ಬೆಳಗಲಿ ಬಿವಿವಿಎಸ್ ಪ್ರೌಢ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಗಾರ
Educational workshop at Belagali BVVS High School
ರನ್ನ ಬೆಳಗಲಿ 02: ರನ್ನ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಇವರ ಆದೇಶದಂತೆ ಫಲಿತಾಂಶ ವೃದ್ಧಿಗಾಗಿ ಒಂದು ದಿನದ ಶೈಕ್ಷಣಿಕ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಾದ ಶಶಿಧರ್ ಕುರೇರ ಸಾಹೇಬರು ವರ್ಚುಯಲ್ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪರೀಕ್ಷೆ ಎಂದರೆ ಭಯ ಬೇಡ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಸರಿಯಾದ ವೇಳಾಪಟ್ಟಿ ಮತ್ತು ಏಕಾಗ್ರತೆಯಿಂದ ಅಧ್ಯಯನ ಮಾಡಲು ಸೂಚಿಸಿದರು. ಅಜಿತ್ ಮನ್ನಿಕೆರಿ ಮಾನ್ಯ ಉಪನಿರ್ದೇಶಕರು ಕೂಡ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಉಪನಿರ್ದೇಶಕರು ಸೂಚಿಸಿದಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಇಲಾಖೆಯ ವೆಬ್ಸೈಟ್ನಲ್ಲಿ ಹಾಕಿರುವ ಸ್ಟೂಡೆಂಟ್ ಕಾರ್ನರ್ 13 ಅಂಶಗಳು ಹಾಗೂ ಪ್ರಾಸ್ತಾವಿಕವಾಗಿ ಮುಖ್ಯೋಪಾಧ್ಯಾಯರಾದ ಎಂ ಎಸ್ ಗಾಣಿಗೇರ ಮಾತನಾಡಿದರು. ವಿಷಯ ಶಿಕ್ಷಕರು ತಮ್ಮ ತಮ್ಮ ವಿಷಯದ ನೀಲನಕಾಶೆ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಎನ್ ಬಿ ಸಾಬೋಜಿ ಗುರುಗಳು ಮಿಷನ್ 45 ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಗಳು ಹಾಗೂ ವಾರ್ಷಿಕ ಪರೀಕ್ಷೆಯ ವೇಳಾಪತ್ರಿಕೆಯನ್ನು ಮನೆಯಲ್ಲಿ ಓದುವ ವೇಳಾಪಟ್ಟಿಯನ್ನು ಮಕ್ಕಳಿಗೆ ತಿಳಿಸಿದರು. ಕಳೆದ ಶೈಕ್ಷಣಿಕ ಸಾಲಿನ ಸಾಧಕರ ಪರಿಚಯವನ್ನು ಮಾಡುತ್ತಾ ವಿದ್ಯಾರ್ಥಿಗಳಿಗೆ ಈ ವರ್ಷದ ಫಲಿತಾಂಶ ಉತ್ತಮಗೊಳಿಸಲು ಎಂ ಕೆ ಕುಲಗೋಡ ಸೂಚಿಸಿದರು.
ಎಸ್ ಎಸ್ ಎಲ್ ಸಿ ನಂತರ ಇರುವ ವಿವಿಧ ಕೋರ್ಸ್ಗಳ ಮಾಹಿತಿಯನ್ನು ನಾಯಕ ಗುರುಗಳು ನೀಡಿದರು. ಉತ್ತಮ ಫಲಿತಾಂಶ ಮಾಡುವುದಾಗಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿಯನ್ನು ಕೆ ಎ ಧಡುತಿ ಶಿಕ್ಷಕರು ಬೋಧಿಸಿದರು. ಶಿಕ್ಷಣವು ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಮೂಲ ಮಂತ್ರ ಹಾಗಾಗಿ ಶಿಕ್ಷಣ ಪಡೆಯಲು ಶಾಲೆಗೆ ಬರಲೇಬೇಕು, ಶಿಕ್ಷಣ ಪಡೆಯಲೇಬೇಕು ಎಂದು ಎಂ ಕೆ ಕುಲಗೋಡ ಗುರುಗಳು ಹೇಳಿದರು. ಹೆಚ್ ಎ ಕುಂಬಾರ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಎಂ ಎಸ್ ಗಾಣಿಗೇರ ವಹಿಸಿದ್ದರು. ಎನ್ ಬಿ ಸಾಬೋಜಿ ತಾಂತ್ರಿಕ ಸಹಕಾರ ನೀಡಿದರು. 10ನೇ ತರಗತಿ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 