ಡಾ. ರಾಜಶೇಖರ ಇಚ್ಚಂಗಿಯವರಿಗೆ ಮೌಲ್ಯ ಸಾಹಿತ್ಯ ಸಂಪದ ಪ್ರಶಸ್ತಿ ಪ್ರಧಾನ

ಲೋಕದರ್ಶನ ವರದಿ

ಹುಕ್ಕೇರಿ 26: ಶಿವಬಸವಸ್ವಾಮೀಜಿ ನಾಗನೂರು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿಶ್ರಾಂತ ಹಿರಿಯ ಪ್ರಾಧ್ಯಾಪಕ, ಸಂಶೋಧಕ ಡಾ. ರಾಜಶೇಖರ ಇಚ್ಚಂಗಿ ಅವರಿಗೆ ಮೌಲ್ಯ ಸಾಹಿತ್ಯ ಸಂಪದ ಪ್ರಶಸ್ತಿಯನ್ನು ಸೋಮಶೇಖರ ಸೋಗಲದ ದಂಪತಿಗಳ ಉಪಸ್ಥಿತಿಯಲ್ಲಿ ಚಿಕ್ಕೋಡಿ ತಾಲೂಕಿನ ಜನವಾಡ ಗ್ರಾಮದ ಮಹಾದೇವ ಸ್ವಾಮಿಗಳ ಧಮರ್ಾರ ಮಠದ ಸಭಾ ಭವನದಲ್ಲಿ ಜರುಗಿದ ಮೌಲ್ಯ ಸಂಪದ 14 ನೇ ವಾಷರ್ಿಕೋತ್ಸವದ ಸಾಂದರ್ಭದಲ್ಲಿ ರನ್ನ ಬೆಳಗಲಿಯ ಮಹಾಲಿಂಗ ಶಾಸ್ತ್ರಿಗಳು ಪ್ರಧಾನ ಮಾಡಿದರು. ಆರ್. ಎಸ್. ಪಾಟೀಲ, ಜೆ. ಬಿ. ಜನವಾಡೆ, ರಾಮಗೌಡ ಪಾಟೀಲ, ನಿದರ್ೇಶಕರು ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾಖರ್ಾನೆ ನಿಪ್ಪಾಣಿ, ಮಲ್ಲಣ್ಣಾ ಶಿ. ಯಾದವಾಡ, ಭಾಜಪ ಜಿಲ್ಲಾ ಮುಖಂಡರು, ರಾಮದುರ್ಗ, ಡಾ. ಬಿ. ಎ. ಮಾನೆ, ಬಾಹುಬಲಿ ನರವಾಡೆ, ಚಿದಾನಂದ ಸರವಾಡೆ, ಕುಮಾರ ತಳವಾರ ಉಪಸ್ಥಿತರಿದ್ದರು.