ಕಲಿಕಾ ಹಬ್ಬ : ಮಕ್ಕಳ ಹಬ್ಬ ಕಾರ್ಯಕ್ರಮ

ಕಲಿಕಾ ಹಬ್ಬ : ಮಕ್ಕಳ ಹಬ್ಬ ಕಾರ್ಯಕ್ರಮ Educational Festival: Children's Festival Program


ವಿಜಯಪುರ 19: ಇಂದು ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.10  ಜೋರಾಪುರ ಪೇಠ, ವಿಜಯಪುರ ಇಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ದೀಪ ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಗಾಟನೆ ನಗರ ಸಭೆ ಸದಸ್ಯರು ಮಹೇಶ ಒಡೆಯರ್ ಸರ್ ಮತ್ತು ಎಸ್‌ಡಿಎಮ್‌ಸಿ ಅಧ್ಯಕ್ಷ ಪರುಶುರಾಮ ನಾವಿ, ಸವಿತಾ ಮೆಡಮ್‌ರವರು ಮುಖ್ಯ ಗುರುಮಾತೆಯರಾದ ಎ.ಐ.ಮಾಗಿ ಮೆಡಮ್‌ರವರು ಉದ್ಘಾಟಿಸಿದರು. 

ಈ ಸಮಯದಲ್ಲಿ ಮಾತನಾಡಿದರು ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡುವ ಮೂಲಕ ಅವರನ್ನು ಸದೃಢರನ್ನಾಗಿಸಿ ಕಲಿಕಾ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು ಎಂದು  ನಗರ ಸಭೆ ಸದಸ್ಯ ಮಹೇಶ ಒಡೆಯರ್ ಸರ್‌ರವರು ಹೇಳಿದರು. 

ಮುಖ್ಯ ಗುರುಮಾತೆ  ಎ.ಐ.ಮ್ಯಾಗಿ ಮೆಡಮರವರು ಮಾತನಾಡಿ ಇಂದಿನ ಮಕ್ಕಳಲ್ಲಿ ದೇಶದ ಉಜ್ವಲ ಭವಿಷ್ಯ ರೂಪಿಸುವ ಶಕ್ತಿ ಇದ್ದು, ಅವರಿಗೆ ಕಲಿಕಾ ವಾತಾವರಣ ರೂಪಿಸಬೇಕು ಎಂದರು. ಮಕ್ಕಳ ಪ್ರತಿಭೆ ಅನಾವರಣಕ್ಕೆ ಇಂತಹ ಹಬ್ಬಗಳು ಪೂರಕವಾಗಿವೆ ಎಂದರು 

ಪೋಷಕರ ಅಭಿಪ್ರಾಯ :ಪೋಷಕರು ನಮಗೆ ಈ ಮಕ್ಕಳ ಹಬ್ಬವು ನಮ್ಮ ಬಾಲ್ಯದ ನೆನಪು ಮಾಡಿಸಿತು. ಇದರಿಂದ ನಮ್ಮ ಮಕ್ಕಳ ಪ್ರತಿಭೆ ನಮಗೆ ತಿಳಿಯುತ್ತದೆ. ಇದೇ ರೀತಿಯ ಮಕ್ಕಳ ಹಬ್ಬವನ್ನು ಮುಂದಿನ ವರ್ಷದಿಂದ ನಮ್ಮ ಶಾಲೆಯಲ್ಲಿ ಸೇರಿ ಮಾಡುತ್ತೇವೆ ಎಂದು ತಿಳಿಸಿದರು. 

ಮಕ್ಕಳಿಂದ ಅಭಿನಯ ಗೀತೆ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯಿತು. ಅಧ್ಯಕ್ಷರು ಮತ್ತು ಅತಿಥಿಗಳು ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.ಮಕ್ಕಳಿಗೆ ಮತ್ತು ಪೋಷಕರಿಗೆ ಲಘು ಉಪಹಾರವನ್ನು ವಿತರಿಸಲಾಯಿತು. ಖರಾತ್ ಸರರವರು ಕಾರ್ಯಕ್ರಮದ ಅತಿಥಿಗಳಿಗೆ, ಭಾಗವಹಿಸಿದ ಮಕ್ಕಳಿಗೆ ಮತ್ತು ಪೋಷಕರಿಗೆ ವಂದನೆಯನ್ನು ತಿಳಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. 

ಮುಖ್ಯಾಧ್ಯಾಪಕ ಎ.ಐ.ಮಾಗಿ ಮೆಡಮ್ರವರು, ಎಸ್‌ಡಿಎಮ್‌.ಸಿ ಅಧ್ಯಕ್ಷ ಪರುಶರಾಮ. ಜಿ. ನಾವಿ, ಎಸ್‌ಡಿಎಂ.ಸಿ ಸದಸ್ಯರಾದ ಶಿವಾನಂದ ಅಫಜಲಪೂರ, ಮುಖ್ಯ ಅತಿಥಿಗಳಾಗಿ ನಗರ ಸಭೆ ಸದಸ್ಯರು,  ಮಹೇಶ. ವಡೇಯರ ಸರ್‌ರವರು, ಮತ್ತು ಆಕಾಶ ವಾಲಿಕಾರ, ಸರ್‌ವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಣ ಸಂಯೋಜಕ ಎ.ಕೆ.ದಳವಾಯಿ,  ಸಿ.ಆರ್,ಪಿ. ಕ್ಲಸ್ಟರ್ ನಂ.25ರ ಸಂಪನ್ಮೂಲ ವ್ಯಕ್ತಿಯಾದ ಸವಿತಾ, ದನಗೊಂಡ, ಮೆಡಮ್‌ರವರು ಬಿ.ಎಮ್‌., ಏ.ಎಫ್‌. ಅರಳಿಮಟ್ಟಿ, ಡಿ.ಕೆ. ತಾವಸೆ, ಮತ್ತು  ಶಬಾನಾಬೇಗಂ ಮೆಡಮ್, ಖರಾತ್ ಸರ್, ಝಡ್‌.ಎಸ್‌.ಆಸ್ಕಿ, ಎಮ್‌.ಎನ್‌.ಮುಂಜನ್ನಿ ಮೆಡಮ್,  ಅತಿಥಿ ಶಿಕ್ಷಕರು, ಶಿಕ್ಷಕಿಯರಾದ ಪೂಜಾ ಕುಲಕರ್ಣಿ ಮೆಡಮ್,  ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿ-ವಿದ್ಯಾರ್ಥಿನೀಯರು, ಪಾಲಕರು,   ತಾಯಂದಿರರು,  ಇನ್ನೀತರರು ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು,  ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.