ಹಕ್ಕುಪತ್ರ ವಿತರಣಾ ಸಮಾರಂಭಕ್ಕೆ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಬರಬೇಕು : ಶಾಸಕ ಪಠಾಣ

ಹಕ್ಕುಪತ್ರ ವಿತರಣಾ ಸಮಾರಂಭಕ್ಕೆ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಬರಬೇಕು : ಶಾಸಕ ಪಠಾಣ Eligible beneficiaries must attend the title deed distribution ceremony: MLA Pathana

ಶಿಗ್ಗಾವಿ  08: ಶಿಗ್ಗಾವಿ-ಸವಣೂರ ತಾಲೂಕಿನ ಅರ್ಹ ಫಲಾನುಭವಿಗಳನ್ನು ಕಡ್ಡಾಯವಾಗಿ ಫೆ.14 ರಂದು ಹಾವೇರಿಯಲ್ಲಿ ನಡೆಯವ ಹಕ್ಕುಪತ್ರ ವಿತರಣಾ ಸಮಾರಂಭಕ್ಕೆ ಜವಾಬ್ದಾರಿ ಹೊತ್ತವರು ನೆಪವೊಡ್ಡಿ ಜಾರಿಕೊಳ್ಳುವಂತಿಲ್ಲ ಎಂದು ಕಂದಾಯ ನೀರೀಕ್ಷಕರು, ಗ್ರಾಮಲೆಕ್ಕಾಧಿಕಾರಿ, ಪಿಡಿಓಗಳಿಗೆ ಶಾಸಕ ಯಾಸೀರಖಾನ್ ಪಠಾಣ ಖಡಕ್ ಸೂಚನೆ ನೀಡಿದರು.  ಪಟ್ಟಣದ ಅಂಬೇಡ್ಕರ್ ಆಡಳಿತ ಭವನದಲ್ಲಿ ನಡೆದ ಕಂದಾಯ, ಪಂಚಾಯತ್ ರಾಜ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ ಅವರು ದಶಕಗಳಿಂದ ಅನಧಿಕೃತ ವಾಸವಾದ ಮನೆ ಆಸ್ತಿಯನ್ನು ಅವರ ಹೆಸರಿಗೆ ದಾಖಲಿಸುವ ಭೂಗ್ಯಾರಂಟಿ ಯೋಜನೆ ಸಿದ್ದರಾಮಯ್ಯನವರ ಸರಕಾರ ನೀಡಿದೆ ಅದರಲ್ಲಿ ಶಿಗ್ಗಾವಿ ಕ್ಷೇತ್ರದ 6 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾತ್ತಿದ್ದು ಫಲಾನುಭವಿಗಳ ಹಾಜರಾತಿ ಕಡ್ಡಾಯವಾಗಬೇಕು. ಮುಂಜಾಗೃತವಾಗಿ ಮಾಹಿತಿ ನೀಡಿ ಕರೆದುಕೊಂಡ ಬರಲು ನಿಯೋಜನೆಗೊಂಡವರು ನಿರ್ಲಕ್ಷ ಮಾಡಿದರೇ ವರ್ಗಾವಣೆ, ಸಸ್ಪೆಂಡ್ ಬಹುಮಾನ ಸಚಿವರು ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಲಕ್ಷಾಂತರ ಬೆಲೆ ಬಾಳುವ ಆಸ್ತಿ ಅವರ ಹೆಸರಿಗೆ ದಾಖಲಿಸಿರುವ ದಾಖಲೆಗಳನ್ನು ಫಲಾನುಭವಿಗಳ ಕೈಗೆ ನೀಡುವ ಶುಭ ಸಂದರ್ಭದಲ್ಲಿ ಫಲಾನುಭವಿಗಳು ಬರಬೇಕು. ಬರದಿದ್ದರೇ ಹಕ್ಕುಪತ್ರ ವಿತರಿಸಲ್ಲ ಇದನ್ನು ತಿಳಿಸಿ ಹೇಳಿ ಕರೆದುಕೊಂಡ ಬರಬೇಕು. ಈ ಯೋಜನೆಯಡಿ ಬಡವರ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನಮ್ಮಲ್ಲರ ಪುಣ್ಯ. ನಿರ್ಲಕ್ಷ ಮಾಡಬೇಡಿ.ಸಮಾರಂಭಕ್ಕೆ ಬರುವ ಜನರಿಗೆ ಸಾರಿಗೆ, ಊಟ, ಉಪಚಾರದ ವ್ಯವಸ್ಥೆ ಮಾಡಿದೆ. ಆದರೆ, ಜನರೇ ಬಾರದಿದ್ದರೇ ಅವರಿಗೆ ಮಾಹಿತಿ ನೀಡಿಲ್ಲಂತ. ಇದಕ್ಕೆ ಕಂದಾಯ ನೀರೀಕ್ಷಕರು, ಗ್ರಾಮಲೆಕ್ಕಾಧಿಕಾರಿ, ಪಿಡಿಒಗಳದ್ದೆ ತಪ್ಪು ಇದು ಸ್ಪಷ್ಟ ಎಂದು ತಿಳಿಸಿದ ಶಾಸಕ ಪಠಾಣ, ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಭಾಷಣ ಮುಗಿಯವರೆಗೂ ಶಿಗ್ಗಾವಿಯಿಂದ ಬಂದ ಜನರು ಇರುವಂತೆ ನೋಡೆಲ್ ಅಧಿಕಾರಿಗಳು ನೋಡಿಕೊಳ್ಳಬೇಕು. ಮಧ್ಯದಲ್ಲಿ ಎದ್ದು ಹೋಗದಂತೆ ನಿಗಾವಹಿಸಲು ಸಲಹೆ ನೀಡಿದರು.97 ಬಸ್‌ಗಳ ವ್ಯವಸ್ಥೆ ಮಾಡಿದೆ. ಬಸ್‌ಗೊಬ್ಬರಂತೆ ಅಷ್ಟೇ ಕರೆದುಕೊಂಡು ಹೋಗುವಂತಿಲ್ಲ. ಪ್ರತಿಯೊಂದು ಬಸ್‌ನಲ್ಲಿ ಕನಿಷ್ಠ 50 ಜನರಿರಬೇಕು.

ಖಾಲಿ ಬಸ್‌ಗಳು ಬಂದರೇ ಜವಾಬ್ದಾರಿ ಹೊತ್ತವರೇ ಹೊಣೆಗಾರರು. ಇದು ಸರಕಾರಿ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಸಹಕಾರ ಅಗತ್ಯವಾಗಿದೆ ಎಂದು ಪಠಾಣ ಹೇಳಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ತಪ್ಪು ಮಾಡುವ ಅಧಿಕಾರಿ, ರಾಜಕಾರಣಿಗಳನ್ನು ಪ್ರಶ್ನಿಸುವ ಎದೆಗಾರಿಕೆ ಶಿಗ್ಗಾವಿ ಕ್ಷೇತ್ರದಲ್ಲಿ ಆರಂಭವಾಗಿದೆ. ಲಂಚ ಪಡೆದು ಕೆಲಸ ಮಾಡುವ ಅಧಿಕಾರಿ ಹೆಸರು ಬಹಿರಂಗ ಹೇಳಲು ಮುಂದಾಗುತ್ತಿದ್ದಾರೆ. ಅಷ್ಟೇ ನಾನು ತಪ್ಪು ಮಾಡಿದರೂ ಎಲ್ಲಿ ನನ್ನ ಕಾರಿಗೆ ಕಲ್ಲು ಎಸೆಯತ್ತಾರೋ ಎಂಬ ಭಯ ನನಗೂ ಇದೆ. ನಾನಂತೂ ತಪ್ಪು ಮಾಡಲ್ಲ. ನೀವು ಮಾಡಬೇಡಿ. ನಾವು-ನೀವು ಸರಕಾರದ ಪ್ರತಿನಿಧಿಗಳಾಗಿ ಜನರ ಸೇವೆ ಮಾಡೋಣ ಎಂದು ಅಧಿಕಾರಿ, ಸಿಬ್ಬಂದಿಗಳಿಗೆ ಶಾಸಕ ಪಠಾಣ ಸಲಹೆ ನೀಡಿದರು. ಎಸಿ, ಶಿಗ್ಗಾವಿ-ಸವಣೂರ ತಹಸೀಲ್ದಾರ್, ತಾಪಂ.ಇಒ, ಪಿಡಿಓ, ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.