ಡಾ ಬಿ.ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ

ಡಾ ಬಿ.ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ Dr. B.R. Ambedkar Maha Parinirvana Day

ಮುದ್ದೇಬಿಹಾಳ   06:  ಡಾ ಬಿ.ಆರ್ ಅಂಬೇಡ್ಕರ್ ಅವರು ದೇಶದ ಸಂವಿಧಾನವನ್ನು ರಚಿಸಿದ ಕೇವಲ ಸಂವಿಧಾನ ಶಿಲ್ಪಿ ಎಂಬ ಹೊಗಳಿಕೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ದೇಶದ ಏಕತೆ, ಸಮಾನತೆಗಾಗಿ ತಮ್ಮ ದೃಷ್ಟಿಯಿಂದ ಒಂದು ಜಾತಿಗೆ ಸೀಮಿತವಾಗದೆ ಇಡೀ ಮಾನವ ಕುಲಕ್ಕೆ ಅಂಬೇಡ್ಕರ್ ಅವರು ಹಾಕಿಕೊಟ್ಟ  ಮಾರ್ಗದರ್ಶನ ಮಾದರಿಯಾಗಿದೆ. ಅಂಬೇಡ್ಕರ್ ಅವರು ರಾಜಕೀಯ ಮತ್ತು ಸಮಾಜ ಸುಧಾರಕರು, ಮಹಿಳಾ ಪರ ಹೋರಾಟಗಾರು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂದು ತಹಶಿಲ್ದಾರ ಕೀರ್ತಿ ಚಾಲಕ್ ಹೇಳಿದರು.ತಾಲೂಕು ಆಡಳಿತ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ ಹಾಗೂ ಪುರಸಭೆ ಜಂಟಿಯಾಗಿ ಹಮ್ಮಿಕೊಂಡ ಮಹಾಪರಿನಿರ್ವಾಣ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರೆ​‍್ಣ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.ದೇಶದ ದೀನದಲಿತರ ಮುನ್ನಲೆಗೆ ತರಲು ಅವರು ನಡೆಸಿದ ಹೋರಾಟವನ್ನು ದೇಶದ ಸ್ವಾತಂತ್ರ್ಯ ಹೋರಾಟದ ಅಂಗವಾಗಿಯೇ ಸಂಘಟಿಸಿ ಅಸ್ಪೃಶ್ಯತಾ ನಿವಾರಣೆ ಮತ್ತು ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ದೇಶದ ಸ್ವಾತಂತ್ರ್ಯ ಅರ್ಥರಹಿತ ಎಂದು ಪ್ರತಿಪಾದಿಸಿದ್ದರು.  

ಮಾನವ ಕುಲದ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದ ಮಹಾನ್ ನಾಯಕ ಅಂಬೇಡ್ಕರ್, ಜಾತ್ಯತೀತ, ಸಮಾಜವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದುವ ಜತೆಗೆ ಮಹಿಳೆಯರ ಪರ ಹೋರಾಟ ನಡೆಸಿದ್ದು, ಇಂತಹ ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ನಾವು ಮುನ್ನಡೆಯೋಣ ಎಂದು ಕೀರ್ತಿ ಚಾಲಕ್ ಹೇಳಿದರು.ಬಹುಸಂಖ್ಯಾತರ ಮನೆಗಳಲ್ಲಿ ದೀಪ ಬೆಳಗುವಂತೆ ಮಾಡಿದ ಅಂಬೇಡ್ಕರ್ ನಮ್ಮನ್ನಗಲಿ ಹಲವು ವರ್ಷಗಳೇ ಕಳೆದಿವೆ. ಆದರೂ ಇಂದಿಗೂ ಅವರು ನೀಡಿದ ಸಂವಿಧಾನ ನಮಗೆ ಮಾದರಿ. ಬಾಬಾ ಸಾಹೇಬರು ಬಾಲ್ಯದಲ್ಲಿಯೇ ಮೌಢ್ಯ, ಜಾತಿ ಶೋಷಣೆಯನ್ನು ಪ್ರಶ್ನಿಸುತ್ತಿದ್ದವರು. ಅವರು ಪುರುಷರಷ್ಠೇ ಮಹಿಳೆಗೆ ಸಮಾನ ಹಕ್ಕುವಿದೆ ಎಂಬ ಪ್ರತಿಪಾದಿಸಿದ ಹಿನ್ನಲೆಯಲ್ಲಿ ಪ್ರಸ್ತುತವಾಗಿ ಎಲ್ಲಾ ರಂಗದಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿರುವುದು ಅಂಬೇಡ್ಕರ್ ಅವರು ನೀಡಿದ ಸ್ವಾತಂತ್ರ್ಯ. ಮಹಿಳೆ ಅಬಲೆ ಅಲ್ಲ ಸಬಲೆ ಎಂಬ ವಾಕ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವಂತಿ ಮಠ ಅವರು ತಿಳಿಸಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ, ಕೊಡುಗೆಗಳು, ವಿಶೇಷವಾಗಿ ಅವರು ಸಂವಿಧಾನ ರಚಿಸಿರುವುದು ರಾಷ್ಟ್ರಕ್ಕೆ ನೀಡಿದ ಬಹುದೊಡ್ಡ ಕೊಡುಗೆ. ಭೂಮಿಯ ಮೇಲೆ ಸೂರ್ಯ-ಚಂದ್ರರು ಇರುವ ವರೆಗೂ ಅವರ ಹೆಸರು ಶಾಶ್ವತ. ಅಂಬೇಡ್ಕರರನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವ ಪ್ರಯತ್ನವಾಗುತ್ತಿದೆ. ಆದರೆ, ಅವರು ಜಾತಿ, ಧರ್ಮಗಳನ್ನು ಮೀರಿ ನಿಂತ ಮಹಾನ್ ನಾಯಕ ಎಂದು ದಲಿತ ಪರ ಚಿಂತಕ ಹರೀಶ್ ನಾಟೀಕಾರ್ ಹೇಳಿದರು. 

ಅಲ್ಪಸಂಖ್ಯಾತರು, ಲಿಂಗಾಯತರು, ಹಿಂದುಳಿದ ವರ್ಗಗಳ ಯಾವುದೇ ಜಾತಿಯ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಮಾನತೆ ಒದಗಿಸಿಕೊಟ್ಟ ಫಲವಾಗಿ ಇಂದಿಗೂ ದೊಡ್ಡ ದೊಡ್ಡ ಸರ್ಕಾರಿ ಹುದ್ದೆಯಲ್ಲಿ ಶೋಷಿತ ವರ್ಗದ ಜನಾಂಗವಿದೆ. ಇಂತಹ ಮಹಾನ್ ನಾಯಕರು ಸದಾ ನಮಗೆ ಸ್ಮರಣೀಯರು ಎಂದು ದಲಿತ ಮುಖಂಡ ಸಿ.ಜಿ ವಿಜಯಕರ್ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಸಿಪಿಐ ಮಹಮ್ಮದ್ ಫಸಿವುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ.ಎಸ್ ಸಾವಳಗಿ, ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ, ಅಕ್ಷರ ದಾಸೊಹ ಸಹಾಯಕ ನಿರ್ದೇಶಕ ಎಂ.ಎಂ ಬೆಳಗಲ್ಲ್‌, ಸಮಾಜ ಸೇವಕ ಶಾಂತಗೌಡ ನಡಹಳ್ಳಿ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಪುರಸಭೆ ಸದಸ್ಯ ಶಿವು ಶಿವಪುರೆ, ದಲಿತ ಮುಖಂಡ ವಾಯ್‌.ಎಚ್ ವಿಜಯಕರ್, ಜಿಲ್ಲಾ ದೌರ್ಜನ್ಯ ತಡೆ ಸಮಿತಿ ಉಸ್ತುವಾರಿ ಮಲ್ಲು ತಳವಾರ, ದಲಿತ ಮುಖಂಡರಾದ  ದೇವರಾಜ ಹಂಗರಗಿ, ಸಿದ್ದು ಕಟ್ಟಿಮನಿ ಸೇರಿದಂತೆ ಹಲವರಿದ್ದರು.