ನಶಾ ಮುಕ್ತ ಭಾರತ ಅಭಿಯಾನ: ಚಿತ್ರಕಲಾ ಸ್ಪರ್ಧೆ
Drug Free India Campaign: Painting Competition
ನಶಾ ಮುಕ್ತ ಭಾರತ ಅಭಿಯಾನ: ಚಿತ್ರಕಲಾ ಸ್ಪರ್ಧೆ
ಹುಬ್ಬಳ್ಳಿ 15: ಇಂದು ನಗರದ ವಿಜಯ ಮಹಾಂತೇಶ ಲಲಿತ ಕಲಾಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಧಾರವಾಡ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಧಾರವಾಡ, ತಾಲೂಕು ಪಂಚಾಯತ ಹುಬ್ಬಳ್ಳಿ ಹಾಗೂ ಮೈತ್ರಿ ಸಮಗ್ರ ವ್ಯಸನಮುಕ್ತ ಪುನರ ವಸತಿ ಕೇಂದ್ರ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಡಾ.ಜಿ.ವಿ.ಓಂಕಾರಿಗೌಡ್ರ ಅವರು ಮಾತನಾಡಿ, ಭಾರತವು ಯುವ ಜನಾಂಗದಿಂದ ಕೂಡಿದ ಸದೃಢ ದೇಶ ಕಟ್ಟಲು ಯುವಕರ ಕೊಡುಗೆ ಅವಶ್ಯಕವಾಗಿರುತ್ತದೆ. ಆದರೆ ಯುವಕರು ಮಾದಕ ವಸ್ತುಗಳಿಗೆ ದಾಸರಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಾರಣ ಇಂತಹ ವ್ಯಸನಗಳಿಂದ ದೂರವಾಗಿ ಆರೋಗ್ಯಕರಾಗಿ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಆರ್.ಎಫ್. ಹಿರೇಗೌಡರ ಮಾತನಾಡಿ, ಯುವ ಪೀಳಿಗೆಯ ಮಾರಕ ದುಶ್ಚಟಗಳಿಗೆ ದಾಸರಾಗದೇ, ನಶಾ ವಸ್ತುಗಳಿಂದ ದೂರವಿದ್ದು, ಸದೃಢವಂತರಾಗಬೇಕೆಂದು ಅವರು ತಿಳಿಸಿದರು. ಮೈತ್ರಿ ಸಂಸ್ಥೆಯ ಮಂಜುನಾಥ ಮುದಿಗೌಡ್ರ, ಶಿವಾನಂದ ಚೌಗಲೆ, ಕಲ್ಮೇಶ್ ಬೆಳೆಬಾಳ ಇವರು ಕೂಡ ನಶಾ ಮುಕ್ತರಾಗುವಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ರಂಜಿತಾ, ಶರಾವತಿ, ಕಾಲೇಜಿನ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ವಿಕಲಚೇತನ ಗ್ರಾಮೀಣ ಪುನರವಸತಿ ಕಾರ್ಯಕರ್ತರು ಹಾಜರಿದ್ದರು. ಸಹ ಪ್ರಾಧ್ಯಾಪಕರಾದ ಸಿ.ಡಿ. ಜಟ್ಟೆನವರ ನಿರೂಪಿಸಿದರು. ಎಂ.ಆರ್. ಡಬ್ಲ್ಯೂ ಮಹಾಂತೇಶ ಕುರ್ತಕೋಟಿ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 