ಪರೀಕ್ಷೆ ಸಮಯ, ಗ್ರಾಮೀಣ ಪ್ರದೇಶಗಳಿಗೆ ಸಮರ​‍್ಕ ಬಸ್ ಬಿಡಿ: ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಮನವಿ

ಪರೀಕ್ಷೆ ಸಮಯ, ಗ್ರಾಮೀಣ ಪ್ರದೇಶಗಳಿಗೆ ಸಮರ​‍್ಕ ಬಸ್ ಬಿಡಿ: ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರ ಮನವಿ During exam time, provide military buses to rural areas: SFI-led student petition

ರಾಣೆಬೆನ್ನೂರು 28 :  ನಗರದ ಬಸ್ ನಿಲ್ದಾಣದ ಎದುರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಕಜ್ಜರಿ, ಕೂನಬೇವು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಸಮರ​‍್ಕ ಬಸ್ ಬಿಡುವಂತೆ ಆಗ್ರಹಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್ ಮಾತನಾಡಿ, ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು, ನೌಕರರು, ರೈತರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕ ಪ್ರಯಾಣಿಕರು ದಿನ ನಿತ್ಯವು ಸಾವಿರಾರು ಜನ ನಗರಕ್ಕೆ ಆಗಮಿಸುತ್ತಾರೆ.

ಆದರೆ ಸಾರಿಗೆ ವ್ಯವಸ್ಥೆ ಸಮಸ್ಯೆ ಅತೀ ಹೇರಳವಾಗಿದೆ. ಶೈಕ್ಷಣಿಕ ವರ್ಷದ ಕೊನೆಯ ದಿನಗಳು ಪರೀಕ್ಷೆಯ ಸಮಯವಾಗಿದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಹಿತದೃಷ್ಟಿಯಿಂದ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದ್ದನ್ನು ವಿದ್ಯಾರ್ಥಿ ಸಮುದಾಯದ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತದೆ. ಅದೇ ರೀತಿಯಲ್ಲಿ ತಾಲ್ಲೂಕಿನ ಕಜ್ಜರಿ, ಕೂನಬೇವು ಗ್ರಾಮದಿಂದ ನಗರಕ್ಕೆ ನೂರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಓಡಾಡುತ್ತಾರೆ ಸರಿಯಾಗಿ ಸಮಯಕ್ಕೆ ಬಸ್ಗಳ ವ್ಯವಸ್ಥೆ ಇಲ್ಲ ಆದರಿಂದ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲು ಆಗುವುದಿಲ್ಲ ಶಿಕ್ಷಣಕ್ಕೆ ಹಿನ್ನಡೆ ಆಗುತ್ತದೆ.

ಒಂದು ವೇಳೆ ಸೋಮವಾರದ ಒಳಗೆ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಮುಂದಾಗದಿದ್ದಾರೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಬಸ್ ನಿಲ್ದಾಣ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆಗ್ರಹಿಸಿದರು.ವಿದ್ಯಾರ್ಥಿನಿ ಅನುಷ ಷಣ್ಮುಕಪ್ಪ ಮಾತನಾಡಿ, ಅನೇಕ ಬಾರಿಮನವಿ ಪತ್ರ ಸಲ್ಲಿಸಿದರು ಸರಿಯಾಗಿ ಬಸ್ ಬಿಡುವ ಕೆಲಸ ಆಗುತ್ತಿಲ್ಲ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳ ತಾಳ್ಮೆ ಪರೀಕ್ಷೆ ಮಾಡಬೇಡಿ ಕೂಡಲೇ ನಮ್ಮ ಹಳ್ಳಿಗಳಿಗೆ ಬಸ್ ಬಿಡಿ. ಇದೇ ತರ ಮಾಡಿದರೆ ಎಲ್ಲಾ ವಿದ್ಯಾರ್ಥಿಗಳಿಂದ ದೊಡ್ಡ ಮಟ್ಟದ ಬೃಹತ್ ಪ್ರತಿಭಟನೆ ಮಾಡಿ ಬಸ್ ನಿಲ್ದಾಣವನ್ನು ಬಂದ್ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಲಕ್ಮಿ ಭರಮಪ್ಪ, ಪವಿತ್ರ ಯಲಪ್ಪ, ರೇಣುಕಾ ಬಾರ್ಕಿ, ಗಂಗಮ್ಮ ಟಿ, ಲಲಿತಾ ಬಿ, ಚೈತ್ರ ಎೈ, ಕಾವ್ಯಾ ಬಾರ್ಕಿ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.