ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿರವರಿಗೆ ಭಾವಪೂರ್ಣ ಶ್ರದ್ಧಾಂಜಲಿ
Emotional tributes to senior IAS officer Mahantesh Bilagi
ಹುಬ್ಬಳ್ಳಿ 29: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ಲಿಂಗೈಕ್ಯರಾಗಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಮಹಾನ್ದಿವ್ಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಹೆಸರು ಕರ್ನಾಟಕದಲ್ಲಿ ಚಿರಪರಿಚಿತವಾದದ್ದು. ಈಗಿನ ಕಾಲದಲ್ಲಿ ನಿಷ್ಠಾವಂತ ಅಧಿಕಾರಿಗಳು ಸಿಗುವುದು ಬಹಳ ಅಪರೂಪ. ಪ್ರಾಮಾಣಿಕ, ಸಮಾಜಮುಖಿ ಚಿಂತನೆವುಳ್ಳ ಬೆರಳೆಣೆಕೆಯಷ್ಟು ಸಿಗುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಬೀಳಗಿ ಸಾಹೇಬರು ಇಷ್ಟುಬೇಗ ಹೋಗಿರುವುದು ಅತ್ಯಂತ ಖೇದಕರ ಸಂಗತಿ. ಯುವ ಸಮುದಾಯಕ್ಕೆ ಸದಾ ಸ್ಪೂರ್ತಿ ತುಂಬುತ್ತಿದ್ದ, ಮಾನಸಿಕವಾಗಿ ಯುವಕರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೋಳಿಸುವ ಅಪರೂಪದ ಕ್ರೀಯಾಶೀಲ, ನಗುಮೊಗದ, ವಿಭೂತಿ ಧರಿಸಿಸಂಸ್ಕಾರ, ಸಂಸ್ಖೃತಿಯ ಪ್ರತೀಕದಂತಿದ್ದಬೀಳಗಿ ಸಾಹೇಬರದುರಂತ ಸಾವು ಬಹಳಷ್ಟುಜನರಿಗೆ ಅದರಲ್ಲೂ ಯುವಕರಿಗೆ ಅರಗಿಸಿಕೊಳ್ಳಲು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಅವರ ಸಮಾಜ ಮುಖಿಕೆಲಸಗಳು ಒಬ್ಬಅಧಿಕಾರಿಯಾಗಿ ಮಾಡುತ್ತಿರುವುದನ್ನು ನಿರಂತರವಾಗಿ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿರುವನನಗೆ ಅವರಅಗಲಿಕೆ ತುಂಬಾ ನೋವುಂಟು ಮಾಡಿದೆ.
ಧಾರವಾಡ ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ, ಬೀದರ್ಜಿಲ್ಲೆಯ ಜಿಲ್ಲಾಪಂಚಾಯತ್ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆಸಲ್ಲಿಸಿದ್ದರು. ಅತ್ಯಂತ ಬಡಕುಟುಂಬದಿಂದ ಬಂದು ಛಲಮತ್ತು ಧೈರ್ಯದೊಂದಿಗೆ ನಾಗರಿಕಸೇವೆ ಪರೀಕ್ಷೆಗಳಲ್ಲಿ ಅತ್ಯಂತಉನ್ನತಿಯನ್ನು ಸಾಧಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು. ತಮ್ಮಸರಳ ಹಾಗೂ ಸಜ್ಜನ ಜೀವನಶೈಲಿಯಿಂದ ಒಳ್ಳೆಯ ಅಧಿಕಾರಿಯಾಗಿ ಹಾಗೂ ಉತ್ತಮ ಮನುಷ್ಯನಾಗಿ ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ದೇವರು ಅವರ ಕುಟುಂಬಕ್ಕೆ ಈ ಘಟನೆಯಿಂದ ಆದ ದುಃಖಭರಿಸುವ ಶಕ್ತಿನೀಡಲಿ ಎಂದು ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ ಅವರು ತೀವ್ರಸಂತಾಪ ವ್ಯಕ್ತಪಡಿಸಿದ್ದಾರೆ.
ಡಾ. ಎಸ್.ಪಿ.ಬಳಿಗಾರ, ಡಾ.ವಿ.ಬಿ.ನಿಟಾಲಿ, ಡಾ. ಲಿಂಗರಾಜಡಿ. ಹೊರಕೇರಿ ಪ್ರೊಎಸ್.ಎಂ.ಸಾತ್ಮಾರ, ಡಾ. ಮಹೇಶಡಿ. ಹೊರಕೇರಿ ಪ್ರೊಎಸ್.ವಿ.ಪಟ್ಟಣಶೆಟ್ಟಿ, ಡಾ. ಸರ್ವಮಂಗಳಾ ಕುದರಿ, ಶಾಂತಪ್ಪವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ, ಬಸವರಾಜಡಿ. ಅಳ್ಳಗಿ, ರವೀಂದ್ರಬಳಿಗಾರ, ಡಾ.ಪ್ರಕಾಶಮುನ್ನೋಳಿ, ಸಿದ್ದಯ್ಯಹಿರೇಮಠ, ಮೃತ್ಯುಂಜಯಮಟ್ಟಿ, ಚನಬಸಪ್ಪ ಧಾರವಾಡ ಶೆಟ್ಟರ,ಎಸ್.ಐ.ನೇಕಾರ, ಶಿವಯೋಗಿಮುಗಬಸ್ತ, ಸುನಂದಾಮುಗಭಸ್ತ, ಎಂಟಿ.ರಾಥೋಡ, ಸುಭಾಸಚವ್ಹಾಣ, ಡಾ. ವಂದನಾಕರಾಳೆ, ಪ್ರೊಎಸ್.ಆರ್.ಆಶಿ, ವೀರಣ್ಣಹೂಲಿ, ಭಾರತಿವಾಲಿ,ಪ್ರೊಶೋಭಾಜಾಬಿನ, ಡಾ. ನೇತ್ರಾವತಿಗಬ್ಬೂರ, ಡಾ. ಬಸವಕುಮಾರ ತಲವಾಯಿ ಅವರುತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಮಹಾನ್ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 