ಜಿಲ್ಲಾಡಳಿತ ಭರವಸೆ : ಗುತ್ತಿಗೆದಾರರ ಧರಣಿ ಸತ್ಯಾಗ್ರಹ ವಾಪಸ್‌

District administration promises: Contractors' sit-in satyagraha is back

ಜಿಲ್ಲಾಡಳಿತ ಭರವಸೆ : ಗುತ್ತಿಗೆದಾರರ ಧರಣಿ ಸತ್ಯಾಗ್ರಹ ವಾಪಸ್‌

ಕೊಪ್ಪಳ 19: ಲೋಕೋಪಯೋಗಿ ಇಲಾಖೆಯ  ಕಾರ್ಯನಿರ್ವಾಹಕ ಇಂಜಿನಿಯರ್ ಜಿಲ್ಲೆಯಲ್ಲಿ ಕರೆದಿರುವ ಪ್ಯಾಕೇಜ್ ಟೆಂಡರ್ ರದ್ದುಪಡಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರ ಸಂಘ (ಪ.ಜಾ/ಪ.ಪಂಗಡ) ಜಿಲ್ಲಾ ಶಾಖೆ ಕೊಪ್ಪಳ ವತಿಯಿಂದ  ಪಿಡಬ್ಲ್ಯೂಡಿ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹವು  6ನೇ ದಿನದಂದು ಅಪರ ಜಿಲ್ಲಾಧಿಕಾರಿಗಳು ಭೇಟಿ ನೀಡಿ  ವಿಷಯ ತಿಳಿದಿದೆ ಈಗ ಆಗಿದೆ ಮುಂದೆೇ ಆಗದ ಹಾಗೆೇ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಧರಣಿ  ಸತ್ಯಾಗ್ರಹ ವಾಪಸ್ ಪಡೆಯಲಾಯಿತು.  

 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,  ಹಿಂದುಳಿದ ವರ್ಗ, ಜಾತಿಯ  ಗುತ್ತಿಗೆದಾರರಿಗೆ ಜಾತಿವಾರು ಅನುಗುಣವಾಗಿ ಮೀಸಲಾತಿಯನ್ನು ಸರಕಾರ ನೀಡಿರುತ್ತದೆ,ಆದರೆ ಕಾರ್ಯನಿರ್ವಾಹಕ ಇಂಜೀನಿಯರ್ ಲೋಕೋಪಯೋಗಿ ಇಲಾಖೆ,ಮುಖ್ಯ ಇಂಜಿನಿಯರ್ ಪಿಡಬ್ಲ್ಯೂಡಿ ಕಲಬುರ್ಗಿ ,ಇವರು ಸೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1,  ಹಿಂದುಳಿದ ವರ್ಗ, ಗುತ್ತಿಗೆದಾರರಿಗೆ ಟೆಂಡರ್ ನೀಡುವಲ್ಲಿ ಅನ್ಯಾಯ ಮಾಡುತ್ತಾ ಬಂದಿದ್ದು, ಕೆ ಟಿಪಿಪಿ ಕಾಯಿದೆ  ಉಲ್ಲಂಘನೆ ಮಾಡಿ ಪ.ಜಾ/ ಪ.ಪಂ ಗುತ್ತಿಗೆದಾರರಿಗೆ ಶೇ.24.10ಅ ಇದ್ದು ಇದರ ಪ್ರಕಾರ ನಿಯಮಾನುಸಾರ ಟೆಂಡರ್ ಕರೆಯ ಬೇಕಾಗಿರುತ್ತದೆ,ಆದರೆ  ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕಾಗಿ ಗುತ್ತಿಗೆದಾರಿಗೆ ಅನ್ಯಾಯ ಮಾಡುತ್ತಾ ಬಂದಿರುತ್ತಾರೆ,ಆದ್ದರಿಂದ ಈ ಪ್ಯಾಕೇಜ್ ಟೆಂಡರ್ ಕರೆದಿರುವಂತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಪ್ಯಾಕೇಜ್ ಟೆಂಡರನ್ನು ರದ್ದು ಪಡಿಸುವವಂತೆ  ಮನವಿಯಲ್ಲಿ ತಿಳಿಸಲಾಗಿದೆ. 

 ಧರಣಿ ಸತ್ಯಾಗ್ರಹದಲ್ಲಿ ಕಲ್ಯಾಣ ಕರ್ನಾಟಕ ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರ್ ಸಂಘದ ವಿಭಾಗೀಯ  ಅಧ್ಯಕ್ಷ ಸಿದ್ದು ಕೆ.ಮಣ್ಣಿನವರ, ಜಿಲ್ಲಾ ಅಧ್ಯಕ್ಷ ಯಂಕಪ್ಪ ಹೊಸಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ಯಾಮಣ್ಣ ಭಜಂತ್ರಿ, ಗೌರವ ಅಧ್ಯಕ್ಷ ನಾಗರಾಜ್ ನಂದ್ಯಾಪುರು, ಗಣೇಶ್ ಹೆಾರತಟ್ನಾಳ್, ಮಂಜುನಾಥ್   ಮುಸಲಾಪುರ, ಯಲ್ಲಪ್ಪ ಹಳೇಮನಿ,  ರಮೇಶ್ ಬೇಲೂರು, ಚಂದ್ರ ಸ್ವಾಮಿ ಬಹದ್ದೂರ್ ಬಂಡಿ,ಕಮಲಪಾಶ ಒಂಟಿ,  ನಿಂಗಜ್ಜ ಚೌಧರಿ ಶಹಪುರ,ಗವಿ ಹೂಗಾರ, ಮರಿಸ್ವಾಮಿ ಕೆ. ಮಣ್ಣೀನವರ್,ಖಾಜಾ ಹುಸೇನ್ ದೊಡ್ಡಮನಿ, ರಾಮನಗೌಡ ಪಾಟೀಲ್,   ಪ್ರಶಾಂತ್ ನಾಯಕ್, ವೀರಭದ್ರ​‍್ಪ ನಾಯಕ್ , ವೆಂಕಟೇಶ್ ನೆಲುಗಿಪುರ, ಬಸವರಾಜ್ ಸಜ್ಜನ್, ನಿಂಗಪ್ಪ ಗದ್ದಿ,  ಸೇರಿದಂತೆ ಬಹಳಷ್ಟು ಗುತ್ತಿಗೆದಾರರು ಪಾಲ್ಗೊಂಡಿದ್ದರು.