ದೀಪ ಹಚ್ಚುವ ಕೆಲಸ ಮಾಡಿ: ಗವಿಶ್ರೀಗಳು

ದೀಪ ಹಚ್ಚುವ ಕೆಲಸ ಮಾಡಿ: ಗವಿಶ್ರೀಗಳು Do the work of lighting the lamps: Gavishreegal

  ಕೊಪ್ಪಳ 20: ನಗರದ ಎನ್‌.ಜಿ.ಓ ಕಾಲೋನಿಯ ಈಶ್ವರ ದೇವಸ್ಥಾನದ ವಾರ್ಷಿಕೋತ್ಸವ ಗುರುವಾರದಂದು  ಜರುಗಿತು. ಕಾಲೋನಿಯಲ್ಲಿ ಎರಡು ವರ್ಷದ ಹಿಂದೆ ನಿರ್ಮಾಣವಾದ ಈ ದೇವಸ್ಥಾನ ಕಾಲೋನಿಯ ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಬಿತ್ತಿ, ದೀಪ ಹಚ್ಚುವ ಕೆಲಸ ಮಾಡಿ ಎಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು  ಸಂಜೆ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನಮ್ಮ ಮುಂದಿನ ಪೀಳಿಗೆಗಾಗಿ ಸಮಾಜದ ಮಕ್ಕಳಲ್ಲಿ ಹಾಗೂ ನಿಮ್ಮೆಲ್ಲರಿಗೂ ಸಕಾರಾತ್ಮಕ ಆಲೋಚನೆ ಬಿತ್ತುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ, ತಾವೆಲ್ಲರೂ ದೀಪ ಹಚ್ಚುವ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ  ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಬೃಹನ್ಮಠ ಹೆಬ್ಬಾಳ ಇವರು ಹಾಗೂ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮೈನಳ್ಳಿ-ಬಿಕನಳ್ಳಿ  ಉಪಸ್ಥಿತರಿದ್ದರು.  

ಎರಡನೇ ವಾರ್ಷಿಕೋತ್ಸವದ ನಿಮಿತ್ಯ ನಡೆದ ವಿವಿಧ ಸ್ಪರ್ಧೆಗಳಾದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸರಿತಾ , ದ್ವಿತೀಯ ಮೀನಾಕ್ಷಿ ತೃತೀಯ ಶ್ರೀದೇವಿ ಪ್ರಿಯಾಂಕ ತಿಳಿಗೋಳ ಪಡೆದರು. ವೇಷಭೂಷಣ ಸ್ಪರ್ಧೆಯಲ್ಲಿ ್ಲ ಪ್ರಕೃತಿ ಪ್ರಥಮ, ಮನಸ್ವಿ ದ್ವಿತೀಯ, ಲಕ್ಷ್ಮೀ ದಿಟರ್ ತೃತೀಯ ವಚನ ಹೇಳುವ  ಸ್ಪರ್ದೆಯಲ್ಲಿ ಸಮನ್ವಿತಾ ಮಠಪತಿ ಪ್ರಥಮ, ಶ್ರೇಯಸ್ ನಾರಾಯಣಸ್ವಾಮಿ ದ್ವಿತೀಯ, ಮುಕ್ತ ತೃತೀಯ ಸ್ಥಾನ ಪಡೆದರು, ಭಕ್ತಿಗೀತೆ ಸ್ಪರ್ಧೆಯಲ್ಲಿ ಶಿವಾನಿ ಮಾಲಗಿತ್ತಿ ಪ್ರಥಮ, ನಿಹಾರಿಕಾ ದ್ವಿತೀಯ, ಅಥರ್ವ ಬೆಳವಗಿ ತೃತೀಯ ಸ್ಥಾನ ಪಡೆದರು. ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ಪೂರ್ವಿಕಾ ಪ್ರಥಮ, ಅನುಶ್ರೀ ದ್ವಿತೀಯ, ಅಕ್ಷತಾ ತೃತೀಯ ಸ್ಥಾನ ಪಡೆದರು. ಗುಂಪು ನೃತ್ಯದಲ್ಲಿ ವಂಶಿತ ತಂಡ ಪ್ರಥಮ, ಸಿಂಧು ತಂಡ ದ್ವಿತೀಯ, ಲಕ್ಷ್ಮೀ ತಂಡ ತೃತೀಯ ಸ್ಥಾನ ಪಡೆದರು  

ಶಿವಶಕ್ತಿ ಮಹಿಳಾ ಮಂಡಳದ ರೇಣುಕಾ ದಿವಟರ, ಗೌರಮ್ಮ, ಗಂಗಮ್ಮ , ರೇಖಾನಾಯಕ ಮತ್ತಿತ್ತರರು ಸೇರಿ ಬೆಳಿಗ್ಗೆ ಕುಂಭ ವನ್ನು ಕಿನ್ನಾಳ ರಸ್ತೆಯಲ್ಲಿನ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಎನ್,ಜಿ.ಓ ಕಾಲೋನಿಯ ಈಶ್ವರ ದೇವಸ್ಥಾನಕ್ಕೆ ತರಲಾಯಿತು. ವಾರ್ಷಿಕೋತ್ಸವ ನಿಮಿತ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಕ್ತಾಧಿಗಳಿಗೆ ಗೋಧಿ ಹುಗ್ಗಿ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು 

ಇದೇ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ ಅವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.  ಈಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ವೀರಣ್ಣ ಚಾಕಲಬ್ಬಿ ರೇವಯ್ಯ ಪೂಜಾರ, ರವಿ ವಾಲ್ಮೀಕಿ, ಸಂಗಪ್ಪ ಹಾಲ್ಯಾಳ, ಪಾಲಾಕ್ಷಪ್ಪ, ನಾಗರಾಜನಾಯಕ ಡೊಳ್ಳಿನ, ರಾಘವೇಂದ್ರ ದೇಶಪಾಂಡೆ, ಕಿರಣ, ವಿಜಯ ದಿವಟರ್, ಮಲ್ಲಿಕಾರ್ಜುನ ಕಾರವಾಡಮಠ, ಮತ್ತಿತ್ತರರು ಹಾಜರಿದ್ದರು ಪ್ರಾಸ್ತಾವಿಕ ನುಡಿ ರಾಜಶೇಖರ ಪುರಾಣಿಕಮಠ, ಸ್ವಾಗತ ಗಂಗಾಧರ ಖಾನಾಪುರ, ಶಿಲ್ಪಾ ಪುರಾಣಿಕಮಠ, ಬಸವರಾಜ ಸವಡಿ  ನಿರೂಪಿಸಿದರು.