ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕು
Education is the fundamental right of every child
ಹಾವೇರಿ 20 : ಸಾಧ್ಯವಾದಷ್ಟು ಮಕ್ಕಳೆ ಸ್ವತಂತ್ರವಾಗಿ ತನ್ನ ಕಾರ್ಯ ನಿರ್ವಹಿಸಲು ಕಲಿಯಿರಿ. ಶಾಲೆಯಲ್ಲಿ ನೀಡುವ ಮನೆ ಕೆಲಸವನ್ನುಜವಾಬ್ದಾರಿಯಿಂದ ನಿರ್ವಹಿಸಲು ಕಲಿಯಿರಿ ಎಂದು ದೇವಗಿರಿಕ್ಲಸ್ಟರಿನ ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಮಾಲತೇಶ ದೊಡ್ಡಮನಿ ಮಾತನಾಡಿದರು.
ಹಾವೇರಿ ತಾಲೂಕಿನ ಕರಜಗಿ ಗ್ರಾಮದ ಎಂ.ಪಿ.ಎಸ್. ಕರಜಗಿ ಶಾಲೆಯಲ್ಲಿ ಆಯೋಜಿಸಿದ ಎಫ್.ಎಲ್.ಎನ್. ಕಲಿಕಾ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕು. ಸರ್ಕಾರರಾಜ್ಯದಎಲ್ಲಾ ಮಕ್ಕಳಿಗೂ ಸುಲಭವಾಗಿ ಶಿಕ್ಷಣ ದೊರೆಯುವಂತೆ ಮಾಡಲು ಕಟಿಬದ್ಧವಾಗಿದೆ. ರಾಜ್ಯದಎಲ್ಲಾ ಮಕ್ಕಳಿಗೂ ಓದು-ಬರಹ ಲೆಕ್ಕಾಚಾರ ಗುಣಮಟ್ಟದ ಶಿಕ್ಷಣ ನೀಡಲು ಈ ಶಿಕ್ಷಕರು ಸರ್ಕಾರ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀಕಾಂತ ದೊಡ್ಡಕುರುಬರ ಶಿಕ್ಷಕರು ಮಾತನಾಡಿತರಗತಿಯಲ್ಲಿ ಪ್ರತಿ ಮಗುವಿನ ಕಲಿಕಾ-ಫಲಗಳನ್ನು ಅರ್ಥ ಮಾಡಿಕೊಂಡು, ತಮ್ಮ ತರಗತಿ ಮಕ್ಕಳಿಗೆ ಸೂಕ್ತವಾದ ಕಲಿಕಾ ಫಲಗಳನ್ನು ಸಾಧಿಸಲು ಎಫ್. ಎಲ್. ಎನ್. ಕಾರ್ಯಕ್ರಮ ಬಹಳ ಸೂಕ್ತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೊಸದಾಗಿ ಸಮೂಹ ಸಂಪನ್ಮೂಲ ಅಧಿಕಾರಿಗಳಾಗಿ ಆಗಮಿಸಿದ ಮಾಲತೇಶ ದೊಡ್ಡಮನಿಯವರನ್ನು ಸ್ವಾಗತ ಕೋರಲಾಯಿತು. ಅದೇರೀತಿ ಸಿ.ಆರ್.ಪಿ. ಗಳಾಗಿ ಕಾರ್ಯನಿರ್ವಹಿಸಿದ ಶ್ರೀಕಾಂತ ದೊಡ್ಡ ಕುರುಬರ ಅವರನ್ನು ಬೀಳ್ಕೊಡಲಾಯಿತು.
ಪ್ರಸ್ತಾವಿಕವಾಗಿ ಜಿ.ಎಂ. ಓಂಕಾರಣ್ಣನವರ ಮಾತನಾಡಿ ಎಫ್.ಎಲ್.ಎನ್. ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಕಾರ್ಯ್ಯೊನ್ಮುಖರಾಗುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ನಿಂಗವ್ವ ಕರಡೆಪ್ಪನವರ ಸದಸ್ಯರಾದ ದೇವೇಂದ್ರ್ಪ ಕುಲಕರ್ಣಿಜಕಣಾಚಾರಿ ಬಡಿಗೇರ ಸವಿತಾ ಮಂದಿ, ಎಸ್.ಎನ್. ಭಜಂತ್ರಿ, ಮಮತಾಜ ಬಾಲೇಹೊಸೂರ, ರಾಜುಜಿಡ್ಡಿ, ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಮಲ್ಲೇಶ ದೊಡ್ಡಮನಿ ಮಾಡಿದರೆ, ಸ್ವಾಗತವನ್ನು ಪ್ರಧಾನ ಗುರುಮಾತೆ ಜಯಶ್ರೀ ಕೊರಗರ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸರೋಜಾ ಅಗಡಿ ಮಾಡಿದರೇ, ಗೀತಾಕ್ವಾಟಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 