ವಚನ ಸಾಹಿತ್ಯಕ್ಕೆ ಡಾ.ಎಂ.ಎಂ.ಕಲಬುರ್ಗಿ ಅವರ ಕೊಡುಗೆ ಶ್ರೇಷ್ಠ : ಎಸ್‌.ವಿ.ಪಟ್ಟಣ ಶೆಟ್ಟಿ

ವಚನ ಸಾಹಿತ್ಯಕ್ಕೆ  ಡಾ.ಎಂ.ಎಂ.ಕಲಬುರ್ಗಿ ಅವರ ಕೊಡುಗೆ ಶ್ರೇಷ್ಠ : ಎಸ್‌.ವಿ.ಪಟ್ಟಣ ಶೆಟ್ಟಿ Dr. M.M. Kalaburgi's contribution to Vachana literature is great: S.V. Pattana Shetty

             ಹುಬ್ಬಳ್ಳಿ 02: ನಾನೂ ಬದುಕಿರುವುದು ಕನ್ನಡ ಹಾಗೂ ಬಸವಣ್ಣನವರಿಗಾಗಿ ಎಂದು ಡಾ. ಎಂ.ಎಂ.ಕಲಬುರ್ಗಿ ಅವರು ಯಾವಾಗಲೂ ಹೇಳುತ್ತಿದ್ದರು. ವಚನ ಸಾಹಿತ್ಯಕ್ಕೆ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ನಂತರ ಡಾ. ಎಂ.ಎಂ.ಕಲಬುರ್ಗಿ ಅವರ ಕೊಡುಗೆ ಶ್ರೇಷ್ಠ ಹಾಗೂ ಮರೆಯಲಾರದಂತ ಹದ್ದು ಎಂದು ಬಸವಕೇಂದ್ರದ ಕಾರ್ಯಾಧ್ಯಕ್ಷ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ವಿ.ಪಟ್ಟಣ ಶೆಟ್ಟಿ ಹೇಳಿದರು.  

            ಅವರು ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ಆಯೋಜಿಸಿರುವ ವಿಶ್ವಬಸವ ಧರ್ಮ ಪ್ರವಚನ ಸಂದರ್ಭದಲ್ಲಿ ಶ್ರೇಷ್ಠ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ 87ನೇ ಜನ್ಮ ದಿನಾಚರಣೆ ನಿಮಿತ್ಬಸವ ಕೇಂದ್ರ,  ಬಸವಪರಿಸರ ಸಂರಕ್ಷಣಾ ಸಮಿತಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಎಂ.ಎಂ.ಕಲಬುರ್ಗಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.  

             ಅದ್ಯಯನ, ಅದ್ಯಾಪನ, ಸಂಶೋಧನೆ ಮೈಗೂಡಿಸಿ ಕೊಂಡು ಶ್ರಮ ಸಂಸ್ಕೃತಿಯನ್ನು ಹೊಂದಿದ ಶ್ರೇಷ್ಠ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರು ತಾವು ದುಡಿಯುವುದರ ಜೊತೆಗೆ ಇತರರನ್ನು ದುಡಿಯಲು ಹಚ್ಚುತ್ತಿದ್ದರು. ವಚನಗಳ ಸಂಶೋಧನೆ, ಸಂಪಾದನೆಯಲ್ಲಿ ಡಾ.ಕಲಬುರ್ಗಿ ಅವರು ಅದ್ಭುತ ಕಾರ್ಯಮಾಡಿದ್ದಾರೆ. 120 ಕೃತಿಗಳನ್ನು, 750ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಡಾ. ಎಂ.ಎಂ.ಕಲಬುರ್ಗಿ ಅವರ ಹೆಸರಿನಲ್ಲಿ ಕರ್ನಾಟಕ ಸರಕಾರ ಟ್ರಸ್ಟ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಟ್ರಸ್ಟ ಮೂಲಕ ಡಾ. ಎಂ.ಎಂ.ಕಲಬುರ್ಗಿ ಅವರನ್ನು ನೆನೆಯುವ ಕಾರ್ಯಗಳು ನಿರಂತರವಾಗಿ ನಡೆಯಲಿ, ಅವರ ಸಾಹಿತ್ಯವು ಜನರಿಗೆ ತಲುಪಲಿ ಎಂದರು.  

             ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಹುಣಸಿಕೊಳ್ಳಮಠ, ಶ್ರೀಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯಸಿದ್ಧ ಬಸವ ದೇವರು, ಬಸವಕೇಂದ್ರದ ಅಧ್ಯಕ್ಷ ಪ್ರೊಜಿ.ಬಿ.ಹಳ್ಳಾಳ, ಅವರು ಮಾತನಾಡಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಸೋಹನ ಸುರೇಶ ಹೊರಕೇರಿ, ಪ್ರಭು ಅಂಗಡಿ, ಕೆ.ಎಸ್‌. ಇನಾಮತಿ, ಪ್ರೊಎಸ್‌.ಆರ್‌.ಆಶಿ, ಸುಭಾಷ ಚವ್ಹಾಣ, ಶಿವಯೋಗಿಮುರ್ಖಂಡೆ. ಎಂ.ಬಿ.ಕಟ್ಟಿ, ನೀಲಾಂಬಿಕಾ ಹಳ್ಳಾಳ, ನೀಲಾಂಬಿಕಾ ಇನಾಮತಿ, ಉಮಾ, ಪ್ರೊ ಎಂ.ಪಿ.ಕುಂಬಾರ, ಸಂತೋಷ ಕತ್ತಿಶೆಟ್ಟರ, ಮುಂತಾದವರು ಇದ್ದರು.