂಪತಿಗಳ ಬದುಕು ಉಜ್ವಲವಾಗಲಿದೆ. ಕಾಕಿ ಮನೆತನದ ಸಮಾಜಮುಖಿ ಕಾರ್ಯ ಆದರ್ಶಪ್ರಾಯವಾಗಿದೆ. ಈ ರೀತಿ ಸರ್ವ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ಸಮಾಜದಲ್ಲಿ ಭಾವೈಕತೆಗೆ ಸಾಕ್ಷಿಯಾಗಿ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಬಡವರಿಗೆ ಕಂತುಗಳಿಗೆ ನಿವೇಶನ, ಸಾಮೂಹಿಕ ವಿವಾಹ, ಜಾನಪದ ಕಲೆ, ನಾಡು ನುಡಿ ಬಗ್ಗೆ ಅಪಾರ ಕಾಳಜಿ ವಹಿಸಿ ಸೇವೆ ಮಾಡುತ್ತಿದ್ದಾರೆ.

                 ಜಾನಪದ ಕಲಾವಿದರಿಗೆ, ಭಜನೆ ಕಲಾವಿದರಿಗೆ, ಸಮಾಜದ ವಿದ್ಯಾರ್ಥಿಗಳಿಗೆ ಪೋತ್ಸಾಹ ನೀಡಿದ್ದಾರೆ. ಯಾವುದೆ ಸ್ವಾರ್ಥವಿಲ್ಲದೆ ಸಮಾಜ ಸೇವೆ ಮಾಡುತ್ತಾ ಅನೇಕ ಕುಟುಂಬಗಳಿಗೆ ಕಾಕಿ ಕುಟುಂಬ ದಾರಿ ದೀಪವಾಗಿದೆ ಎಂದರು.ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಬಾರಿ ಕಾಲದಲ್ಲಿ ಕೂಡ ಸಾಮೂಹಿಕ ಮಾಡುತ್ತಿರುವುದು ಶಾಘ್ಲನೀಯವಾಗಿದೆ. ಸಮಾಜದಲ್ಲಿ ದುಡ್ಡು ಇದ್ದರೂ ಬಹಳಷ್ಟು ಜನ ಇದ್ದಾರೆ. ಆದರೆ, ಸಮಾಜ ಸೇವೆ ಮಾಡುವ ಇಚ್ಛೆ ಇರಬೇಕು. ಅಂತಹ ಇಚ್ಛೆಯನ್ನು ಕಾಕಿ ಕುಟುಂಬ ಹೊಂದಿದೆ. ನವ ದಂಪತಿಗಳು ಸಮಾಜಕ್ಕೆ ಮಾದರಿಯಾದಾಗ ಮಾತ್ರ ಇಂತಹ ಸಾಮೂಹಿಕ ಕಾರ್ಯಕ್ರಮಗಳಿಗೆ ಅರ್ಥ ಬರುತ್ತೆ ಎಂದರು.ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು.

               ಇದೇ ಸಂದರ್ಭದಲ್ಲಿ ಒಂಭತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಕಾಕಿ ಜನಸೇವಾ ಸಂಸ್ಥೆಯ ಎರಡು ಸದಸ್ಯರಿಗೆ ಲಕ್ಕಿ ಡ್ರಾ ಮೂಲಕ ಉಚಿತ ನಿವೇಶನ ನೀಡಲಾಯಿತು.ಇದಕ್ಕೂ ಮುನ್ನಾದಿನ ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಿಂದ ವಧು ವರರ ಸಾರೋಟದ ಮೆರವಣಿಗೆಗೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು.ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ಹನುಮಂತಪ್ಪ ಕಾಕಿ, ಸದಸ್ಯರಾದ ಸಣ್ಣ ಹನುಮಂತಪ್ಪ ಕಾಕಿ, ಕಾಕಿ ಜನಸೇವಾ ಸಂಸ್ಥೆ ಕಾರ್ಯದರ್ಶಿ ರೂಪಾ ಕಾಕಿ, ವೆಂಕಟೇಶ ಕಾಕಿ, ಮುಖಂಡರಾದ ಪ್ರಕಾಶ ಗಚ್ಚಿನಮಠ, ವಿ.ಸಿ.ಹಿರೇಮಠ, ಶಿವಾನಂದ ಬಗಾದಿ, ನಿತ್ಯಾನಂದ ಕುಂದಪುರ, ಶ್ರೀನಿವಾಸ ಸುರಹೊನ್ನೆ, ಅಮಿತ್ ಕಾಕಿ, ಪ್ರಕಾಶ ಕಾಕಿ, ಲಕ್ಷ್ಮೀ ಕಾಕಿ ಸೇರಿದಂತೆ ಮತ್ತಿತರು ಇದ್ದರು.