ಭೂಮಿಯಲ್ಲಿ ಆಧುನಿಕ ಪದ್ದತಿಯ ಕೃಷಿ ಅಳವಡಿಕೆಗೆ ಶಿಕ್ಷಣ ಅಗತ್ಯ: ಐಹೊಳೆ

ಭೂಮಿಯಲ್ಲಿ ಆಧುನಿಕ ಪದ್ದತಿಯ ಕೃಷಿ ಅಳವಡಿಕೆಗೆ ಶಿಕ್ಷಣ ಅಗತ್ಯ: ಐಹೊಳೆ Education is necessary to implement modern farming methods on land: Aihole

ರಾಯಬಾಗ 23: ರೈತರು ತಮ್ಮ ಭೂಮಿಯಲ್ಲಿ ಆಧುನಿಕ ಪದ್ದತಿಯ ಕೃಷಿ ಅಳವಡಿಸಿಕೊಳ್ಳಲು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. ಮಂಗಳವಾರ ತಾಲೂಕಿನ ಭಿರಡಿ ಗ್ರಾಮದ ಮಹಾದೇವ ದೇವಸ್ಥಾನ ಸಭಾಂಗಣದಲ್ಲಿ ಕೃಷಿ ಇಲಾಖೆ, ಹುಬ್ಬಳ್ಳಿಯ ಪಾರಾದೀಪ ಫಾಸ್ಫೇಟ್, ಜುವಾರಿ ಫಾರ್ಮಹಬ್ ಮತ್ತು ಭಿರಡಿ ವೀರಭದ್ರೇಶ್ವರ ಫರ್ಟಿಲೈಜರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಜ್ಞಾನ ಕೇಂದ್ರಗಳು ನೀಡುವ ಮಾಹಿತಿಯನ್ನು ಪಡೆದು ಉತ್ತಮ ಕೃಷಿ ಕೈಗೊಳ್ಳಬೇಕೆಂದರು. ಜಾನಪದ ಕವಿ, ಕೃಷಿಕ ಬೀಳಗಿಯ ಡಾ.ಸಿದ್ದಪ್ಪ ಬಿದರಿ ಮಾತನಾಡಿ, ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವ ಜನಪ್ರತಿನಿಧಿಗಳು, ರೈತರ ಹಿತ ಕಾಪಾಡುವುದರಲ್ಲಿ ಸಂಪೂರ್ಣ ಸೋತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರು ತಮ್ಮ ಪ್ರತಿಯೊಂದು ಬೇಡಿಕೆಗಳಿಗಾಗಿ ಹೋರಾಟ ಮಾಡುವ ಅನಿವಾರ್ಯ ಉಂಟಾಗಿದೆ ಎಂದು ಖೇದವ್ಯಕ್ತಪಡಿಸಿದರು.  

ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ಮುಂದಿನ ನಮ್ಮ ಪೀಳಿಗೆಗೆ ನಾವು ಫಲವತ್ತಾದ ಭೂಮಿ ಮತ್ತು ನೀರು ಬಿಟ್ಟು ಹೋಗಬೇಕಾಗಿದ್ದರಿಂದ ರೈತರು ಸಾವಯವ ಕೃಷಿ ಹೆಚ್ಚಿನ ಒತ್ತು ನೀಡಬೇಕು ಎಂದರು.ರೈತ ದಿನ ನಿಮಿತ್ಯ ಹಿರಿಯ ರೈತ ಮಹಿಳೆಯರನ್ನು, 100 ಟನ್ ಕಬ್ಬು ಬೆಳೆದ ರೈತರನ್ನು ಹಾಗೂ ಉನ್ನತ ವ್ಯಾಸಂಗ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.್ಳ 

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಮತ್ತಿಕೊಪ್ಪ ಕೃಷಿ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ, ಸಿ.ಬಿ.ಕೆ.ಎಸ್‌.ಎಸ್‌. ಉಪಾಧ್ಯಕ್ಷ ತಾತ್ಯಾಸಾಬ ಕಾಟೆ, ನಿರ್ದೇಶಕ ಮಲ್ಲಪ್ಪ ಮೈಶಾಳೆ, ಅಣ್ಣಾಸಾಹೇಬ ಖೆಮಲಾಪೂರೆ, ಮಹಾದೇವ ಬೊರಗಾಂವೆ, ಶ್ರೀಧರ ಕುಡಚೆ, ಗಣೇಶ ಹೆಗಡೆ, ಡಾ.ಆದರ್ಶ ಟಿ.ಎಸ್‌., ಸತೀಶ ಆರ್‌., ಎಚ್‌.ಎಮ್‌.ಮಹೇಶ್ವರ, ಶರಣಬಸು ಕೆಂಭಾವಿ, ಮಂಜುನಾಥ ಕಳಸನ್ನವರ, ಶಂಕರ ಗಡ್ಕರಿ, ಶಿವಪ್ಪ ಭೆಂಡೆ, ವಿರೂಪಾಕ್ಷ ಗಳತಗೆ, ಶ್ರೀಕಾಂತ ಭೆಂಡೆ, ಭೀಮಪ್ಪ ನಿಡವಣಿ, ಕೆಂಪಣ್ಣ ಮೈಶಾಳೆ, ಶಾಂತನು ಇನಾಮದಾರ, ಭಯ್ಯಾ ಇನಾಮದಾರ ಸೇರಿ ಅನೇಕ ರೈತರು ಇದ್ದರು.