ಜೆಐಹೆಚ್ ನಿಂದ ಇಫ್ತಾರ ಸೌಹಾರ್ದಕೋಟ ವ್ಯಾಮೋಹಕ್ಕೆ ಒಳಗಾಗಿ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳಬೇಡಿ : ಕಂದಗಲ್‌

Don't lose human relationships by getting carried away by the Iftar Souhardakota craze from JIH: Ka

ಜೆಐಹೆಚ್ ನಿಂದ ಇಫ್ತಾರ ಸೌಹಾರ್ದಕೋಟ ವ್ಯಾಮೋಹಕ್ಕೆ ಒಳಗಾಗಿ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳಬೇಡಿ : ಕಂದಗಲ್‌

ಕೊಪ್ಪಳ 20: ರಮಜಾನ್ ತಿಂಗಳದಲ್ಲಿ ಪವಿತ್ರ ಕುರಾನ್ ಅವತೀರ್ಣಗೊಂಡಿದೆ, ಮಾನವ ಕುಲಕ್ಕೆ ಸಮಾನತೆಯ ಸಂದೇಶ ನೀಡಿದೆ. ಮನುಷ್ಯನು ಪರಸ್ಪರ ಕಚ್ಚಾಡದೆ, ಯಾವುದೇ ವ್ಯಾಮೋಹಕ್ಕೆ ಒಳಗಾಗಿ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳಬೇಡಿ ಎಂದು ಪ್ರವಚನಕಾರ ಇಲ್ಕಲ್ಲಿನ ಲಾಲ್ ಹುಸೇನ್ ಕಂದಗಲ್ ಹೇಳಿದರು.ಅವರು ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕ ಏರಿ​‍್ಡಸಿದ ಇಫ್ತಾರ್ ಸೌಹಾರ್ದ ಕೂಟದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಂದುವರಿದು ಮಾತನಾಡಿ ಮನುಷ್ಯನ ರಕ್ತ ಹರಿಸಬೇಡಿ ನೀವೆಲ್ಲರೂ ಒಂದೇ ತಂದೆ ತಾಯಿ ಯ ಮಕ್ಕಳಾಗಿದ್ದೀರಿ ಆ ಸೃಷ್ಟಿಕರ್ತನಿಗೆ ಭಯಪಟ್ಟು ಕೆಟ್ಟದ್ದನ್ನು ಬಯಸದೆ  ಪರಸ್ಪರ ಸೌಹಾರ್ದತೆಯ ಬದುಕು ಕಟ್ಟಿಕೊಳ್ಳಬೇಕು, ರಂಜಾನ್ ಉಪವಾಸ ಆಚರಣೆ ಕೇವಲ ಸಾಂಪ್ರದಾಯಿಕವಾಗಿ ಅಲ್ಲ ಮನುಷ್ಯನಲ್ಲಿ ಪರಿವರ್ತನೆ ಬರಬೇಕು. ಒಳ್ಳೆಯ ಆಚಾರ ವಿಚಾರ ಸೌಹಾರ್ದತೆಯ ಭಾವನೆ ಮೂಡಿ ಬರಬೇಕು ಎಂದ ಆವರು ಇಲ್ಲಿ ಬಡವನಿಗೂ ಜಮೀನ್ದಾರನಿಗೂ ಒಂದೇ ನ್ಯಾಯ ಮರಣದ ನಂತರ ಇಬ್ಬರಿಗೂ ಸಿಗುವುದು ಆರಡಿ ಮುರಡಿ ಜಮೀನು ಮಾತ್ರ ಎಂಬುವುದನ್ನು ಅರಿತುಕೊಂಡು ಜೀವನ ಸಾಗಿಸಿ ಎಂದರು. ರಂಜಾನ್ ತಿಂಗಳಲ್ಲಿ ಉಪವಾಸಿಗರ ಜೊತೆಯಲ್ಲಿ ಉಪವಾಸ ಇಲ್ಲದೆ ಇರುವವರು ಕುಳಿತುಕೊಂಡು ಆಹಾರ ಸೇವಿಸಿದರೆ ಉಪವಾಸಿಗನಿಗೂ ಸಿಗುವಷ್ಟು ಪುಣ್ಯ ಉಪವಾಸ ಇಲ್ಲದವನಿಗೂ ಕೂಡ ಸಿಗುತ್ತದೆ ಎಂಬ ಒಂದು ಸದುದ್ದೇಶದಿಂದ ಇಂದು ನಾವು ನಮ್ಮ ಹಿಂದೂ ಸಮಾಜದ ಸಹೋದರರೊಂದಿಗೆ ಇಫ್ತಾರ್ ಕೂಟ ಆಚರಿಸುತ್ತಿದ್ದೇವೆ ಎಂದು ಪ್ರವಚನಕಾರ ಲಾಲ್ ಹುಸೇನ್ ಕಂದಗಲ್ ಹೇಳಿದರು.ವೇದಿಕೆ ಮೇಲೆ ಉಪಸ್ಥಿತರಿದ್ದ ಸದ್ಭಾವನ ವೇದಿಕೆಯ ಅಧ್ಯಕ್ಷ ಡಾ. ಸುಶೀಲ್ ಕುಮಾರ್ ಕಲಾಲ್ ಮಾತನಾಡಿ, ಕೆಲ ಮಾರಕ ರೋಗಗಳ ಕಡಿವಾಣ ಕೂಡ ಉಪವಾಸ ಆಚರಣೆಯಿಂದ ಸಾಧ್ಯ ಇದೆ ಎಂದು ವಿಜ್ಞಾನ ಒಪ್ಪಿಕೊಂಡಿದೆ. ಉಪವಾಸ ಆಚರಣೆ ಎಲ್ಲಾ ಧರ್ಮದಲ್ಲಿ ಇದೆ. ಇಂತಹ ಉಪವಾಸ ಆಚರಣೆಗಳಿಂದ ಆರೋಗ್ಯದಲ್ಲಿ ಶುದ್ಧೀಕರಣ ಗೊಳ್ಳಲಿದೆ ಎಂದು ಹೇಳಿದರು.ಸಾಹಿತಿ ಪತ್ರಕರ್ತ ಜಿ.ಎಸ್‌. ಗೋನಾಳ ಮಾತನಾಡಿ, ಇಫ್ತಾರ್ ಸೌಹಾರ್ದ ಕೂಟದಿಂದ ಪರಸ್ಪರ ಸೌಹಾರ್ದತೆಯ ಭಾವನೆ ಮೂಡುತ್ತದೆ. ಇದು ಒಳ್ಳೆಯ ಬೆಳವಣಿಗೆ ಇಂಥ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು, ರಾಬಿತಾ ಏ- ಮಿಲ್ಲತ್ ಸಂಸ್ಥೆಯ ಅಧ್ಯಕ್ಷ  ಎಂ.ಲಾಯಕ್ ಅಲಿ ಮಾತನಾಡಿ, ರಮಜಾನ್ ಮಾಸಾಚರಣೆಯಲ್ಲಿ ವೃತ ಉಪವಾಸ ಆಚರಣೆ ಮಾಡಿದ ವ್ಯಕ್ತಿಯ ಆರೋಗ್ಯ ಸುಧಾರಣೆಗೊಳ್ಳುತ್ತದೆ. ಇಂತಹ ಅದ್ಭುತ ಶಕ್ತಿ ಇದರಲ್ಲಿ ಅಡಗಿದೆ ಎಂದರು.ಆರಂಭದಲ್ಲಿ ಏಜಾಜ್ ಶರೀಫ್ ಅವರು ಕುರಾನ್ ಪಠಣ ಮಾಡಿ ಅದರ ಅನುವಾದ ತಿಳಿಸಿದರು. ಫಯಾಜ್ ಶೇಖ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ತಾಜುದ್ದೀನ್ ರವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಮಾತೆ ಇಸ್ಲಾಮಿ ಹಿಂದ್ ನ ಕೊಪ್ಪಳ ಘಟಕದ ಅಧ್ಯಕ್ಷರಾದ  ಸೈಯದ್ ಹಿದಾಯತ್ ಅಲಿ ಅವರು ಕೊನೆಯಲ್ಲಿ ವಂದಿಸಿದರು.