ವಿದ್ಯುತ್ ಸ್ಪರ್ಶ : 7 ಎಮ್ಮೆಗಳು ಸ್ಥಳದಲ್ಲೇ ಸಾವು
Electric shock: 7 buffaloes die on the spot
ವಿದ್ಯುತ್ ಸ್ಪರ್ಶ : 7 ಎಮ್ಮೆಗಳು ಸ್ಥಳದಲ್ಲೇ ಸಾವು
ಕಾರವಾರ, 05 : ವಿದ್ಯುತ್ ತಂತಿ ತಗಲಿ ಏಳು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿ ಕಿನ್ನರ ಸಮೀಪದ ಗದ್ದೆಯ ಬಳಿ ನಡೆದಿದೆ. ಸುರೇಖಾ ಫಡ್ನೇಕರ್ ಎಂಬುವವರಿಗೆ ಸೇರಿದ ಎರಡು ಕೋಣ ಹಾಗೂ ಐದು ಎಮ್ಮೆ ಸೇರಿ ಒಟ್ಟು 7 ಜಾನುವಾರುಗಳು ಸಾವನ್ನಪ್ಪಿದೆ. ಸುರೇಖಾ ಫಡ್ನೇಕರ್ ಅವರು ಮಂಗಳವಾರ ತಮ್ಮ ಎಮ್ಮೆಗಳನ್ನು ಮೇಯುವುದಕ್ಕಾಗಿ ಗದ್ದೆಗೆ ಬಿಟ್ಟಿದ್ದರು . ಈ ಎಮ್ಮೆಗಳು ಗದ್ದೆಯಲ್ಲಿ ಮೇಯುತ್ತಿದ್ದ ವೇಳೆ, ಅಲ್ಲೆ ಇದ್ದ ವಿದ್ಯುತ್ ತಂತಿ ತಗುಲಿ , ಎಲ್ಲಾ ಏಳು ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿದೆ.
ಈ ಬಗ್ಗೆ ಸುರೇಖಾ ಅವರು ದೂರು ದಾಖಲಿಸಿದ್ದಾರೆ. ಭತ್ತದ ಗದ್ದೆಗೆ ತಂತಿ ಬೇಲಿ ಹಾಕಿ ವಿದ್ಯುತ್ ಹರಿಸಿದ್ದ ಮಾಲಕನನ್ನು ಗ್ರಾಮೀಣ ಪೋಲೀಸರು, ಪ್ರಕರಣ ದಾಖಲಿದ ನಂತರ ಬಂಧಿಸಿ, ಸ್ಟೆಶನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಎಮ್ಮೆಗಳ ಸಂಸ್ಕಾರ ಮಾಡಲು ಹಣದ ಕೊರತೆ ಇದೆ ಎಂದು ಕಿನ್ನರ ಗ್ರಾಮ ಪಂಚಾಯತಿ ಹಿಂದೇಟು ಹಾಕಿದ ಘಟನೆ ಸಹ ನಡೆದಿದೆ.....
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 