ವಿದ್ಯಾರ್ಥಿಗಳಿಗೆ ವಚನ ಸ್ಪರ್ಧೆ, ನಿಬಂಧ ಸ್ಪರ್ಧೆ

ವಿದ್ಯಾರ್ಥಿಗಳಿಗೆ  ವಚನ ಸ್ಪರ್ಧೆ, ನಿಬಂಧ ಸ್ಪರ್ಧೆ  Essay competition for students

ಲೋಕದರ್ಶನ ವರದಿ 

ಹುಬ್ಬಳ್ಳಿ  05: ಹುಬ್ಬಳ್ಳಿಯ ಬಸವ ಕೇಂದ್ರವು ಬಸವ ಫೌಂಡೇಶನ್ದ ವತಿಯಿಂದ ಶಾಲಾ ಮಕ್ಕಳಲ್ಲಿ ಶರಣರ ವಚನಗಳಲ್ಲಿ ಆಸಕ್ತಿ ಹುಟ್ಟಿಸುವ ದೃಷ್ಟಿಯಿಂದ ಮತ್ತು ಅವರ ಚಿಂತನೆಗಳ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷವು ಪ್ರಾಥಮಿಕ, ಹಿರಿಯ ಪ್ರಾಥಮಿಕ, ಹಾಗೂ ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ  ವಚನ ಸ್ಪರ್ಧೆ, ನಿಬಂಧ ಸ್ಪರ್ಧೆಯನ್ನು ಏರಿ​‍್ಡಸಲಾಗಿತ್ತು. 

ಸ್ಪರ್ಧೆಯಲ್ಲಿ ವಿಜೇತರಾದವರ ವಿವರವನ್ನು ಬಸವ ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ನೀಡಿದ್ದಾರೆ.  1 ರಿಂದ 4 ನೇ ತರಗತಿಯ ವಿದ್ಯಾರ್ಥಿಗಳು ಶರಣರ ವಚನಗಳನ್ನು ಹೆಚ್ಚು ಹೆಚ್ಚು ಕಂಠಪಾಠ ಮಾಡಿ ಸ್ಪಷ್ಟವಾಗಿ ಹೇಳುವುದು ಹಾಗೂ ಹಾಡುವುದು. ಪ್ರಥಮ: ಭಾಗ್ಯಶ್ರೀ ಜಗದೀಶ ಬಾಳಿಕಾಯಿ, 3 ನೇ ಕ್ಲಾಸ್,   ಅಭಿನವ ಪ್ರಾಥಮಿಕ ಶಾಲೆ, ಶ್ರೀ ಶಾಂತಾಶ್ರಮ, ಅಭಿನವನಗರ, ಹಳೇಹುಬ್ಬಳ್ಳಿ. ದ್ವಿತೀಯ: ವಚನ ಶಿವಯೋಗಿ ಹಳ್ಳಾಳ, 4 ನೇ ಕ್ಲಾಸ್, ಪರಿವರ್ತನ ಗುರುಕುಲ ಹೆರಿಟೇಜ್, ಅಕ್ಷಯನಗರ ಹಾಗೂ ಬಸವತ್ರಿವಿಧ ರವಿ ಹುಲಿಕಂತಿಮಠ, 4 ನೇ ಕ್ಲಾಸ್, ಕೇಶವ ವಿದ್ಯಾಕೇಂದ್ರ, ರೇಣುಕಾನಗರ. ತೃತೀಯ: ಅಲಮುಜರಾ ನಧಾಫ್, 3 ನೇ ಕ್ಲಾಸ್, ಶ್ರೀ ಲಕ್ಷ್ಮಣರಾವ್ ಪೈಕೋಟಿ ಲ್ಯಾಮಿಂಗ್ಟನ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಹುಬ್ಬಳ್ಳಿ. 

ಸಮಾಧಾನಕರ: ಬ್ರಹ್ಮಿ ಅಂತಣ್ಣವರ, 2 ನೇ ಕ್ಲಾಸ್, ಚೇತನ ಪಬ್ಲಿಕ್ ಸ್ಕೂಲ್, ಅಕ್ಷಯನಗರ 5 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳು  ಹೆಚ್ಚು ಹೆಚ್ಚು ವಚನಗಳನ್ನು ಸ್ಪಷ್ಠವಾಗಿ ಹಾಡುವುದು, ಹೇಳುವುದರ ಜೊತೆಗೆ ಅವುಗಳ ಅರ್ಥವನ್ನು ಸಂಕ್ಷಿಪ್ತವಾಗಿ ವಿವರಿಸುವುದು.  ಪ್ರಥಮ: ಪರಿಣಿತಿ ನಂಜುಡ ಕಬ್ಬೂರ, 6 ನೇ ಕ್ಲಾಸ್, ಎನ್‌.ಎಲ್‌.ಇ ಸಂಸ್ಥೆಯ ರೋಟರಿ ಪಬ್ಲಿಕ್ ಸ್ಕೂಲ್,ಆದರ್ಶನಗರ. ದ್ವಿತೀಯ: ಐಶ್ವರ್ಯ ನಾಗರಾಜ ಗೊಡಚಿ, 5 ನೇ ಕ್ಲಾಸ್, ಚೇತನ್ ಪಬ್ಲಿಕ್ ಸ್ಕೂಲ್, ಅಕ್ಷಯನಗರ. ಹಾಗೂ ಅನ್ನಪೂರ್ಣ ಆನಂದ ಕರಿಗುಂಡಪ್ಪನವರ, 5 ನೇ ಕ್ಲಾಸ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥನಗರ. 

ತೃತೀಯ: ಸ್ನೇಹಾ ಕುಂದರಗಿ, 5 ನೇ ಕ್ಲಾಸ್, ಬಸವಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿ ಶಾಲೆ, ಮುರಾರ್ಜಿನಗರ. ಸಮಾಧಾನಕರ: ದರ್ಶನ ಹೂಗಾರ, 6 ನೇ ಕ್ಲಾಸ್, ಪರಿವರ್ತನಗುರುಕುಲಹೆರಿಟೇಜ್,ಅಕ್ಷಯನಗರ. 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ  ವಿಶ್ವಗುರು ಬಸವಣ್ಣನವರು ಕನಾ9ಟಕದ ಸಾಂಸ್ಖೃತಿಕ ನಾಯಕ ಎಂಬ ವಿಷಯದ ಕುರಿತು  ಪ್ರಬಂಧ ಸ್ಪರ್ಧೆಯನ್ನು ಏರಿ​‍್ಡಸಲಾಗಿದೆ. 

ಪ್ರಥಮ: ಮುನಜೀರಾ ರಫೀಕ್ ನಾಯ್ಕರ್, 9 ನೇ ಕ್ಲಾಸ್, ಶ್ರೀ ವಿಘ್ನೇಶ್ವರ ಹೈಸ್ಕೂಲ್, ದೇಶಪಾಂಡೆ ಬಡಾವಣೆ, ಹುಬ್ಬಳ್ಳಿ. ದ್ವಿತೀಯ: ನೇಹಾ ಲಿಂಗರಾಜ ರಾಮಾಪೂರ, 9 ನೇ ಕ್ಲಾಸ್,  ವಿಮಲಾ ಕುಲಕರ್ಣಿ ಮೆಮೊರಿಯಲ್ ಸ್ಕೂಲ್, ಹುಬ್ಬಳ್ಳಿ. ತೃತೀಯ: ಅಪೂರ್ವ ಎಂ. ತಡಸದ, 9 ನೇ ಕ್ಲಾಸ್,  ಪರಿವರ್ತನ ಗುರುಕುಲ ಹೆರಟೇಜ್, ಅಕ್ಷಯನಗರ. ಸಮಾಧಾನಕರ: ದೀಪಿಕಾ ಗು. ಹಿಂಡಿ, 10 ನೇ ಕ್ಲಾಸ್, ಆರ್‌.ಎನ್‌.ಎಸ್‌. ವಿದ್ಯಾನಿಕೇತನ, ವಾಸವಿನಗರ. ರವಿವಾರ 07.12.2025 ರಂದು ನಡೆಯುವ.  ವಿಶ್ವ ಬಸವ ಧಮ9 ಪ್ರವಚನದ ಮಂಗಲೋತ್ಸವ ಸಮಾರಂಭದಲ್ಲಿ   ಬಹುಮಾನ ನೀಡಿ ಗೌರವಿಸಲಾಗುವುದು ಎಂದು  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ತಿಳಿಸಿದ್ದಾರೆ.