ಕೈಗಾದಲ್ಲಿ 1730 ಕರ್ನಾಟಕದವರಿಗೆ ಉದ್ಯೋಗ

ಕೈಗಾದಲ್ಲಿ 1730 ಕರ್ನಾಟಕದವರಿಗೆ ಉದ್ಯೋಗ  Employment for 1730 Karnataka residents in Kaiga

ಕೈಗಾದಲ್ಲಿ 1730 ಕರ್ನಾಟಕದವರಿಗೆ ಉದ್ಯೋಗ  

ಕಾರವಾರ 06: ಕೈಗಾ ಅಣುಸ್ಥಾವರದ ಎಲ್ಲಾ ಘಟಗಳಲ್ಲಿ 1730 ಕರ್ನಾಟಕದವರಿಗೆ ಉದ್ಯೋಗ ನೀಡಲಾಗಿದೆ ಎಂದುಕೈಗಾ ಅಣುಸ್ಥಾವರ ಕೇಂದ್ರದ ನಿರ್ದೇಶಕ ಬಿ.ವಿನೋದ್ ಕುಮಾರ್ ಹೇಳಿದರು.ಕೈಗಾದಲ್ಲಿ ಅವರು ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು.ಕೈಗಾ ಅಣುಸ್ಥಾವರದ ಎಲ್ಲಾ ಯುನಿಟ್ ಗಳಲ್ಲಿನ ಎ.ಬಿ.ಸಿ. ಗ್ರೇಡ್ ಹುದ್ದೆಗಳಲ್ಲಿ 2057 ಜನ ನೌಕರಿ ಮಾಡುತ್ತಿದ್ದಾರೆ. ಇದರಲ್ಲಿ ಕರ್ನಾಟಕದವರ ಸಂಖ್ಯೆ 1730 ದಷ್ಟಿದೆ. ಶೇ.84.54 ರಷ್ಟು ಕನ್ನಡಿಗರು ಉದ್ಯೋಗಸ್ಥರಾಗಿದ್ದಾರೆ ಎಂಬ ಅಂಕಿ ಸಂಖ್ಯೆ ಮುಂದಿಡುವ ಮೂಲಕ ಕೈಗಾದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತ್ಯುತ್ತರ ನೀಡಿದರು .ಕೈಗಾ ಅಣುಸ್ಥಾವರ 16 ಕಿಮೀ ಒಳಗಿನ ಝೆನ್ ನಲ್ಲಿನ ನಿವಾಸಿಗಳ ಉದ್ಯೋಸ್ಥರ ಸಂಖ್ಯೆ ( ಇದರಲ್ಲಿ ಕೈಗಾ ಸ್ಥಾವರಕ್ಕೆ ಭೂಮಿ ನೀಡಿದವರು ಸೇರಿ) 1058 ಜನ . ಸ್ಥಾವರದ ಹೊರಗೆ ಅಂದರೆ, 16 ಕಿ.ಮೀ. ಆಚೆಗಿನ ವಾಸಿಗಳಲ್ಲಿ 138 ಜನ ಉದ್ಯೋಗ ಪಡೆದಿದ್ದಾರೆ, ಘಟಕ ಒಂದರಿಂದ ನಾಲ್ಕರಲ್ಲಿ 83 ಜನ, ಘಟಕ ಐದು ಮತ್ತು ಆರಲ್ಲಿ 55 ಜನ ನೌಕರಿ ಪಡೆದಿದ್ದಾರೆ ಎಂದು ಕೈಗಾ ಸ್ಥಾವರದ ಕೇಂದ್ರ ನಿರ್ದೇಶಕ ವಿನೋದ್ ಕುಮಾರ್ ವಿವರಿಸಿದರುಉತ್ತರ ಕನ್ನಡ ಹೊರತು ಪಡಿಸಿ ಕರ್ನಾಟಕದ ಇತರೆ ಜಿಲ್ಲೆಗಳಿಂದ ಬಂದ 138 ಜನ ಉನ್ನತ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರೆ, ದೇಶದ ವಿವಿಧ ರಾಜ್ಯಗಳಿಂದ ಬಂದ 318 ಜನ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ನೌಕರಿ ಹೊಂದಿದ್ದಾರೆ. ಕೈಗಾ ಅಣುವಿದ್ಯುತ್ ಸ್ಥಾವರ 5 ಮತ್ತು 6 ನಿರ್ಮಾಣ ಕಾರ್ಯದಲ್ಲಿ 9 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದರು. ಈ ವೇಳೆ ಕೈಗಾ ಘಟಕಗಳ ಅಧಿಕಾರಿಗಳಾದ ಎಸ್‌.ಕೆ.ಓಝಾ, ಟಿ.ಎಲ್‌.ಸಿಂಗ್ ,ಮೋಹನ್ ರಾಂ,ಕೆ.ಚಿತ್ತರಂಜನ್, ಎಂಜಿನಿಯರ್ ಕೆ.ಶ್ರೀರಾಮ್ , ಹೇಮಂತ, ಆಲ್ಡ್ರಿನ್ ಡಿಸೋಜಾ ಇದ್ದರು.