ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
Dr. H. K. Patil's service team successfully performs surgery on a woman suffering from stomach pain
ಲೋಕದರ್ಶನ ವರದಿ
ಗದಗ 13:- ಗದಗ ತಾಲೂಕಿನ ನೀಲಗುಂದ ಗ್ರಾಮದ ಪ್ರಭುಸ್ವಾಮಿ ವೀರಯ್ಯ ಹಲೇವಡಿಮಠ ಇವರ ಧರ್ಮಪತ್ನಿಯವರಾದ ಕಾವೇರಿ ಪ್ರಭುಸ್ವಾಮಿ ಹಲೇವಡಿಮಠ ರವರು ಗಂಭೀರ ಹೊಟ್ಟೆ ನೋವಿನಿಂದ ಬಳಲುತ್ತಿರಲು ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಸನ್ಮಾನ್ಯ ಪ್ರಭು ಬುರಬುರೆಯವರ ಸೂಚನೆಯ ಮೇರೆಗೆ ಹಾಗೂ ಕೆ. ಎಚ್ ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಾನ್ಯ ನಿರ್ದೇಶಕರಾದ ಬಸವರಾಜ ಬೊಮ್ಮನಹಳ್ಳಿ ಯವರ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ . ನಾಗರಾಜ್ ಮ. ಯರಗುಡಿ ಇವರಿಗೆ ದೂರವಾಣಿ ಕರೆ ಮಾಡಿ ಅವರ ಸಮಸ್ಯಗಳನ್ನು ತಿಳಿಸಿರುತ್ತಾರೆ.
ತಕ್ಷಣ ಆಗಮಿಸಿ ಅವರಿಗೆ ಹೊಟ್ಟೆಯ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ವೈದ್ಯರಿಗೆ ಸಂಪರ್ಕಿಸಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿರುತ್ತಾರೆ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದ . ನಾಗರಾಜ್ ಮ . ಯರಗುಡಿ ಅವರ ಪರಿಶ್ರಮದ ಫಲವಾಗಿ, ಇಂದು ಒಬ್ಬ ರೋಗಿಯ ಶಸ್ತ್ರ ಚಿಕಿತ್ಸೆಯನ್ನು ವೈದ್ಯರ ಮೂಲಕ ಯಶಸ್ವಿಯಾಗಿ ಮಾಡಿಸಿದರು. ಈ ಶಸ್ತ್ರ ಚಿಕಿತ್ಸೆಯನ್ನು ಮಾಡುವಲ್ಲಿ ಯಶಸ್ವಿಯಾದ ಕೆ. ಎಚ್. ಪಾ. ವೈ. ವಿ ಸಂಸ್ಥೆಯ ಸಮಸ್ತ ತಜ್ಞ ವೈದ್ಯರ ಮತ್ತು ಸಿಬ್ಬಂದಿ ವರ್ಗದವರ ಹಾಗೂ ಡಾ!! ಎಚ್ ಕೆ ಪಾಟೀಲ್ ಸೇವಾ ತಂಡದ ಈ ಒಂದು ಅವಿಸ್ಮರಣೀಯ ಸೇವಾ ಕಾರ್ಯವನ್ನು ವೈದ್ಯಕೀಯ ಸೇವೆ ಪಡೆದ ಕುಟುಂಬವರ್ಗದವರು ತುಂಬು ಹೃದಯದಿಂದ ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 