ವಿದ್ಯುತ್ ಅವಘಡ : ಸುಟ್ಟು ಕರಕಲವಾದ ಟಿವಿ, ಮೊಬೈಲ್ ಸೇರಿ ಎಲೆಕ್ಟ್ರಿಕಲ್
Electrical accident: TV, mobile phone and other electrical items burnt to ashes
ವಿದ್ಯುತ್ ಅವಘಡ : ಸುಟ್ಟು ಕರಕಲವಾದ ಟಿವಿ, ಮೊಬೈಲ್ ಸೇರಿ ಎಲೆಕ್ಟ್ರಿಕಲ್
ಕಂಪ್ಲಿ:ಮೇ.21. ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಟಿವಿ, ಮೊಬೈಲ್ ಸೇರಿದಂತೆ ವಿವಿಧ ಎಲೆಕ್ಟ್ರಿಕಲ್ ಸಾಮಾಗ್ರಿಗಳು ಸುಟ್ಟು ಕರಕಲವಾಗಿರುವ ಘಟಕ ಕಂಪ್ಲಿಯಲ್ಲಿ ಬುಧವಾರ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಕ್ವಾಟರ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಹಿನ್ನಲೆ ನಾನಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ. ರಾಮಣ್ಣ ವಾಸಿಸುವ ಮನೆಯಲ್ಲಿ ಟಿವಿ, ಮೊಬೈಲ್ ಸೇರಿದಂತೆ ಕೆಲ ಎಲೆಕ್ಟ್ರಿಕ್ ಉಪಕರಣಗಳು ಬ್ಲಾಸ್ಟ್ ಆಗಿವೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಹಿನ್ನಲೆ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆ ಬಳಿಕ ಸ್ಥಳದಲ್ಲಿದ್ದ ಯುವಕರು ತಕ್ಷಣ ಮನೆ ಬಾಗಿಲು ಒಡೆದು ಒಳಪ್ರವೇಶಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಸ್ಥಳಕ್ಕೆ ಕೆಇಬಿ ಸಿಬ್ಬಂದಿ ಹಾಗೂ ಗ್ಯಾಸ್ ಸಿಲಿಂಡರ್ ಇಲಾಖೆಯ ಅಧಿಕಾರಿಗಳು ಬಂದು ವಿದ್ಯುತ್ ಲೈನ್ ಹಾಗೂ ಗ್ಯಾಸ್ ಲೈನ್ ಅನ್ನು ನಿಷ್ಕ್ರಿಯಗೊಳಿಸಿ ಮತ್ತಷ್ಟು ಅನಾಹುತ ತಪ್ಪಿಸಿದ್ದಾರೆ. ಮೇ.03 ಮತ್ತು 03ಎ: ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಕ್ವಾಟರ್ಸ್‌ನಲ್ಲಿರುವ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಕರಕಲವಾದ ಎಲೆಕ್ಟ್ರಿಕಲ್ ಸಾಮಾಗ್ರಿಗಳು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 