ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

Election of Milk Producers Co-operative Society

ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ  

ಬ್ಯಾಡಗಿ 05: ತಾಲೂಕಿನ  ಕುಮ್ಮೂರ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ ಜರುಗಿ ಕಾಂಗ್ರೇಸ್ ಬೆಂಬಲಿತಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಮಾಲತೇಶ ಫಕ್ಕಿರ​‍್ಪ ದೊಡ್ಡಮ್ಮನವರ  ಅಧ್ಯಕ್ಷರಾಗಿ ಹಾಗೂ ಜಗದೀಶ ಮಟ್ಟಿಮನಿ  ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಹಕಾರಿ ಹಾಲು ಉತ್ಪಾದಕ ಸಂಘದ ನಿರ್ದೇಶಕರಾದ ರವಿ ಬ್ಯಾಡಗಿ. ಮಾರುತಿ ಕಾಳಪ್ಪನವರ. ಬಸವಣ್ಣಪ್ಪ ದೊಡ್ಡಮ್ಮನವರ, ಶುಭಾಸಪ್ಪ ಮಣ್ಣಪ್ಪನವರ, ಅಶೋಕ ಹಿರೇಹಳ್ಳಿ, ವೀರಭದ್ರಗೌಡ ಪಾಟೀಲ, ಹರೀಶ ಬಾರಂಗಿಯವರ, ಬಸಪ್ಪ ಮಟ್ಟಿಮನಿ. ಹನುಮಂತ ಬನ್ನಿಹಟ್ಟಿ. ಬಾಬಪ್ಪ ದಾಸರ, ಶೇಖಪ್ಪ ಸರವಂದ ಇದ್ದರು.