ವೃಂದಾ ಹಾಗೂ ಶ್ರೇಯಾರಿಗೆ ಶುಭಕೋರಿದ ಡಾ. ಸುರೇಶ ಡಿ. ಹೊರಕೇರಿ
Dr. Suresh D. Horakeri wished Vrinda and Shreya well
ಹುಬ್ಬಳ್ಳಿ 29: ಸಂಗೀತ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ಸಂಗೀತ ಕಲಾವಿದರಾದ, ವಚನಗಳನ್ನು, ಭಾವಗೀತೆ, ಭಕ್ತಿಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತ ಪಡಿಸುವ, ಯುವ ಕಲಾವಿದರಾದ ವೃಂದಾವಿ. ಚಾವಟೆ ಹಾಗೂ ಶ್ರೇಯಾ ಈರಣ್ಣ ಬೆಂಗೇರಿ ಅವರನ್ನು ಬೇಟಿಮಾಡಿದ ಹೊರಕೇರಿಮಾಸ್ತರ ಶಿಕ್ಷಣಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾಸಮಿತಿ, ಬಸವ ಪರಿಸರ ಸಂರಕ್ಷಣಾ ಸಮಿತಿ ಸದಸ್ಯರು ವೃಂದಾ ಹಾಗೂ ಶ್ರೇಯಾ ಅವರಿಗೆ ಗ್ರಂಥನೀಡಿ ಗೌರವದಿಂದ ಹುತ್ಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸಿದರು. ವೃಂದಾ ಹಾಗೂ ಶ್ರೇಯಾ ಅವರು ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲಿ ಎಂದು ಶುಭಕೋರಿದರು.
ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊಎಸ್.ಎಂ.ಸಾತ್ಮಾರ, ರಾಣಿಚನ್ನಮ್ಮಪರಿಸರ ಸೇವಾಸಮಿತಿ ಯ ಕಾರ್ಯದರ್ಶಿ, ಬಸವಪರಿಸರ ಸಂರಕ್ಷಣಾ ಸಮಿತಿಯ ಕಾರ್ಯತದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಸಿ.ಜಿ.ಧಾರವಾಡ ಶೆಟ್ಟರ, ಪ್ರೊಎಸ್.ವಿ.ಪಟ್ಟಣಶೆಟ್ಟಿ, ಆರಿ್ಸ.ಹಲಗತ್ತಿ, ಮುಂತಾದವರು ಭಾಗವಹಿಸಿದ್ದರು. ಹೊರಕೇರಿ ಮಾಸ್ತರಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ, ಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಉದಯೋನ್ಮುಖ ಕಲಾವಿಧರನ್ನು, ಸಾಧಕರನ್ನು ಪ್ರೊತ್ಸಾಹಿಸುವ, ಅವರನ್ನು ಜನರಿಗೆ ಪರಿಚಯಿಸುವ ಘನಉದ್ಧೇಶ, ಕಲಾವಿಧರನ್ನು ಬೆಳಕಿಗೆ ತರುವ ಉತ್ತಮ ಆಶಯಹೊಂದಿದೆ.
ವೃಂದಾವಿ. ಚಾವಟೆ ಅವರು ಪಿಜಿಯೋತೆರಪಿ ಕೋರ್ಸನ್ನು ಮಾಡುತಿದ್ದಾರೆ. ಹಿಂದೂ ಸ್ಥಾನಿಕ್ಲಾಸಿಕಲ್ ಮುಜಿಕ್ ಕಲಿಯುತ್ತಿದ್ದಾರೆ. ಹಿಂದೂ ಸ್ಥಾನಿಕ್ಲಾಸಿಕಲ್ ವೋಕಲ್ ಮಧ್ಯಮ ಪೂರ್ಣಪರೀಕ್ಷೆ ಹಾಗೂ ಜ್ಯೂನಿಯರ್ನಲ್ಲಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಸುಮಧುರಾ ಸಿರಿಯಲ್ಲಿ ಪ್ರಥಮ, ವಿಜಯವೈಸ್ ಆಫ್ ಕರ್ನಾಟಕದಲ್ಲಿ ಪ್ರಥಮ, ಧಾರವಾಡ ಹಬ್ಬದಲ್ಲಿ ಪ್ರಥಮ, ಬನ ಶ್ರೀಗಾನ ಗಂಧರ್ವದಲ್ಲಿ ಪ್ರಥಮ, ನನ್ನನಾದ್ವನಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶ್ರೇಯಾ ಈರಣ್ಣ ಬೆಂಗೇರಿ ಅವರು ಕೆ.ಎಲ್.ಇ ಸಂಸ್ಥೆಯ ಪ್ರೇರಣಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ಧಾಳೆ. ಕೆ.ಎಲ್.ಇ ಕಾಮರ್ಸ ಕಾಲೇಜಿನಲ್ಲಿಬಿ.ಕಾಂ. ಪದವಿಮಾಡುತ್ತಿದ್ಧಾಳೆ. ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಹುಮಾನ ಪಡೆದಿದ್ದಾಳೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕ್ಲಾಸಿಕಲ್ ಹಾಗೂ ದಾಸರ ಪದ ಕಾರ್ಯಕ್ರಮ ನೀಡಿದ್ಧಾಳೆ. ವಚನಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ. ಹಲವಾರು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ,ಬಹುಮಾನ ಪಡೆದಿದ್ದಾಳೆ. ಸ.ರಿ.ಗ.ಮ.ಪ ಸಿಜನ್16 ಮೇಘಾ ಆಡಿಸನ್ಸರಲ್ಲಿ ಭಾಗವಹಿಸಿದ್ದಾಳೆ. ವಿಶೇಷವಾಗಿ ವಚನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸುತ್ತಾಳೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 