ನಾಟಕ ಕಲೆ ಮತ್ತು ಕಲಾವಿದರು ದೇಶದ ಸಂಸ್ಕೃತಿಯ ಹರಿಕಾರರು - ಪ್ರಕಾಶ ಕೋಳಿವಾಡ

ನಾಟಕ ಕಲೆ ಮತ್ತು ಕಲಾವಿದರು ದೇಶದ ಸಂಸ್ಕೃತಿಯ ಹರಿಕಾರರು - ಪ್ರಕಾಶ ಕೋಳಿವಾಡ   Dramatic art and artists are the pioneers of the country's culture - Prakash Koliwada

             ರಾಣೇಬೆನ್ನೂರು 27 :  ಇಂದಿನ ಆಧುನಿಕ ಪಾಚ್ಛಿ ಮಾತ್ಯ ಸಂಸ್ಕೃತಿಯ ಕಲೆಗಳ ಭರಾಟೆಯಲ್ಲಿ ನಮ್ಮ ನೈಜ ಕಲೆ ನಾಟಕ, ಸಾಹಿತ್ಯ, ಸಂಗೀತ ಹಾಗೂ ಪರಂಪರಾಗತವಾಗಿ ಬಂದಿರುವ ಸಾಮಾಜಿಕ ಪೌರಾಣಿಕ ನಾಟಕಗಳು ನೇಪತ್ಯಕ್ಕೆ ಸರಿಯುತ್ತಿರುವುದು ಅತ್ಯಂತ ವಿಷಾಧಕರ ಸಂಗತಿಯಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಅವರು ಸೋಮವಾರ ಸಂಜೆ, ನಗರಸಭೆ ಗುಡ್ಡದ ಸ್ಮಾರಕ ಭವನದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ, ಶ್ರೀ ಪಂಚಲಿಂಗೇಶ್ವರ ಎಸ್ ಟಿ, ಮತ್ತು ಲಿಂಗಾಪುರ ಎಸ್‌. ಕೆ. ನಾಟ್ಯ ಸಂಘ, ಏರಿ​‍್ಡಸಿದ್ದ " ಅಪ್ಪ ಹಂಗ್ - ಮಗ ಹಿಂಗ್ " ಸಾಮಾಜಿಕ ಹಾಸ್ಯ ಪ್ರಧಾನ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

            ಕಲೆ ಎಲ್ಲರಿಗೂ ಒಲಿಯುವುದಿಲ್ಲ, ಒಲಿಯುವುದು ಕೆಲವರಿಗೆ ಮಾತ್ರ. ಒಲಿದ ಕಲಾವಿದರು ತಮ್ಮ ನೈಜತೆಯ ಅಭಿನಯದ ಮೂಲಕ ಕುಟುಂಬ ಪರಿವಾರ ಸಮೇತ ಕುಳಿತು ನೋಡುವಂತಹ ನಾಟಕಗಳನ್ನು ಪ್ರದರ್ಶಿಸಬೇಕು  ಎಂದರು.      ಪ್ರತಿಯೊಬ್ಬ ಮಾನವ ಒಂದಲ್ಲ ಒಂದು ರೀತಿಯಲ್ಲಿ ಕಲಾವಿದರೇ ಅದಕ್ಕೆ ರಾಜಕಾರಣಿಗಳು ಹೊರತಲ್ಲ. ಎಲ್ಲರಲ್ಲಿಯೂ ಕಲಾ ಸರಸ್ವತಿ ನೆಲೆ ನಿಂತಿದ್ದಾಳೆ, ಅದನ್ನು ಪರಿಪೂರ್ಣ ಅಪ್ಪಿಕೊಂಡವರು ಕೆಲವೇ ಕೆಲವು ಜನರು ಮಾತ್ರ. ಇಂದಿನ ದಿನಮಾನಗಳಲ್ಲಿ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಾಟಕ ಕಲಾವಿದರು ಮತ್ತು ನಾಟಕ ಕಂಪನಿಗಳು ಇಂದಿಗೂ ಜೀವಂತವಾಗಿರುವುದಕ್ಕೆ ಮುನ್ನುಗ್ಗಿ ಬರುವ ಅಭಿಮಾನಿಗಳೇ ಸಾಕ್ಷಿ. ನೈಜ ನಾಟಕ ಕಲೆಗೆ ಎಂದಿಗೂ ಸಾವಿಲ್ಲ ಎಂದರು. 

           ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ವರ್ತಕರ ಸಂಘದ ಅಧ್ಯಕ್ಷ ಸುದೀರ್ ಕುರುವತ್ತಿ, ತಾ.ಪಂ. ಮಾಜಿ ಅಧ್ಯಕ್ಷರಾದ, ರವೀಂದ್ರಗೌಡ ಪಾಟೀಲ, ನೀಲಕಂಠಪ್ಪ ಕುಸುಗೂರ, ಇಕ್ಬಾಲ್ ಸಾಬ್ ರಾಣಿಬೆನ್ನೂರ, ಶ್ರೀಮತಿ ಭಾರತಿ ಜಂಬಿಗಿ, ಕಲಾವಿದ ಬೀರ​‍್ಪ,  ಕಂಪನಿಯ ಮಾಲೀಕ ಹನುಮಂತಪ್ಪ ಬಾಗಲಕೋಟಿ, ಸೇರಿದಂತೆ ಮತ್ತಿತರ ಗಣ್ಯರು, ಕಲಾವಿದರು ಉಪಸ್ಥಿತರಿದ್ದರು. ಹಾಸ್ಯ ಕಲಾವಿದ, ಸುಂದರೇಶ ಪ್ರಾರ್ಥಿಸಿದರು. ಅಭಿರುಚಿ ಕೆ.ಎಸ್‌. ನಾಗರಾಜ್, ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂಪನಿಯ ವ್ಯವಸ್ಥಾಪಕ  ವೀರೇಶ ಚಳಗೇರಿ, ವಂದಿಸಿದರು. ಪ್ರಬುದ್ಧ ಕಲಾವಿದರಿಂದೊಡಗೂಡಿದ, ಹಾಸ್ಯ ನಾಟಕವು ಕಲಾಭಿಮಾನಿಗಳನ್ನು ಹಾಸ್ಯದ ಹೊನಲಿನಲ್ಲಿ ತೇಲಿಸಿದರು.