ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ ತಾಲೂಕಾ ಹಂತದಲ್ಲಿ ಪ್ರಬಂಧ ಸ್ಪರ್ದೆ

ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ  ತಾಲೂಕಾ ಹಂತದಲ್ಲಿ ಪ್ರಬಂಧ ಸ್ಪರ್ದೆ Essay competition at taluka level as part of National Voting Day celebrations

 ಧಾರವಾಡ 16: ವ್ಯವಸ್ಥೆಯ ಭಾಗವಾಗಿ ಮತದಾನದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ತಳಹದಿಯನ್ನು ಬಲಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು. 

ಧಾರವಾಡ ಗ್ರಾಮೀಣ  ಬಿಆರ್‌ಸಿ ಕೇಂದ್ರದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ  ತಾಲೂಕಾ ಹಂತದಲ್ಲಿ ಪ್ರಬಂಧ ಸ್ಪರ್ದೆಯನ್ನು ಏರಿ​‍್ಡಸಲಾಗಿತ್ತು ಅವರು ಮಾತನಾಡುತ್ತಾ ಭಾರತದ ಪ್ರಜಾಪ್ರಭುತ್ವ, ಚುನಾವಣಾ ವ್ಯವಸ್ಥೆ ವಿಶ್ವಕ್ಕೇ ಮಾದರಿ. 1947ರ ಸ್ವಾತಂತ್ರ್ಯಾ ನಂತರ    ಭಾರತ ಅಳವಡಿಸಿಕೊಂಡಿರುವ ಚುನಾವಣಾ ವ್ಯವಸ್ಥೆಯನ್ನು ಇತರ ದೇಶಗಳು ಅಳವಡಿಸಿಕೊಂಡರೆ. ಭಾರತಕ್ಕಿಂತ ಮುಂಚೆ ಸ್ವಾತಂತ್ರ್ಯ ಪಡೆದ ರಾಷ್ಟ್ರಗಳು ಕೂಡ ಭಾರತವನ್ನು ಮಾದರಿಯಾಗಿ ಸ್ವೀಕರಿಸಲು ಮುಂದಾಗಿರುವುದು ಹೆಮ್ಮೆಯ ವಿಷಯ ಎಂದರು. 

ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ. ಎಫ್ ಮಾತನಾಡುತ್ತಾ ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಮಾನವ ಶ್ರಮ, ಸಲಕರಣೆಗಳು, ಭದ್ರತೆ ಒದಗಿಸುವುದು ವಿಶ್ವದ ಅತಿ ದೊಡ್ಡ ಘಟನಾವಳಿಗಳಲ್ಲಿ ಒಂದು. ನೆರೆಯ ರಾಷ್ಟ್ರಗಳಲ್ಲಿ ಮಿಲಿಟರಿ ಆಡಳಿತ, ಬಲವಂತದ ಹಸ್ತಾಂತರವನ್ನು ಕಾಣಬಹುದು. ಆದರೆ ಭಾರತದಲ್ಲಿ ಆಡಳಿತ ಚುಕ್ಕಾಣಿ ಸುಗಮವಾಗಿ ಹಸ್ತಾಂತರಗೊಳ್ಳುತ್ತದೆ. ಆಡಳಿತ ಹಸ್ತಾಂತರವನ್ನು ಪ್ರಶ್ನಿಸುವ ಪ್ರಮೇಯವೇ ಬರುವುದಿಲ್ಲ. ಪ್ರಜಾಪ್ರಭುತ್ವದ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದೆ ಎಂದು ಅಭಿಪ್ರಾಯಪಟ್ಟರು. 

ಯಾಕೆ ಈ ಸ್ಪರ್ಧೆ? 

ಮತದಾನದ ಮಹತ್ವ, ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು. ಮತದಾನ ಹಕ್ಕು ಒಂದು ಹಕ್ಕು ಮಾತ್ರವಲ್ಲ, ಒಂದು ಜವಾಬ್ದಾರಿಯೂ ಎಂದು ತಿಳಿಸುವುದು.ಯುವಕರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.