ಡಾ.ಎಂ.ಎಂ.ಕಲಬುರ್ಗಿ ಜನ್ಮದಿನಾಚರಣೆ: ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ

ಡಾ.ಎಂ.ಎಂ.ಕಲಬುರ್ಗಿ ಜನ್ಮದಿನಾಚರಣೆ: ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ Dr. M.M. Kalburgi's Birthday Celebration: Award Presentation and Book Release Program

                ಧಾರವಾಡ  20: ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದಿಂದ ನವೆಂಬರ್ 28, 2025 ರಂದು ಸಂಜೆ 5 ಗಂಟೆಗೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರ 87 ನೇ ಜನ್ಮದಿನದ ಪ್ರಯಕ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. 

       ಈ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಹುಬ್ಬಳ್ಳಿಯ ಹಿರಿಯ ಸಂಶೋಧಕ ಡಾ. ಬಿ. ವಿ. ಶಿರೂರ ಅವರಿಗೆ 2025 ನೇ ಸಾಲಿನ ಡಾ. ಎಂ. ಎಂ. ಕಲಬುರ್ಗಿ ಸಂಶೊಧನ ಪ್ರಶಸ್ತಿ ಮತ್ತು ಧಾರವಾಡದ ಶಾಸ್ತ್ರೀಯ ಮತ್ತು ಹಿಂದುಸ್ತಾನಿ ಸಂಗೀತ ಕಲಾವಿದೆ ವಿದುಷಿ ಸುಜಾತ ಗುರವ ಕಮ್ಮಾರ ಅವರಿಗೆ ಡಾ. ಎಂ. ಎಂ. ಕಲಬುರ್ಗಿ ವಚನ ಸಂಗೀತ ಪ್ರಶಸ್ತಿಯನ್ನು ನೀಡಲಾಗುವುದು. ಹಾಗೂ ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳ ಮರುಲೋಕಾರೆ​‍್ಣ ಮಾಡಲಾಗುವುದು. 

      ಹಿರಿಯ ವಿದ್ವಾಂಸ ಡಾ. ಹಂ.ಪ. ನಾಗರಾಜಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ 40 ಸಂಪುಟಗಳ ಮರುಲೋಕಾರೆ​‍್ಣ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಅವರು ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಅವರು ಅತಿಥಿಗಳಾಗಿ ಆಗಮಿಸುವರು. ಉಮಾದೇವಿ ಎಂ. ಕಲಬುರ್ಗಿ ಹಾಗೂ ಪ್ರತಿಷ್ಠಾನದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಸುಜಾತ ಗುರವ ಕಮ್ಮಾರ ಅವರು ವಚನ ಗಾಯನ ಪ್ರಸ್ತುತ ಪಡಿಸುವರು ಎಂದು ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.