ಅನ್ನದಾನೇಶ್ವರ ಶ್ರೀಗಳು ಅಗಲಿದರೂ,ನಿಲ್ಲದ ದಾಸೋಹ,ಯಡೂರ ಶ್ರೀವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತರಿಗೆ ಪಂಚಪಕ್ವಾನ ಭೋಜನ
Even after the departure of Annadaneshwara, the devotion does not stop, the devotees are served a P
ಮಾಂಜರಿ 19 : ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು ಲಿಂಗಕ್ಯೆರಾದವರು ಕೂಡಾ ಅವರ ಸಂಕಲ್ಪದಂತೆ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದಿಂದ ನಿರಂತರವಾಗಿ ದಾಸೋಹ ನಡೆದುಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದು ಶ್ರೀಶೈಲ್ ಜಗದ್ಗುರು ಡಾ!ಚನ್ನಸಿಧ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರು ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಸುಕ್ಷೇತ್ರದ ಯಡೂರಿನ ಶ್ರೀವೀರಭದ್ರೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಬಂಡಿಗಣಿಯ ಲಿಂಗೈಕ್ಯ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳ ಬಸವಗೋಪಾಲ ನೀಲಮಾಣಿಕ ಮಠದಿಂದ ಆಯೋಜಿಸಿದ ಮಹಾದಾಸೋಹಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಅನ್ನದಾನ ಮಾಡಿಕೊಂಡು ಬರುತ್ತಿರುವ ಬಂಡಿಗಣಿಯ ಮಠದ ದಾಸೋಹವು ದೊಡ್ಡ ಶಕ್ತಿಯಾಗಿದೆ.
ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳ ಅಗಲಿಕೆಯುವ ನಮ್ಮನ್ನು ಕಾಡುತ್ತಿದೆ.ಬಂಡಿಗಣಿಮಠದಿಂದ ಹೊಳಿಗೆ,ತುಪ್ಪ, ಜಿಲೆಬಿ,ಹುಗ್ಗಿ,ಬುಂದಿ,ಮಾಲುಂದಿ,ಭಜ್ಜಿ,ಅನ್ನ ಸಾಂಬಾರ,ಸೀರಾ,ಸಜಕಿನಿ ಹೋಳಿಗೆ ಹೀಗೆ ಪಂಚಪಕ್ವಾನದ ಭೋಜನವನ್ನು ಭಕ್ತರಿಗೆ ಉಣಬಡಿಸುತ್ತಿದ್ದಾರೆ.ಅನ್ನದಾನೇಶ್ವರ ಶ್ರೀಗಳು ನಡೆಸಿಕೊಂಡು ಬರುತ್ತಿರುವ ದಾಸೋಹ ನಿಂತಿಲ್ಲ ಎಂಬ ಸಂಗತಿಯು ಹೆಮ್ಮೆ ಪಡುವಂತದ್ದು.ಅನ್ನದಾನೇಶ್ವರ ಶ್ರೀಗಳು ದೇಹದಿಂದ ಇಲ್ಲದೇ ಇರಬಹುದು. ಆದರೆ ಆತ್ಮದಿಂದ ನಮ್ಮ ಜೊತೆಗೆ ಇದ್ದಾರೆ ಎಂದರು.ಬಂಡಿಗಣಿ ಮಠದ ದಾಸೋಹ ಸಾಮಾನ್ಯ ದಾಸೋಹವಾಗದೆ ಅದು ಅಸಾಮಾನ್ಯ ದಾಸೋಹವಾಗಿದೆ ಎಂದರು.
ಲಾತೂರ ಜಿಲ್ಲೆಯ ಶ್ರೀನಾಥ ಪಂಚಮ ಪೀಠಾಧಿಪತಿ ಗುರುಬಾಬಾ ಮಹಾರಾಜರು ಮಾತನಾಡಿ ಪುಣ್ಯಸ್ಥಳಲ್ಲಿ ಮಹಾಪ್ರಸಾದವನ್ನು ಮಾಡುವುದರಿಂದ ಸಂತೃಪ್ತಿ ಹೊಂದಿ ಆಶಿರ್ವಾದವನ್ನು ಪಡೆದುಕೊಳ್ಳುತ್ತೇವೆ.ಸ್ವಚ್ಚ ಮನಸ್ಸಿನಿಂದ ಪ್ರಸಾದವನ್ನು ಸೇವಿಸುವುದರಿಂದ ನಮ್ಮ ಬುಧ್ದಿ-ಮನಸ್ಸು ಶುಧ್ದಿವಾಗುತ್ತದೆ.
ಲಿಂಗೈಕ್ಯ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳ ಭಕ್ತರಿಂದ ಜರುಗುತ್ತಿರುವ ಪಂಚಕಪಕ್ವಾನದ ಭೋಜನವು ಪ್ರಶಂಸನೀಯ.ಸಹಸ್ರಾರು ಭಕ್ತರಿಗೆ ಬಗೆ ಬಗೆಯ ಅನ್ನಪ್ರಸಾದ ಮಾಡುತ್ತಿರುವ ಲಿಂಗೈಕ್ಯ ಅನ್ನದಾನೇಶ್ವರ ಶ್ರೀಗಳ ಕಾರ್ಯ ಮೆಚ್ಚುವಂತದ್ದು ಎಂದರು.
ಬಳಿಕ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ಭಕ್ತರಾದ ಕಾಮಪ್ಪ,ಶಿವಾನಂದ, ಸಚಿನಯವರು ಮಾತನಾಡಿ ಲಿಂಗೈಕ್ಯ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು ಹಾಕಿದ ದಾರಿಯಲ್ಲಿ ಭಕ್ತರು ಸೇರಿಕೊಂಡು ದಾಸೋಹವನ್ನು ನಡೆಸಿಕೊಂಡು ಬರುತ್ತಿದೇವೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 