ಮಕ್ಕಳಗೆ ಕನ್ನಡ ಶಿಕ್ಷಣದ ಜೊತೆಗೆ ಆಂಗ್ಲ ಭಾಷಾ ಶಿಕ್ಷಣ- ಶಾಸಕ ಪ್ರಕಾಶ ಕೋಳಿವಾಡ
English language education along with Kannada education for children- MLA Prakash Koliwada
ಮಕ್ಕಳಗೆ ಕನ್ನಡ ಶಿಕ್ಷಣದ ಜೊತೆಗೆ ಆಂಗ್ಲ ಭಾಷಾ ಶಿಕ್ಷಣ- ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು 31: ಇಂದಿನ ಮಕ್ಕಳಲ್ಲಿ ಕನ್ನಡ ಭಾಷಾ ಶಿಕ್ಷಣದ ಜೊತೆಗೆ ಆಂಗ್ಲ ಭಾಷಾ ಮಾಧ್ಯಮ ಶಿಕ್ಷಣವು ಸಹ ಅಗತ್ಯವಿದೆ ಆ ನಿಟ್ಟಿನಲ್ಲಿ ಸರ್ಕಾರ ಬಹು ಚಿಂತನೆ ನಡೆಸಿ, ಕನ್ನಡ ಪಾಠ ಜೊತೆಗೆ ಆಂಗ್ಲ ಭಾಷಾ ಮಾಧ್ಯಮ ಶಿಕ್ಷಣವು ಸಹ ದೊರಕಿಸಲು ಮುಂದಾಗಿದೆಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು, ಸೋಮವಾರ ನಗರಸಭಾಕ್ರೀಡಾಂಗಣದಆವರಣದಲ್ಲಿರುವ, ಸರ್ಕಾರಿ ಶಾಲಾ ನಂ- 7 ರಲ್ಲಿ ವಿಕಾಸ ಯೋಜನೆಅಡಿಯಲ್ಲಿಕೊಠಡಿ ನಿರ್ಮಾಣಕಾಮಗಾರಿಗುದ್ದಲಿ ಪೂಜೆ ಮತ್ತುಆಂಗ್ಲ ಮಾಧ್ಯಮ ಶಾಲೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆಇಂದು ಬಹುಭಾಷಾ ಶಿಕ್ಷಣ ಅಗತ್ಯವಿದ್ದು, ಸರ್ಕಾರಿ ಮತ್ತು ಖಾಸಗಿ ಎನ್ನುವಯಾವುದೇ ಭೇದಭಾವವಿಲ್ಲ ಆಂಗ್ಲ ಮಾಧ್ಯಮ ಶಾಲೆಗಳಠೆ ಇಲ್ಲಿಯೂ ಸಹ ಇಂಗ್ಲಿಷ್ ಮಾಧ್ಯಮಕಲಿಯಬಹುದು. ಸಮಗ್ರ ಶೈಕ್ಷಣಿಕ ಪ್ರಗತಿಗಾಗಿ ಮತ್ತು ಶಿಕ್ಷಣದ ಜೊತೆಜೊತೆಗೆ ವೃತ್ತಿಕೌಶಲ್ಯಕುರಿತಂತೆ ಅನೇಕ ಯೋಜನೆಗಳನ್ನು ತಮ್ಮ ಪಿಕೆಕೆ ಇನಿಶಿಯೇಟಿವ್ ಆಯೋಜಿಸಿದೆ.ಶಿಕ್ಷಣವಂತರು ಇದರ ಪ್ರಯೋಜನ ಪಡೆಯಲು ಮುಂದಾಗಬೇಕುಎಂದರು.ಎಸ್. ಡಿ.ಎಂ.ಸಿ.ಅಧ್ಯಕ್ಷಅಶೋಕ್ ಪಾಸಿಗಾರ್ ಅವರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರಅಡಿಗಅವರು, ತಾಲೂಕಿನಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿಕ್ರಾಂತಿಯ ಪರ್ವಆರಂಭವಾಗಿದ್ದು, ಆ ನಿಟ್ಟಿನಲ್ಲಿ ಶಾಸಕರುಎಲ್ಲರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ. ಮಕ್ಕಳು ಅತ್ಯಂತ ಸಂತೋಷದಿಂದತಮ್ಮ ಶಿಕ್ಷಣ ಪೂರೈಸಲು ಹಲವು ಶಾಲೆಗಳಲ್ಲಿ ಸ್ಮಾರ್ಟ್ಸ ಕ್ಲಾಸಗಳನ್ನು ಸಹ ಆರಂಭಿಸಲು ಮುಂದಾಗಿದ್ದುಅತ್ಯಂತ ಸಂತೋಷದ ಸಂಗತಿಯಾಗಿದೆಎಂದರು.
ಕಾರ್ಯಕ್ರಮದಲ್ಲಿ ಸಿ ಆರ್‌ಸಿ ಮಂಜು ನಾಯಕ್, ಗಂಗಪ್ಪ ನಾಯಕ್, ದಾಸೋಹದ ಸಹಾಯಕ ನಿರ್ದೇಶಕ, ಬಸವರಾಜ್‌ಅಡವೇರ್, ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ್, ಶ್ರೀಮತಿ ನಶ್ರೀನ್ ಬಾನು, ಸಿ ಆರ್ ಪಿ ಬಸವರಾಜ್‌ಕುಸ್ನೂರ, ಮರಿಯಪ್ಪ ಪೂಜಾರ್, ಶಾಲಾ ಸಮಿತಿ ಸದಸ್ಯರಾದ ಹೇಮಯ್ಯ ಕಾಕೋಳ. ಕುಬೇರ್ಪಕೊಂಡಜ್ಜಿ, ಆನಂದ್ ಹುಲಬನ್ನಿ , ಬಸವರಾಜ್ ಕಂಬಳಿ. ಕೃಷ್ಣಪ್ಪಕುರುವತ್ತಿ, ನಾಗಣ್ಣ ಮಾಕನೂರ, ಶಿಕ್ಷಕರಾದ ಆರ್ ಬಸಮ್ಮ, ಮಂಜುಳಾ ಚಕ್ರಸಾಲಿ, ವೈ. ಎಸ್.ಪಟೇಲ್, ಜಿ. ಹೆಚ್.ಮಳಗಿಮನಿ, ಪರಸಪ್ಪ ಹುಲ್ಲತ್ತಿ, ಶಿಲ್ಪಾ ಚಕ್ರಸಾಲಿ, ಮಂಗಳಾ ಕುದರಿಹಾಳ, ಸುಮಂಗಲಾ ಕೆಂಚರೆಡ್ಡೇರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು.ಪ್ರಧಾನಗುರುಜೆ.ಜಿ.ಗವೇನವರ್. ಸ್ವಾಗತಿಸಿ, ಶಿಕ್ಷಕ ಸುಧೀಂದ್ರ ನಿರೂಪಿಸಿ, ಶಿಕ್ಷಕಿ ಬಿ, ಶೋಭಾ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 