ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಡಾ.ರಾಜೇಂದ್ರಗಡಾದ ಅಭಿಮತ
Dr. Rajendra Gada's thoughts on National Girls' Day
ಗದಗ 29: ಹೆಣ್ಣು ಜಗದ ಕಣ್ಣು, ಹೆಣ್ಣು ಬಾಳಿನ ಕಣ್ಣು, ಹೆಣ್ಣುಮಕ್ಕಳನ್ನು ಎಂದಿಗೂಕೀಳಾಗಿ ಕಾಣದಿರಿ.ಹೆಣ್ಣು ಎಂದರೆ ಬೇರೆ ಮನೆಗೆ ಹೋಗುವ ವಸ್ತು, ಹೆಣ್ಣು ಹುಟ್ಟಿತೆಂದು ಬೇಸರಗೊಳ್ಳುವುದು ಮತ್ತು ಅವರಿಗೆ ಸಲ್ಲಬೇಕಾದ ಸೌಲಭ್ಯಗಳಿಂದ ಅವರನ್ನು ವಂಚಿತರನ್ನಾಗಿ ಮಾಡುವುದು ಸರಿಯಲ್ಲ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾರಾಜೇಂದ್ರ ಎಸ್ಗಡಾದ ಅವರು ಹೇಳಿದರು.
ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ದಂಡಪ್ಪಮಾನ್ವಿ ಹೆರಿಗೆ ಆಸ್ಪತ್ರೆ ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ಡಿಎಂಎಂ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣುಮಗು ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದ ಡಾ.ಗಡಾದವರು ಇಂದು ಹೆಣ್ಣು ಮಕ್ಕಳು ಪುರುಷರಷ್ಟೇ ಎಲ್ಲ ರಂಗಗಳಲ್ಲಿಯೂ ಸಾಧನೆ ಸಾಧಿಸಿದವರಾಗಿದ್ದಾರೆ ಭಾರತದಂತಹ ದೇಶದಲ್ಲಿ ಮೊದಲಿನಿಂದಲೂ ಹೆಣ್ಣು ಮಕ್ಕಳನ್ನು ಪೂಜ್ಯ ಭಾವನೆಯಿಂದ ನೋಡಿಕೊಂಡು ಬರಲಾಗುತ್ತಿದೆ .ಹೆಣ್ಣು ತಾಯಿಯಾಗಿ ಹೆಂಡತಿಯಾಗಿ,,ಸಹೋದರಿಯಾಗಿಬೇಕು ಆದರೆ ಮಗಳಾಗಿ ಬೇಡ ಎಂದರೆ ಹೇಗೆ ? ಇಂದುಭ್ರೂಣಹತ್ಯೆಯಂತಹಹೀನಕೃತ್ಯದಿಂದಾಗಿಹೆಣ್ಣುಗಂಡಿನಅನುಪಾತದಲ್ಲಿವ್ಯತ್ಯಾಸಕಂಡುಬರುತ್ತಿದೆಅನುಪಾತಸಮನಾಗಿರುವಂತೆನೋಡಿಕೊಳ್ಳಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಇಂದು ಸರ್ಕಾರವು ಅದರಲ್ಲೂ ವಿಶೇಷವಾಗಿ ಆರೋಗ್ಯ ಇಲಾಖೆ ಮತ್ತು ಮಹಿಳಾಮತ್ತು ಮಕ್ಕಳ ಅಭಿವೃದ್ಧಿಇಲಾಖೆಗಳು ಹೆಣ್ಣುಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿದ್ದು ಅವುಗಳ ಸದುಪಯೋಗವನ್ನಪಡೆಯಲು ಸಮುದಾಯವು ಮುಂದಾಗಬೇಕುಎ ಂದು ಹೇಳಿದರು.
ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಸರೋಜಾಕಟ್ಟಿಮನಿ ಅವರು ಮಾತನಾಡಿ ಕುಟುಂಬದಲ್ಲಿ ಹೆಣ್ಣುಮಗು ಎಂದು ಭೇದಭಾವ ಮಾಡದೆ ಹೆಣ್ಣು ಮಕ್ಕಳಿಗೂ ಕೂಡ ಉನ್ನತ ಶಿಕ್ಷಣವನ್ನು ಕೊಡಿಸಬೇಕು ಎಂದು ಹೇಳಿ ಹೆಣ್ಣು ಮಕ್ಕಳ ಅಭ್ಯುದಯದಲ್ಲಿ ಆರೋಗ್ಯ ಇಲಾಖೆಯ ಸೇವೆ ಸೌಲಭ್ಯಗಳು ಮಾಹಿತಿ ನೀಡಿದರು .ಡಿಎಂಎಂ ಆಸ್ಪತ್ರೆಯ ಶುಶ್ರುಶಾಧಿಕಾರಿ ಅನ್ನಪೂರ್ಣಹಿರೇಮಠ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೊಟ್ರಮ್ಮ ಸೇರಿದಂತೆ ತಾಯಂದಿರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 