ಶಾಲೆ, ಮನೆಮನೆಗೆ ಭೇಟಿ ನೀಡಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಸಾಧನೆ ಹೆಚ್ಚಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಕ್ರಮ
District level officials take action to improve the performance of SSLC students by visiting school
ಚಿಕ್ಕೋಡಿ 08 :ಎಸ್‌ಎಸ್‌ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಮತ್ತೆ ರಾಜ್ಯ ಮಟ್ಟದಲ್ಲಿ ಮುಂಚೂಣಿ ಸ್ಥಾನ ಪಡೆಯಬೇಕೆಂಬ ಗುರಿಯೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾರಿ ಕಸರತ್ತು ನಡೆಸಿದ್ದಾರೆ. ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಸೀತಾರಾಮ್ ಹಾಗೂ ಡಯಟ್ ಪ್ರಾಚಾರ್ಯ ಸಂಜೀವ ಎಂ. ಹುಲ್ಲೋಳ್ಳಿ ಅವರು ಫಲಿತಾಂಶ ಸುಧಾರಣೆಗೆ ಮುಂದಾಳತ್ವ ವಹಿಸಿ, ವಸತಿ ನಿಲಯಗಳು, ಶಾಲೆಗಳು ಹಾಗೂ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ನೇರ ಮಾರ್ಗದರ್ಶನ ನೀಡುತ್ತಿದ್ದಾರೆ.ಚಿಕ್ಕೋಡಿ ಜಿಲ್ಲೆ ಆರಂಭದಲ್ಲಿ ಇಡೀ ರಾಜ್ಯದ ಗಮನ ಸೆಳೆದು ಉತ್ತಮ ಹೆಸರು ಮಾಡಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಫಲಿತಾಂಶದಲ್ಲಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಸಮಗ್ರ ಕ್ರಮಗಳನ್ನು ಕೈಗೊಂಡದೆ .
ಶಾಲೆ-ವಸತಿ ನಿಲಯಗಳಲ್ಲಿ ನೇರ ಸಂವಾದ ಫಲಿತಾಂಶ ಸುಧಾರಣೆಯ ಭಾಗವಾಗಿ ಡಿಡಿಪಿಐ ಸೀತಾರಾಮ್ ಅವರು ಜಿಲ್ಲೆಯಾದ್ಯಂತ ಶಾಲೆಗಳು ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸುತ್ತಿದ್ದಾರೆ.ಪರೀಕ್ಷಾ ತಯಾರಿಯಲ್ಲಿ ಶಿಸ್ತು, ಸಮಯ ನಿರ್ವಹಣೆ, ನಿರಂತರ ಅಭ್ಯಾಸ ಹಾಗೂ ಆತ್ಮವಿಶ್ವಾಸ ಅಗತ್ಯವೆಂದು ತಿಳಿಸಿ, ಹೆಚ್ಚು ಅಂಕ ಗಳಿಸುವ ಕುರಿತು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ:ಪಟ್ಟಣದ ಸಿ.ಟಿ.ಇ ಸಂಸ್ಥೆಯ ಆರಿ್ಡ. ಪ್ರೌಢಶಾಲೆ ಹಾಗೂ ಆರ್.ಎಂ. ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ಕುರಿತು ಸಲಹೆ ನೀಡಿದರು.ಅದರಂತೆ ವಸತಿ ನಿಲಯಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಮನೆಮನೆಗೆ ಭೇಟಿ ಮೂಲಕ ಪಾಲಕರಿಗೂ ಜಾಗೃತಿ: ಫಲಿತಾಂಶ ಸುಧಾರಣೆಯ ಮತ್ತೊಂದು ಪ್ರಮುಖ ಕ್ರಮವಾಗಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪಾಲಕರಿಗೂ ಜಾಗೃತಿ ಮೂಡಿಸಲಾಗುತ್ತಿದೆ.
ಈ ಹಿನ್ನೆಲೆ ಡಯಟ್ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ ಮತ್ತು ಶಿಕ್ಷಕ ಅಲಗೌಡ ಸೊಲ್ಲಾಪೂರೆ ಅವರು ತಾಲೂಕಿನ ಗೌತಮ ಸಿದ್ದಾರ್ಥ ಪ್ರೌಢಶಾಲೆ, ಬಂಬಲವಾಡ ಶಾಲೆಯಲ್ಲಿ ಕಲಿಯುತ್ತಿರುವ ಬಂಬಲವಾಡ ಹಾಗೂ ಕುಂಗಟೋಳಿ ಗ್ರಾಮಗಳ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪರೀಕ್ಷಾ ತಯಾರಿ, ಓದುವ ವಿಧಾನ, ಅಂಕ ಗಳಿಸುವ ತಂತ್ರ ಹಾಗೂ ಪಾಲಕರ ಪಾತ್ರ ಕುರಿತು ಮಾರ್ಗದರ್ಶನ ನೀಡಿದರು.ಜಿಲ್ಲೆಗೆ ಮತ್ತೆ ಗೌರವ ತರುವ ಗುರಿ: ಡಿಡಿಪಿಐ ಸೀತಾರಾಮ್ ಹಾಗೂ ಡಯಟ್ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮಗ್ರ ಕಾರ್ಯಯೋಜನೆ ಮುಂದಿನ ದಿನಗಳಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸುವ ವಿಶ್ವಾಸ ವ್ಯಕ್ತವಾಗಿದೆ. ಕೊಟ್‌ಎಸ್‌ಎಸ್‌ಎಲ್ಸಿ ಫಲಿತಾಂಶ ಸುಧಾರಣೆ ನಮ್ಮ ಮೊದಲ ಆದ್ಯತೆ. ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಅಧ್ಯಯನ ಮಾಡಿದರೆ ಉತ್ತಮ ಸಾಧನೆ ಸಾಧ್ಯ. ಶಾಲೆ, ವಸತಿ ನಿಲಯ ಹಾಗೂ ಮನೆಮನೆಗೆ ಭೇಟಿ ನೀಡಿ ಮಕ್ಕಳಿಗೆ ಪ್ರೇರಣೆ ನೀಡುವುದರ ಜೊತೆಗೆ ಪಾಲಕರ ಸಹಕಾರವೂ ಅಗತ್ಯವಾಗಿದೆ. ಚಿಕ್ಕೋಡಿ ಜಿಲ್ಲೆ ಮತ್ತೆ ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವ ವಿಶ್ವಾಸ ನಮಗಿದೆ. ಸಂಜೀವ ಎಂ. ಹುಲ್ಲೋಳ್ಳಿ ಡಯಟ್ ಪ್ರಾಚಾರ್ಯ ಚಿಕ್ಕೋಡಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 