ಡಾ.ಅಜಿತ್ ಪ್ರಸಾದ್‌ರಿಂದ ಜೆಎಸೆಎಸ್ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರಗಳ ವಿತರಣೆ
Dr. Ajit Prasad distributes prizes and award certificates to JSS winning students
ಧಾರವಾಡ 10: ವಿದ್ಯಾ ಗಿರಿಯ ಜೆಎಸ್‌ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 7.11.2025 ರಂದು ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಆದ ಪದ್ಮವಿಭೂಷಣ ರಾಜರ್ಷಿ ಪೂಜ್ಯಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ 78ನೆಯ ಹುಟ್ಟು ಹಬ್ಬದ ಪ್ರಯುಕ್ತ ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆಯನ್ನು ಏರಿ್ಡಸಲಾಗಿತ್ತು.
ಈ ಸಮಾರಂಭಕ್ಕೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಶೇಷ ಆಹ್ವಾನಿತರಾಗಿ ಜನತಾ ಶಿಕ್ಷಣ ಸಮಿತಿಯ ಆಡಳಿತ ಅಧಿಕಾರಿಗಳಾದ ಅರಿಹಂತ್ ಪ್ರಸಾದ್ ಅವರು ಹಾಗೂ ಐಟಿಐ ಮಹಾವಿದ್ಯಾಲಯದ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆ ಅವರು ಆಗಮಿಸಿದ್ದರು. ಶಾಲೆಯ ಪ್ರಾಚಾರ್ಯರಾದ ರೇಣು ಪಾಟೀಲ್ ಶಾಲೆಯ ಸಹ ಸಂಯೋಜಕರಾದ ನಿರ್ಮಲ ಪಾಟೀಲ್, ಪ್ರಿಯಾಂಕ ದೇಸಾಯಿ , ಕಮಲಾಕ್ಷಿ ಸಣ್ಣಕ್ಕಿ ಅವರು ಉಪಸ್ಥಿತರಿದ್ದರು.
ಸ್ಪರ್ಧೆಯನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಈ ಸ್ಪರ್ಧೆಯು ಪೂಜ್ಯರು ನೀಡಿದ ಉದಾತ್ತ ಸೇವೆಗಳು ಮತ್ತು ಎಸ್.ಡಿ.ಎಂ ಸಂಸ್ಥೆಗಳ ಗಮನಾರ್ಹ ಕೊಡುಗೆಗಳನ್ನು ಬಿಂಬಿಸುವ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು. ತರಗತಿ 5 ಮತ್ತು 6 ನೇ ಗುಂಪಿಗೆ ಸಿರಿಧಾನ್ಯ, ಕೃಷಿ ತರಬೇತಿ , ಕೆರೆಗಳ ಹೂಳು ತೆಗೆಯುವಿಕೆ , ಗ್ರಾಮ ದತ್ತು ಯೋಜನೆ 7 ಮತ್ತು 8ನೇ ತರಗತಿಯ ಗುಂಪಿಗೆ ವೈದ್ಯಕೀಯ ಸೇವೆಗಳು , ಶಿಕ್ಷಣ ಸಂಸ್ಥೆಗಳು , ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ತರಗತಿ 9 ಮತ್ತು 10 ನೇ ಗುಂಪಿಗೆ ಆರೋಗ್ಯ ವಿಮೆ , ರುಡ್‌ಸೆಟ್ , ಅನ್ನಪೂರ್ಣ ಭಾಗ್ಯ ಧರ್ಮಸ್ಥಳ, ಮಹಿಳಾ ಸಬಲೀಕರಣ , ಮದ್ಯಪಾನ ಪುನರ್ವಸತಿ ಕೇಂದ್ರಗಳು ಮುಂತಾದ ವಿಷಯಗಳ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರಿ್ಡಸಲಾಗಿತ್ತು .ಈ ಸ್ಪರ್ಧೆಗೆ ನಿರ್ಣಾಯಕರಾಗಿ ಅಮೃತ ಜೋಷಿ ಹಾಗೂ ಶಿವಾನಂದ್ ಕಡೆಮನೆ ಅವರು ಆಗಮಿಸಿದ್ದರು. 5 ಮತ್ತು 6ನೇ ತರಗತಿಯ ಗುಂಪಿನಲ್ಲಿ ಶಾಂಭವಿ ದೇಗಾವಿ ಮಠ ಪ್ರಥಮ ಬಹುಮಾನ 7 ಮತ್ತು 8ನೇತರಗತಿಯ ಗುಂಪಿನಲ್ಲಿ ಶ್ಲೋಕ್ ನ್ಯಾಮನಗೌಡರ್ ಪ್ರಥಮ ಬಹುಮಾನ 9 ಮತ್ತು 10ನೇ ತರಗತಿಯ ಗುಂಪಿನಲ್ಲಿ ಸಾತ್ವಿಕ್ ತಿಮ್ಮಾಪುರ್ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.
ಮುಖ್ಯ ಅತಿಥಿಗಳಾದ ಡಾ.ಅಜಿತ್ ಪ್ರಸಾದ್ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ , ಖಾವಂದರಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಾಮಾಜಿಕ ಸೇವೆಗಳ ಕುರಿತು ಮಕ್ಕಳಿಗೆ ತಿಳಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸ್ಪರ್ಧೆ ಸ್ಪರ್ಧೆಯಲ್ಲಿ 26 ಶಾಲೆಗಳ 118 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 