ನೂತನ ಕುಲಪತಿಯಾಗಿ ಡಾ. ಎ ಎಂ ಖಾನ್ ಆಯ್ಕೆ: ನೇಮಕ ಪ್ರಶ್ನಿಸಿ ಹೈಕೋರ್ಟ್‌ ಮೊರೆ

ನೂತನ ಕುಲಪತಿಯಾಗಿ ಡಾ. ಎ ಎಂ ಖಾನ್ ಆಯ್ಕೆ:  ನೇಮಕ ಪ್ರಶ್ನಿಸಿ ಹೈಕೋರ್ಟ್‌  ಮೊರೆ Dr. A M Khan elected as new Vice Chancellor

ಧಾರವಾಡ 16 : ದಿನಾಂಕ 15-07-2025.ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಖಾಲಿಯಾಗಿ 9 ತಿಂಗಳು ಆಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪ್ರಭಾರಿ ಕುಲಪತಿಗಳ ಅಡಿಯಲ್ಲಿಯೇ ನಡೆದಿದ್ದ ವಿಶ್ವವಿದ್ಯಾಲಯಕ್ಕೆ ಈಗ ಸರ್ಕಾರ ಪ್ರೊ.ಎ.ಎಂ. ಖಾನ್‌ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.ನೂತನ ಕುಲಪತಿಖಾನ್‌ಅವರು ನೇಮಕ ಆದೇಶ ಬರುತ್ತಿದ್ದಂತೆಯೇಅಧಿಕಾರ ವಹಿಸಿಕೊಂಡು ಕಾರ್ಯಭಾರ ಆರಂಭಿಸಿದ್ದಾರೆ.ಆದರೆ ಅಧಿಕಾರ ಸ್ವೀಕರಿಸಿದ ನಂತರ ಈ ನೇಮಕ ಪ್ರಶ್ನಿಸಿ ಡಾ. ಮಹದೇವಪ್ಪ ಕರಿದುರಗನವರ್ ಹೈಕೋರ್ಟ್‌ ಮೆಟ್ಟಿಲೇರಿದ್ದು, ನೇಮಕಾತಿಗೆ ತಡೆ ಆಜ್ಞೆಯನ್ನು ತಂದಿರುತ್ತಾರೆ. ಧಾರವಾಡ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗೆ ಕುಲಪತಿಯಾಗಿ ನೇಮಿಸಿರುವ ಗೌರವಾನ್ವಿತ ರಾಜ್ಯಪಾಲರ, ಸರ್ಕಾರ ಮತ್ತು ಸತ್ಯ ಸಂಶೋಧನಾ ಸಮಿತಿಯ ವಿರುದ್ಧ ಮಾಡಿರುವ ಆಪಾದನೆ ಸರಿಯಿಲ್ಲ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ರಾಜ್ಯಾಧ್ಯಕ್ಷರಾದ ಮಹ್ಮದಶಫಿ ನಾಗರಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಧಾರವಾಡ ನಗರದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಜಿಲ್ಲಾ ಉಸ್ತುವಾರಿಯವರ ಕಚೇರಿಯಲ್ಲಿ ಮಾತನಾಡುತ್ತಾಡಾ. ಮಹದೇವಪ್ಪ ಕರಿದುರಗನವರ್ ಹೈಕೋರ್ಟಿಗೆ ಹೋಗಿರುವುದು ಅವರ ವೈಯಕ್ತಿಕ ವಿಚಾರಆದರೆ ಒಂದು ಸಮುದಾಯಕ್ಕೆ ಗುರಿಯಾಗಿಸಿಕೊಂಡು ಆ ಸಮುದಾಯದ ವ್ಯಕ್ತಿಗೆ ಕುಲಪತಿಯಾಗಿ ನೇಮಿಸಿರುವುದನ್ನು ಪ್ರಶ್ನಿಸುವ ಅಧಿಕಾರಅವರಿಗೆ ಇರುವುದಿಲ್ಲ. ತಮಗೆಆದಂತ ಅನ್ಯಾಯವನ್ನು ಕೇಳುವ ಅಧಿಕಾರ ಇರುತ್ತದೆ. ಅದನ್ನು ಹೊರತುಪಡಿಸಿ ಕುಲಪತಿ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡಬೇಕಾಗಿತ್ತು, ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಬಾರದೆಂಬ ಅವರ ಈ ವಾದವನ್ನು ಯಾರು ಮೆಚ್ಚುವುದಿಲ್ಲ. ಈಗಾಗಲೇ ರಾಜ್ಯಪಾಲರು, ಸರ್ಕಾರವು ಮತ್ತು ಸತ್ಯ ಸಂಶೋಧನಾ ಸಮಿತಿಯು ರಾಜ್ಯದ ಇತರೆ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇದ್ದ ಕುಲಪತಿ ಸ್ಥಾನಕ್ಕೆ ಬೇರೆ ಸಮುದಾಯಗಳ ಜೊತೆಗೆ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಕುಲಪತಿಯಾಗಿ ನೇಮಿಸಿದ್ದಾರೆ. ಡಾ. ಮಹದೇವಪ್ಪಕರಿ ದುರಗನವರ ಬೇರೆಯಾರನ್ನು ಪ್ರಶ್ನಿಸದೆ ಕೇವಲ ಅಲ್ಪಸಂಖ್ಯಾತ ವ್ಯಕ್ತಿಗೆ ನಿಡಿದ ಕುಲಪತಿ ಸ್ಥಾನವನ್ನು ಪ್ರಶ್ನಿಸಿ ಹೈಕೋರ್ಟ್‌ ಹೋಗಿರುವುದುಅವರ ಈ ನಡವಳಿಕೆಯಿಂದ ಅನುಮಾನ ಮೂಡುತ್ತದೆ.ಈ ಹಿಂದೆಯೂ ಒಂದೇ ಸಮುದಾಯಕ್ಕೆ ಸೇರಿದೆ ವ್ಯಕ್ತಿಗಳು ಎರಡರಿಂದ ಮೂರು ಸಾರಿ ಕುಲಪತಿಆಗಿರುವ ಉದಾರಣೆಗಳಿವೆ. ಆ ಸಮಯದಲ್ಲಿಇವರ ಸಾಮಾಜಿಕ ನ್ಯಾಯಎಲ್ಲಿ ಹೋಗಿತ್ತು. ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಎರಡರಿಂದ ಮೂರು ಸಾರಿ ಕುಲಪತಿಯಾದರೆಇವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹುಟ್ಟುತ್ತದೆ. ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಸಹೋದರರಂತೆ ಬದುಕುತ್ತಿದ್ದಾರೆ ಮುಂದೆಯೂ ಅದೇ ರೀತಿ ಬದುಕುತ್ತಾರೆ ಎಂಬ ಅಚಲ ವಿಶ್ವಾಸವಿದೆ. ಅದನ್ನುಕೇಡಿಸುವ ಪ್ರಯತ್ನವುಆಗಬಾರದು.ಕುಲುಪತಿನೇಮಕಾತಿಗಾಗಿಒಂದು ಸಮಿತಿಯನ್ನುರಚಿಸಲಾಗಿರುತ್ತದೆ.ಸಮಿತಿಯು ಸತ್ಯಶೋಧನೆ ಮಾಡಿ ಸರಕಾರಕ್ಕೆ ಶಿಫಾರಸ್ಸುಗಳನ್ನು ಮಾಡಿರುತ್ತದೆ.ಇದರಆಧಾರದ ಮೇಲೆ ಸರ್ಕಾರವು ಮತ್ತುರಾಜ್ಯಪಾಲರು ಕುಲಪತಿಗಳನ್ನು ಆಯ್ಕೆ ಮಾಡುತ್ತಾರೆ.ಇದರ ಅಡಿಯಲ್ಲಿಯೇ ಧಾರವಾಡ ವಿಶ್ವವಿದ್ಯಾಲಯಕ್ಕೆಡಾ ಎ ಎಂ ಖಾನ್‌ಅವರನ್ನು ನೇಮಿಸಲಾಗಿದೆ.ಡಾ ಎ ಎಂ ಖಾನ್‌ಅವರಅವಧಿ ಮುಗಿದ ನಂತರದಲಿತ ಸಮುದಾಯದ ವ್ಯಕ್ತಿಗೆ ಕುಲಪತಿ ಸ್ಥಾನವನ್ನು ನೀಡಲೆಂದು  ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾಆಶಯಸುತ್ತದೆಎಂದು ಹೇಳಿದರು. ಈ ಸಂದರ್ಭದಲ್ಲಿಧಾರವಾಡ ಉಸ್ತುವಾರಿಯಾದ ಜಾಫರ್‌ಡಾಲಾಯತ್, ಮುನ್ನಾಕಲ್ಮನಿ, ರಹಿಮ್ ಸಾಬ್‌ದೊಡ್ಡಮನಿ, ಸಲೀಂ ನರಗುಂದ, ಮುಜಮ್ಮಿಲ್ ಬಳ್ಳಾರಿ, ಇಲಿಯಾಸ್ ಶಿರಹಟ್ಟಿ, ಹನೀಫ್‌ಇರಕಲ್, ಎಸ್‌ಎಸ್‌ಖಾದ್ರಿ, ಇಸಾಕ್‌ಇರಕಲ್, ಮುಂತಾದ ಸದಸ್ಯರು ಉಪಸ್ಥಿತರಿದ್ದರು.