ವೈ.ಬಿ.ಕಡಕೋಳರಿಗೆ ಡಾಕ್ಟರೇಟ್ ಪದವಿ ಪ್ರದಾನ ಹಾಗೂ ಸನ್ಮಾನ
Doctorate degree conferred and felicitations given to Y.B. Kadakola
ಸವದತ್ತಿ 16 : ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತ ಈ ಭಾಗದಲ್ಲಿರುವ ಐತಿಹಾಸಿಕ ಪರಂಪರೆಯ ದೇಗುಲಗಳ ಪರಿಚಯ, ಊರುಗಳು ವಿಶೇಷತೆ, ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಚಿತ್ರಣಗಳು ಸೇರಿದಂತೆ ಹತ್ತು ಹಲವಾರು ವಿಧದಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಈಗಾಗಲೆ 40 ಕೃತಿಗಳು ಪ್ರಕಟವಾಗಿದ್ದು, ನಾಲ್ಕು ಗ್ರಂಥಗಳು ಪ್ರಕಟಣೆಯ ಹಂತದಲ್ಲಿರುವುದು ಸಂತಸದ ಸಂಗತಿ ಎಂದು ನ್ಯಾಯವಾದಿಗಳಾದ ವಿ.ಎಸ್.ಯಕ್ಕುಂಡಿ ಹೇಳಿದರು. ಅವರು ಮುನವಳ್ಳಿ ಪಟ್ಟಣದ ಶಿಕ್ಷಕ, ಸಾಹಿತಿ ವೈ.ಬಿ.ಕಡಕೋಳರಿಗೆ ಡಾಕ್ಟರೇಟ್ ಪದವಿ ಪ್ರದಾನ ನಿಮಿತ್ಯ ಸನ್ಮಾನಿಸಿ ಮಾತನಾಡುತ್ತಿದ್ದರು. ಶ್ರೀ ವೈ.ಬಿ.ಕಡಕೋಳ ಸನ್ಮಾನಕ್ಕೆ ಪ್ರತಿಯಾಗಿ ಶ್ರೀಗಳ ಆಶೀರ್ವಾದ, ಹಿರಿಯರ ಹಾರೈಕೆ, ಸಮಾಜದ ಪ್ರೋತ್ಸಾಹದಿಂದ ಹಲವಾರು ಕೃತಿಗಳ ರಚನೆಗೆ ಪ್ರೇರಣೆಯಾಗಿದೆ. "ತಲ್ಲೂರ ರಾಯನಗೌಡ್ರ : ಸಮಗ್ರ ಅಧ್ಯಯನ" ಮಹಾಪ್ರಬಂಧ ರಚಿಸುವಾಗ ತಲ್ಲೂರ ರಾಯನಗೌಡ್ರ ಕುಟುಂಬದವರ ಸಹಕಾರ ಮರೆಯಲಾರದ ಅನುಭವ. ಇನ್ನೂ ಹಲವಾರು ವ್ಯಕ್ತಿಗಳ ವ್ಯಕ್ತಿಚಿತ್ರಣ ಸೇರಿದಂತೆ ವಿವಿಧ ಕೃತಿಗಳನ್ನು ರಚಿಸಲಾಗುವುದು ಎಂದರು ಪಂಚಲಿಂಗೇಶ್ವರ ಚಿಟ್ಸ್ನ ಅಧ್ಯಕ್ಷ ಉದಯ ಯಕ್ಕುಂಡಿ, ಶಿಕ್ಷಕ ವೀರಣ್ಣ ಕೊಳಕಿ, ಗಂಗಮ್ಮ ಕಡಕೋಳ, ಶಿವಲೀಲಾ ಕಡಕೋಳ, ಆತ್ಮಾನಂದ ಕಡಕೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 