ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ
Election of office bearers of Dalit Sangharsh Samiti
ಜಮಖಂಡಿ 06: ನಗರದ ರಮಾ ನಿವಾಸ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ಜಮಖಂಡಿ ತಾಲೂಕ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶಾಮರಾವ ಘಾಟಗೆ ಮಾತನಾಡಿ, ರಾಜ್ಯದಲ್ಲಿ ಮತ್ತು ದೇಶದಲ್ಲಿ ಜಾತೀಯ ತಾರತಮ್ಯ ಹಾಗೂ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಹುಬ್ಬಳ್ಳಿ ಇನಾಂ ವೀರಾಪುರ್ ಗ್ರಾಮದ ಮರ್ಯಾದೆ ಹತ್ಯೆಯೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದರು.
ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ ಮಾತನಾಡಿ, ಜಿಲ್ಲೆಯಲ್ಲಿ ಸಂಘಟನೆಯನ್ನು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟ ವರ್ಗದವರನ್ನು ಸೇರಿಸಿಕೊಂಡು ಸಂಘಟನೆಯನ್ನು ಬಲಿಷ್ಠ ಗೊಳಿಸುವದಾಗಿ ಎಂದರು.
ತಾಲೂಕ ಹಿಂದುಳಿದ ವರ್ಗದ ಸಂಚಾಲಕರಾಗಿ ನಾಗಪ್ಪ ಹೆಗಡೆ, ಪರಿಶಿಷ್ಟ ವರ್ಗದ ಸಂಚಾಲಕ ಪರಶುರಾಮ ನಾಟಿಕಾರ, ಸಂಚಾಲಕ ಪರಶುರಾಮ ಮಾಂಗ, ಅಲ್ಪಸಂಖ್ಯಾತರ ಘಟಕದ ಸಂಚಾಲಕ ನದೀಮ್ ಗೋಟೆವರ ಅವರನ್ನು ಆಯ್ಕೆ ಮಾಡಿದರು.
ಸಂಘಟನಾ ಸಂಚಾಲಕ ಸದಾಶಿವ ಕಾಂಬಳೆ, ಅನಿಲ ಭಜಂತ್ರಿ, ಸುನೀಲ ಘಾಟಗೆ, ಪುಂಡಲಿಕ ಮಾದರ, ರಮೇಶ ಪೂಜಾರಿ, ಖಜಾಂಚಿ ಬರಮಣ್ಣ ದಡ್ಡಿಮನಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ರಾಜು ಮೇತ್ರಿ, ಯಮನಪ್ಪ ಲಿಂಗನೂರು, ಬಸು ಬುದ್ನಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ ಹರಿಜನ, ಚಂದ್ರು ಹರಿಜನ, ಅರುಣ ಲಗಳಿ, ಮುಬಾರಕ ಗೋಟ,ೆ ರಾಜು ಲೋಕಂಡೆ, ಸುನೀಲ ಘಾಟಗೆ ಇದ್ದರು,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 