ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದ ಸಾಮಾಜಿಕ ಕಳಕಳಿ ಶ್ಲಾಘನೀಯ: ಸಂತ್ರಸ್ತರ ಹಾರೈಕೆ

ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದ ಸಾಮಾಜಿಕ ಕಳಕಳಿ ಶ್ಲಾಘನೀಯ:  ಸಂತ್ರಸ್ತರ ಹಾರೈಕೆ Dr. H. K. Patil's social concern is commendable: Victims' wishes

ಗದಗ 13:- ಅವಳಿ ನಗರವಾದ ಗದಗಬೆಟಗೇರಿ ನಗರದ 23 ನೇ ವಾರ್ಡಿನ ನಿವಾಸಿಗಳಾದ ವಿಶಾಲ ರಾಯ್ಕರ ಈತನು ಮಾರಕ ಗುದನಾಳ ಊದಿ ಕೊಂಡ ರೋಗದಿಂದ ಬಳಲುತ್ತಿರಲು ನಗರದ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಇವರನ್ನು ಸಂಪರ್ಕಿಸಿ ನೆರವು ಕೋರಲಾಗಿತ್ತು. ಸಂತ್ರಸ್ತರ ನೆರವಿಗಾಗಿ ಗದಗ ಶಹರದ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ರವರು ಎಚ್ ಕೆ ಪಾಟೀಲ್ ಸೇವಾ ತಂಡದ ಕ್ಯಾಪ್ಟನ್ ರಾದ ಶಿವಪ್ಪ ಬಳ್ಳಾರಿ ಇವರ ಮುಖಾಂತರ ಗದಗ ಶಹರ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣಗೌಡ ಎಚ್, ಪಾಟೀಲ್ ಹಾಗೂ ಸೇವಾ ತಂಡದ ಅಧ್ಯಕ್ಷರಾದ ಸನ್ಮಾನ್ಯ ಪ್ರಭು ಬುರಬುರೆ ಯವರನ್ನು ಹಾಗೂ ಬಿ ಬಿ ಅಸೂಟಿ ಯವರನ್ನು ಭೇಟಿಯಾಗಿ ಇವರ ನೆರವಿನೊಂದಿಗೆ  ಕಾನೂನು ಹಾಗೂ ಸಂಸದೀಯ ವ್ಯೆವಹಾರಗಳ ಸಚಿವರು ಹಾಗೂ ಪ್ರವಾಸೋದ್ಯೇಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರ ಅವಿಸ್ಮರಣೀಯ ಸಹಾಯ ಸಹಕಾರದೊಂದಿಗೆ ಗದಗ ಜಿಲ್ಲಾ ಆಸ್ಪತ್ರೆಯ ಚೇರಮನರಾದ ಬಸವರಾಜ ಬೊಮ್ಮನಹಳ್ಳಿಯವರ ನೇತೃತ್ವದಲ್ಲಿ ಮಾರಕ ರೋಗದಿಂದ ಬಳಲುತ್ತಿದ್ದ ವಿಶಾಲ ರಾಯ್ಕರ ಈತನಿಗೆ ಯಶಸ್ವಿಯಾಗಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಮಾರಕ ರೋಗದಿಂದ ಗುಣಮುಖರಾಗಲು ನೇರವಾದರು.  ಆ ಪ್ರಯುಕ್ತ ಇಂದು ಎಚ್ ಕೆ ಪಾಟೀಲ್ ಸೇವಾ ತಂಡದ ಕ್ಯಾಪ್ಟನ್ ಶಿವಪ್ಪ ಬಳ್ಳಾರಿ, ಬಸಯ್ಯ ಮಠಪತಿ, ನಾಗರಾಜ್ ಯರಗುಡಿ,ಬಸವರಾಜ ಚಲವಾದಿ, ನಾಗರಾಜ್ ಕುರುಗೋಡು ದಾದಾಪೀರ್ ಮುಂಡರಗಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಹಾಗೂ ಇನ್ನಿತರರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಕುಶಲೋಪರಿ ವಿಚಾರಿಸಲಾಯಿತು. ಈ ಸಂಧರ್ಭದಲ್ಲಿ ಸಂತ್ರಸ್ತನ ಕುಟುಂಬ ವರ್ಗದವರು ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರ ನಾಗರೀಕ ಸೇವೆಯನ್ನು ಸ್ಮರಿಸಿ, ಎಚ್ ಕೆ ಪಾಟೀಲ್ ಸೇವಾ ತಂಡದ ಸಾಮಾಜಿಕ ಕಳಕಳಿಯನ್ನು ತುಂಬು ಹೃದಯದಿಂದ ಶ್ಲಾಘನೆ ಮಾಡಿ, ನಮ್ಮಂತಹ ಆರ್ಥಿಕವಾಗಿ ದುರ್ಬಲರಾದವರಿಗೆ ಗಂಭೀರ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರಕದೇ ಪರದಾಡುವಂತಹ ಸ್ಥಿತಿಯಲ್ಲಿ ನೈತಿಕವಾಗಿ ಬೆಂಬಲ ನೀಡಿದ ಪ್ರಯುಕ್ತ ಕ್ರತಜ್ಞತೆಯನ್ನು ವ್ಯಕ್ತಪಡಿಸಿದರು.         

 

Deadly disease Legal activist Raghavendra Palankar