ಡಾ. ಕುಸಾಲ ದಾಸಗೆ ಡಾ. ಡಿ. ಕೆ. ಅಗರವಾಲ ಓರಿಯೇಶನ್ ಅವಾರ್ಡ-2026
Dr. Kusala Das to receive Dr. D. K. Agarwala Oration Award-2026
ವಿಜಯಪುರ 11: ನಗರದ ಪ್ರತಿಷ್ಠಿತ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪರ್ಸನ್ ಡಾ. ಕುಸಾಲ ದಾಸ ಅವರಿಗೆ ಡಾ. ಡಿ. ಕೆ. ಅಗರವಾಲ ಓರಿಯೇಶನ್ ಅವಾರ್ಡ-2026 ಲಭಿಸಿದೆ.
ಫೆಬ್ರವರಿ 5 ರಂದು ಗುರುವಾರ ನವದೆಹಲಿಯ ಜಾಮೀಯಾ ಹಮದರ್ದ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಹೃದಯ ರಕ್ತನಾಳ ವಿಜ್ಞಾನ ಅಕಾಡೆಮಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸರ್ಬಿಯಾದ ಕರಗುಜೆವಿಕ್ ವಿವಿಯ ಶರೀರಕ್ರಿಯಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಯುರೋಪ ಅಕಾಡೆಮಿಯ ಆಫ್ ಕಾರ್ಡಿಯಾಲಜಿ ವಿಭಾಗದ ಅಧ್ಯಕ್ಷ ಡಾ. ವ್ಲಾದಿಮಿರ ಜಾಕೊಜೆವಿಕ್ ಪ್ರಶಸ್ತಿ ಪ್ರಧಾನ ಮಾಡಿದರು.
ಡಾ. ಕುಸಾಲ ದಾಸ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ. ಎಂ. ಪಾಟೀಲ, ಹಂಗಾಮಿ ಕುಲಪತಿ ಡಾ. ಅರುಣ ಸಿ. ಇನಾಮದಾರ, ರಜಿಸ್ಚ್ರಾರ ಡಾ. ಆರ್. ವಿ. ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 