ಕಲಾವಂತಿಕೆಗೆ ಪ್ರೋತ್ಸಾಹ ಇಂದಿನ ಅಗತ್ಯ: ಫಯ್ಯಾಜು್ ಖಾನ್
Encouraging artistry is the need of the hour: Fayaz Khan
ಧಾರವಾಡ 12: ಯಾವುದೇ ವಯಸ್ಸಿನ ಕಲಾವಿದರಿರಲಿ, ಅದು ಹಿರಿಯರೆ ಆಗಿರಬಹುದು ಅಥವಾ ಯುವಪೀಳಿಗೆಯೆ ಇರಬಹುದು ಅವರು ಪ್ರಸ್ತುತಪಡಿಸುವ ಕಲಾವಂತಿಕೆಗೆ ಪ್ರೋತ್ಸಾಹ ನೀಡುವದು ಇಂದಿನ ಮೊದಲ ಅಗತ್ಯವಾಗಿದೆ ಎಂದು ಹಿರಿಯ ಗಾಯಕ ಉ. ಫಯ್ಯಾಜು್ ಖಾನ್ ಅಭಿಪ್ರಾಯಪಟ್ಟರು.
ತೇಜಸ್ವಿನಗರದ ಶ್ರೀಕೃಷ್ಣ ಅಂಬೇಕರ ಅವರ ಮನೆಯಲ್ಲಿ ತಬಲಾ ವಾದಕ ಆನಂದ ಅಂಬೇಕರ ಅವರ 12ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ನೆನಪು’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ‘ಹಿಂದಿನ ದಿನಗಳಲ್ಲಿ ಕಲಾವಿದ ಪ್ರಸ್ತುತಪಡಿಸಿದ ಕುಸುರಿ ಕಲೆಗಳನ್ನು ಮೆಚ್ಚಿಕೊಂಡು ‘ವ್ಹಾ.. ಕ್ಯಾ ಬಾತ್ ಹೈ..’ ಎಂದು ಪ್ರೋತ್ಸಾಹ ನೀಡುತ್ತಿದ್ದರು. ಅದು ಕಲಾಕಾರರಿಗೆ ಖುಷಿ ನೀಡುತ್ತಿತ್ತು... ಅದು ಇಂದಿನ ದಿನಗಳಲ್ಲಿ ಕಾಣುತ್ತಿಲ್ಲ.. ಹಾಗಾಗಿ ಕಲಾಪ್ರೋತ್ಸಾಹ ತೋರುವದು ಇಂದಿನ ಅಗತ್ಯವಾಗಿದೆ’ ಎಂದು ಹೇಳಿದರು.
ಉ. ಫಯ್ಯಾಜು್ ಖಾನ ಅವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಗಾಯನ, ಸಾರಂಗಿ ವಾದನ, ತಬಲಾ ವಾದನ, ಹಾರ್ಮೋನಿಯಂ ವಾದನಗಳಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದವರು. ‘ಗುಣಿರಂಗ’ ಕಾವ್ಯನಾಮದೊಂದಿಗೆ ಸಾವಿರಾರು ಅರ್ಥಪೂರ್ಣ ಬಂದಿಶ್‌ಗಳನ್ನು ರಚಿಸಿದ್ದಾರೆ. ಇಂಥ ಫಯ್ಯಾಜು್ ಖಾನ್ ಅಂದು ತಮ್ಮ ಗಾಯನಕ್ಕೆ ರಾಗೇಶ್ರೀ ರಾಗದೊಂದಿಗೆ ಮುನ್ನುಡಿ ಬರೆದರು. ವಿಲಂಬಿತ್-ರೂಪಕ್‌ತಾಲ್‌ನಲ್ಲಿ ‘ಜಾರೇ ಪತಂಗಾ ಮೋರೆ ಪಿಯಾ ಕೆ...’ ಹಾಗೂ ಧೃತ್-ತೀನತಾಲ್‌ನಲ್ಲಿ ಸಾದರಪಡಿಸಿದ ‘ಜಿಯಾ ಮೋರಾ ರಟನ ಲಾಗಿ...’ ಮನಮೋಹಕವಾಗಿ ಮೂಡಿಬಂದವು. ನಂತರ ಮೂಡಿಬಂದ ಜೋಗ್ ರಾಗದಲ್ಲಿ ತಾವೇ ಬರೆದಂಥ ‘ಯೇ ಜಗ ತೇರಿ ರಚನಾ...’ ಬಂದಿಶ್‌ನ ಛೋಟಾಖ್ಯಾಲ್ ನೆರೆದ ಶ್ರೋತೃಗಳ ಹೃನ್ಮನ ಸೆಳೆಯಿತು. ಲಾಲಿತ್ಯಪೂರ್ಣ ಸ್ವರಗಳಿಂದ ಹೆಣೆದು ಪ್ರಸ್ತುತಗೊಂಡ ‘ಸಯ್ಯಾ ಲೇಗಯೆ ಚುರಾಕೆ...’ ಠುಮರಿಯಂತೂ ಪ್ರಿಯತಮೆಯ ವಿರಹ ವೇದನೆಯ ಭಾವಾಭಿವ್ಯಕ್ತಿಯು ಕೇಳುಗರ ಹೃದಯ ತಟ್ಟಿತು. ನಂತರ ಗೋಪಾಲದಾಸರ ‘ಏನು ಬೇಡಲಿ ನಿನ್ನ..’ ಹಾಗೂ ಪುರಂದರದಾಸರ ಏನು ಸವಿಯೋ ನಿನ್ನ ಕೊಳಲು..’ ಪದಗಳಂತೂ ಭಕ್ತಿಸಾಗರದಲ್ಲಿ ತೇಲಿಸಿದವು. ಇವರಿಗೆ ಗುರುರಾಜ ಹೆಗಡೆ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ್ ಸಂವಾದಿನಿ ಸಂಗತ್ ಮಾಡಿದರು. ಮಹೇಶ ಹಾಗೂ ಕೋಮಲ್ ನಾಡಿಗೇರ ತಾನಪುರಾ ಸಾತ್ ನೀಡಿದರು.
ಆರಂಭದಲ್ಲಿ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಶಿಷ್ಯೆ ಶ್ರೀಲತಾ ಗುರುರಾಜ ಹೆಗಡೆ ಅವರು ಯಮನ್ ರಾಗದಲ್ಲಿ ‘ದರಸನ ದೇ ಗಣರಾಜ ಗಜಾನನ...’ ಹಾಗೂ ಬಸವಣ್ಣನವರ ‘ಎನ್ನ ಕಾಯವಾ ದಂಡಿಗೆ..’ ವಚನಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. ನಂತರ ಯುವ ತಬಲಾ ಪ್ರತಿಭೆ, ಉ. ನಿಸ್ಸಾರ ಅಹ್ಮದ ಅವರ ಶಿಷ್ಯ ಯೋಗಾನಂದ ಭಟ್ಟ ಅವರು ತಬಲಾ ಸೋಲೋ ಪ್ರಸ್ತುತಪಡಿಸಿದರು. ತೀನ್‌ತಾಲ್‌ದಲ್ಲಿ ಪೇಶಕಾರ್, ಕಾಯದಾ, ಚಕ್ರಧಾರ್, ರೇಲಾ ಹಾಗೂ ವಿವಿಧ ದಿಗ್ಗಜ ಕಲಾಕಾರರ ಸುಪ್ರಸಿದ್ಧ ಗತ್‌ಗಳನ್ನು ಉತ್ತಮವಾಗಿ ನುಡಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಶಾಂತಾರಾಮ ಹೆಗಡೆ, ಉ. ನಿಸ್ಸಾರ್ ಅಹ್ಮದ, ಶುಭಾಂಗಿ ಜಾಧವ, ಬ್ರಿಗೆಡಿಯರ್ ಅರುಣ ಹೆಗಡೆ, ಕರ್ನಲ್ ಶೈಲೇಶ, ಮೇಜರ್ ಸ್ನೇಹಾ, ಗಣೇಶ ಭಾಗ್ವತ ಗುಂಡ್ಕಲ್, ರಾಮಕೃಷ್ಣ ಹೆಗಡೆ, ಮೇಜರ್ ಸುಮೇಧ ಅಂಬೇಕರ, ಬಂಧುಗಳು, ಸ್ನೇಹಿತರು ಉಪಸ್ಥಿತರಿದ್ದರು. ಡಾ. ಹರೀಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 