ಹೊಳೆ ಮಣ್ಣೂರ ಸ್ಕೂಲ್ ನಲ್ಲಿ ಖಃಉಕ ಬ್ಯಾಂಕ್ ಸ್ಥಾಪನೆ: ಮಕ್ಕಳೆ ನಿರ್ವಹಿಸುವ ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ
Establishment of Bank Bank at Hole Mannoor School: School Bank of Gram Panchayat run by girls
ಹೊಳೆ ಮಣ್ಣೂರ ಸ್ಕೂಲ್ ನಲ್ಲಿ ಖಃಉಕ ಬ್ಯಾಂಕ್ ಸ್ಥಾಪನೆ: ಮಕ್ಕಳೆ ನಿರ್ವಹಿಸುವ ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ
ರೋಣ 21: ಓದು ಬರಹ ಗೊತ್ತಿದ್ದರೂ ಸಹ ಬ್ಯಾಂಕ್ ನಲ್ಲಿ ಹೋದಾಗ ಅಲ್ಲಿ ಹಣ ತುಂಬುವ, ತೆಗೆಯುವ ಚಲನ್ ಭರ್ತಿ ಮಾಡುವಂತೆ ಗೋಗೆರೆಯುವ ಕೆಲವರನ್ನು ಕಾಣುತ್ತೆವೆ. ಆದರೆ ಈ ಸ್ಕೂಲ್ ಮಕ್ಕಳಿಗೆ ಅದೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶಾಲೆ ಕಲಿಯುವಾಗಲೇ ನೀಡುತಿದ್ದಾರೆ ಜೊತೆಗೆ ಸ್ಕೂಲ್ ಮಕ್ಕಳೆ ಬ್ಯಾಂಕ್ ನಡೆಸಿಕೊಂಡು ಹೋಗುತ್ತಿದ್ದಾರೆ ಅದುವೆ ಖಃಉಕ ಇದು ಮಕ್ಕಳೇ ನಿರ್ವಹಿಸುವ ಮಾದರಿ ಸ್ಕೂಲ್ ಬ್ಯಾಂಕ್ ಎನಿದರ ವಿಶೇಷ ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ ಖಃಉಕ ಗೆ ಚಾಲನೆಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ ಅವರು ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ ಖಃಉಕ ಗೆ ಸರ್ಕಾರಿ ಪ್ರೌಢಶಾಲೆ ಹೊಳೆ ಮಣ್ಣೂರು ದಲ್ಲಿ ಚಾಲನೆ ನೀಡಿದರು. ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಉಳಿತಾಯ ಮನೋಭಾವ ಬೆಳೆಸುವುದು ಹಾಗೂ ಬ್ಯಾಂಕಿಂಗ್ ಹಣಕಾಸಿನ ವಿಷಯದ ಕುರಿತು ಜಾಗೃತಿ ಮೂಡಿಸುವುದು ಇಂತಹ ಘನ ಉದ್ದೇಶಗಳೊಂದಿಗೆ ಗ್ರಾಮ ಪಂಚಾಯತಿಯು ವಿದ್ಯಾರ್ಥಿಗಳಿಗಾಗಿ ಬ್ಯಾಂಕ್ ಸ್ಥಾಪನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹೊಳೆಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರಕಾರಿ ಪ್ರೌಢಶಾಲೆ ಹಾಗೂ ಎರಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು ಮೂರು ಶಾಲೆಗಳು 458 ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದು, ಎಲ್ಲರಿಗೂ ಪಾಸ್ ಬುಕ್ ವಿತರಿಸುವ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿಯಿಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಶೇಕಡ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಖಃಉಕ ಯಲ್ಲಿ ತಮ್ಮ ಖಾತೆ ತೆರೆದು ಬ್ಯಾಂಕ್ ಪಾಸ್ ಬುಕ್ ವಿತರಿಸಲಾಗಿದೆ. ಪ್ರತಿಯೊಬ್ಬ ವಿಧ್ಯಾರ್ಥಿಯ ಖಾತೆದಾರರಿಗೂ ಒಂದು ಪಾಸ್ ಬುಕ್ ನೀಡಲಾಗುತ್ತದೆ ಹಾಗೂ ಅವರ ಬಳಿ ಇರುತ್ತದೆ ಆ ಪಾಸಬುಕ್ ಮೂಲಕವೇ ವ್ಯವಹಾರ ನಡೆಯುತ್ತದೆ ವಿಧ್ಯಾರ್ಥಿಗಳಿಗೆ ಬೇಕಾದಾಗ ತೆಗೆದುಕೊಳ್ಳಬಹುದು, ಹಾಗೂ ಜಮಾ ಮಾಡಲುಬಹುದು ಏನಿದು ಸ್ಕೂಲ್ ಬ್ಯಾಂಕ್ ಆಫ್ ಜಿಪಿ, ಎನಿದರ ವಿಶೇಷ 1)ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ (ಖಃಉಕ) ಇದು ಹೊಳೆಮಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ಮಾತ್ರ ತೆರೆದ ಬ್ಯಾಂಕ್ ಆಗಿರುತ್ತದೆ.2) ಪ್ರತಿ ಶನಿವಾರ 9:00ಯಿಂದ 10 ಗಂಟೆಗೆ ಬ್ಯಾಂಕ್ ತಮ್ಮ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತದೆ. ಪ್ರತಿ ಶಾಲೆಯ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ಮತ್ತು ಹಣಕಾಸು ಮಂತ್ರಿ ರವರನ್ನು ಒಬ್ಬ ಬ್ಯಾಂಕರ್ ಒಬ್ಬ ಕ್ಯಾಷರ್ ರನ್ನಾಗಿ ನಿಯಮಿಸಿ ಬ್ಯಾಂಕ್ ವೈವಾಟಿನ ತರಬೇತಿ ನೀಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಖಃಉಕ ಬ್ಯಾಂಕಿನ ಜವಾಬ್ದಾರಿ ವಹಿಸಲಾಗಿದೆ.3) ಆಸಕ್ತ ಖಾತೆದಾರ ವಿದ್ಯಾರ್ಥಿಗಳು ಕನಿಷ್ಠ ಎರಡು ರೂಪಾಯಿಯಿಂದ ಗರಿಷ್ಠ 20 ರೂಪಾಯಿಯವರೆಗೆ ಉಳಿತಾಯ ಖಾತೆಯಲ್ಲಿ ಜಮೆ ಮಾಡಬಹುದು ಅಥವಾ ಖಾತೆಯಲ್ಲಿ ಜಮೆ ಇರುವ ಮೊತ್ತವನ್ನು ಪಡೆಯಬಹುದು.4) ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕ ಪಾಸ್ ಪುಸ್ತಕ ಒದಗಿಸಲಾಗಿದೆ.5) ವಾರ್ಷಿಕವಾಗಿ ಅತಿ ಹೆಚ್ಚು ಸಲ ವ್ಯವಹರಿಸಿದ/ ಹೆಚ್ಚು ಉಳಿತಾಯ ಮಾಡಿದ ಖಾತೆದಾರರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಾತ ಮಠಪತಿ ಗ್ರಾಮ ಪಂಚಾಯಿತಿ ಸದಸ್ಯರು ಮುಖ್ಯ ಉಪಾಧ್ಯಾಯರು ಅರಿವು ಕೇಂದ್ರದ ಮೇಲ್ವಿಚಾರಕರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 