ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಚಾಲಕರ ದಿನಾಚರಣೆ
ಕೊಪ್ಪಳ 24: ಜಿಲ್ಲಾ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಸರಳಾಗಿ ನಡೆದ ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ,ವೈ,ಎಸ್,ಪಿ, ಮುತ್ತಣ್ಣ ಸವರಗೋಳ ಭಾಗವಹಿಸಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿ ಚಾಲಕರಿಗೆ ಶುಭ ಹಾರೈಸಿದರು. ಚಾಲಕರ ಸೇವೆಗೆ ಗೌರವ ಸಲ್ಲಿಸಲು,ಪ್ರತಿನಿತ್ಯ ಸಾರ್ವಜನಿಕರಿಗೆ ಗಮ್ಯಸ್ಥಾನ ತಲುಪಿಸಲು ಶ್ರಮಿಸುವ ಚಾಲಕರ ಕಠಿಣ ಪರಿಶ್ರಮ ಮತ್ತು ಸೇವೆಯನ್ನು ಗೌರವಿಸಲು.ರಸ್ತೆ ಸುರಕ್ಷೆ: ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚಾಲಕರನ್ನು ಪ್ರೋತ್ಸಾಹಿಸಲು ಚಾಲಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್ ವಿವರಿಸಿ ಎಲ್ಲಾ ಚಾಲಕರಿಗೂ ಚಾಲಕರ ದಿನಾಚರಣೆಯ ಶುಭಾಶಯಗಳು ತಿಳಿಸಿದರು.
ನಿರಂತರ ಪ್ರಯತ್ನದ ಮೂಲಕ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಎರಡನೇ ವರ್ಷ ಚಾಲಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಶಾಲು ತಾಯಿ ಸಂಚಾರಿ ನಿಯಂತ್ರಕ ರವೀಂದ್ರ ನುಡಿದು ಚಾಲಕರಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಡಿಪೋ ವ್ಯವಸ್ಥಾಪಕ ರಮೇಶ ಚಿಣಗಿ ಅವರು ಚಾಲಕರಿಗೆ ಶುಭಾಶಯಗಳನ್ನು ಹೇಳಿದರು. ಕೇಂದ್ರೀಯ ಬಸ್ ನಿಲ್ದಾಣದ ಕಾರ್ಯಕ್ರಮದಲ್ಲಿ ಅಮೀನ್ ಸಾಬ್ ಕೋಳಿ, ಚೆನ್ನಮ್ಮ, ವಿಭಾಗೀಯ ನಿಯಂತ್ರಣಾಧಿಕಾರಿ ಎಂ,ವೆಂಕಟೇಶ್, ವಿಭಾಗಿಯ ಸಂಚಾಲನ ಅಧಿಕಾರಿ ಆರಿ್ಬ,ಜಾದವ್, ಚಾಲಕ ವಸಂತ ರಾಮದುರ್ಗ, ಅನಿಲ್ ಕುಮಾರ್, ಲೆಕ್ಕಾಧಿಕಾರಿ ಶ್ರೀಮತಿ ಜಯಶ್ರೀ, ಶ್ರೀಮತಿ ಕಾವ್ಯ, ಸಂಚಾರ ನೀರೀಕ್ಷಕ ಮಂಜುನಾಥ್ ಬಂಡಿ, ನಾಗರಾಜ ನಾಗರೆಡ್ಡಿ, ಕೆ,ಎಸ್,ಆರಿ್ಟ,ಸಿ, ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಮುಖಂಡ ಎ,ಜಿ, ಮಣ್ಣೂರು ಮುಂತಾದ ಅನೇಕ ಕೆ,ಎಸ್,ಆರಿ್ಟ,ಸಿ,ಚಾಲಕರು,ನಿರ್ವಾಹಕರು, ಕಾರ್ಮಿಕರು ಭಾಗವಹಿಸಿ ಚಾಲಕರಿಗೆ ಶುಭಾಶಯಗಳನ್ನು ತಿಳಿಸಿದರು.