ಬಹುಮುಖ ಪ್ರತಿಭೆ ಪುಟ್ಟ ಬಾಲಕಿ ತ್ರಿಷಿಕಾಗೆ ಡಾ.ಬೇಗಾರ ಸನ್ಮಾನ

Dr. Begara honored the multi-talented little girl Trishika

ಬಹುಮುಖ ಪ್ರತಿಭೆ ಪುಟ್ಟ ಬಾಲಕಿ ತ್ರಿಷಿಕಾಗೆ ಡಾ.ಬೇಗಾರ ಸನ್ಮಾನ   

ಕೊಪ್ಪಳ 07: ಬಹುಮುಖ ವಸ್ತುಗಳನ್ನು ಗುರುತಿಸುವ ಪ್ರತಿಭೆ ಯುಳ್ಳ ಸುಮಾರು ಒಂದುವರೆ ವರ್ಷದ ಬಾಲಕಿಯಾದ ತ್ರಿಷಿಕಾ ವೀರೇಶ್ ಹಡಗಲಿ ಕರ್ನಾಟಕ ಅಚೀವರ್ಸ್‌ ಬುಕ್ ಆಫ್ ರೆಕಾರ್ಡ್‌ ಪ್ರಶಸ್ತಿ ಪತ್ರ ಪಡೆದು ದಾಖಲೆ ನಿರ್ಮಿಸಿದ್ದಾರೆ ಸದರಿ ಪುಟ್ಟ ಬಾಲಕಿಗೆ ಶನಿವಾರದಂದು ಭಾಗ್ಯನಗರದಲ್ಲಿ  ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಯಾಗಿರುವ ಡಾ,ಅನಿಲ್ ಕುಮಾರ್ ಬೇಗಾರ್ ರವರು ಬಹುಮುಖ ಪ್ರತಿಭೆ ಕಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಂಸ್ಥೆಯ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು, ಸದರಿ ಪುಟ್ಟ ಬಾಲಕಿ ಅವರ ತಂದೆ ಮೂಲತಃ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನವರಾಗಿದ್ದು ಕುಡತಿನಿಯ ಕರ್ನಾಟಕ ಪವರ್ ಕಾರ​‍್ೊರೇಷನ್ ಲಿಮಿಟೆಡ್‌ನಲ್ಲಿ ಸಹಾಯಕ ಅಭಿಯಂತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಇವರ ಮಾವ ನವರಾದ ಗವಿಸಿದ್ದನ ಗೌಡ ಮಾಲಿ ಪಾಟೀಲ್ ರವರ ನಿವಾಸ ಭಾಗ್ಯನಗರದಲ್ಲಿ ಸದರಿ ಪುಟ್ಟ ಬಾಲಕಿ ತ್ರಿಷಿಕಾ ವೀರೇಶ್ ಹಡಗಲಿ ಅವರ ಬಹುಮುಖ ವಸ್ತುಗಳನ್ನು ಗುರುತಿಸುವ ಪ್ರತಿಭೆಗಳನ್ನು ಕಂಡು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿ ಆ ಬಾಲಕಿಗೆ ಸನ್ಮಾನಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಮುಂಬರುವ ದಿನಗಳಲ್ಲಿ ಈ ಬಾಲಕಿ ಇನ್ನಷ್ಟು ದಾಖಲೆ ನಿರ್ಮಾಣ ಮಾಡಲಿ ಎಂದು ಡಾ,ಅನಿಲ್ ಕುಮಾರ್ ಬೇಗಾರ ಅವರು ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಪುಟ್ಟ ಬಾಲಕಿ ತ್ರಿಷಿಕಾ ರವರ ತಂದೆ ವೀರೇಶ್ ಹಡಗಲಿ ಮತ್ತು ತಾಯಿ ಮಧುಶ್ರಿ ಹಡಗಲಿ ಯವರು ಉಪಸ್ಥಿತರಿದ್ದರು.