ಹೂಲಿಕೇರಿ ಇಂದ್ರಮ್ಮನ ಕೆರೆಗೆ ಜಿಲ್ಲಾಧಿಕಾರಿಗಳ ಭೇಟಿ: ಕಿರು ಸೇತುವೆ ನಿರ್ಮಾಣ, ಗೋಮಾಳ ಒತ್ತುವರಿ ತೆರವುಗೆ ಕ್ರಮದ ಭರವಸೆ

ಹೂಲಿಕೇರಿ ಇಂದ್ರಮ್ಮನ ಕೆರೆಗೆ ಜಿಲ್ಲಾಧಿಕಾರಿಗಳ ಭೇಟಿ: ಕಿರು ಸೇತುವೆ ನಿರ್ಮಾಣ, ಗೋಮಾಳ ಒತ್ತುವರಿ ತೆರವುಗೆ ಕ್ರಮದ ಭರವಸೆ District Magistrate visits Hoolikeri Indrammana Lake

ಧಾರವಾಡ ಆ.21:  ಅಳ್ನಾವರ ತಾಲೂಕಿನ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ಭೇಟಿ ನೀಡಿ, ಪರೀಶೀಲಿಸಿದರು. 

ಈ ಸಂದರ್ಭದಲ್ಲಿ ಹೂಲಿಕೇರಿ ಗ್ರಾಮಸ್ಥರು, ಗ್ರಾಮದ ಎರಡು ಹಳ್ಳಗಳು ಹರಿಯುವ ಸ್ಥಳದಲ್ಲಿ ಗ್ರಾಮದ ರೈತರು ಹೊಲ,ಮನೆಗಳಿಗೆ ದಿನನಿತ್ಯ ಹೋಗಿ ಬರಲು ಅನುಕೂಲವಾಗುವಂತೆ ಕಿರು ಸೇತುವೆಯನ್ನು ನಿರ್ಮಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಅಹವಾಲು ತಿಳಿಸಿದರು. 

ಹೂಲಿಕೇರಿಯ ಇಂದಿರಮ್ಮನ ಕೆರೆ ಸುತ್ತಮುತ್ತ ಹಸಿರು, ಬೆಟ್ಟಗುಡ್ಡಗಳು ಇರುವದರಿಂದ ಮತ್ತು ನಿತ್ಯ ನೀರು ಇರುವದರಿಂದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ಪ್ರವಾಸಿಗರು ಇಲ್ಲಿನ ಪರಿಸರ ಸೌಂದರ್ಯ ಸವಿಯಲು ಇಲ್ಲಿಗೆ ಬರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಆಸನಗಳು, ಕುಡಿಯುವ ನೀರು, ಎತ್ತರದಲ್ಲಿ ಗೋಪುರ ನಿರ್ಮಿಸಿ, ವಿವ್ಯೂ ಪಾಯಿಂಟ್ ಮಾಡಬೇಕು. ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಹೂಲಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಇರುವ ಗೋಮಾಳ ಭೂಮಿಯನ್ನು ಕೆಲವರು ಒತ್ತುವರಿ ಮಾಡಿ, ಬಿತ್ತನೆ ಮಾಡುತ್ತಿದ್ದಾರೆ, ಕೆಲವರು ಒತ್ತುವರಿ ಮಾಡಿ ತಂತಿಬೇಲಿ ಹಾಕಿದ್ದಾರೆ. ಈ ಭಾಗದ ಗೌಳಿ ಜನರಿಗೆ, ಗ್ರಾಮದ ಭೂ ರಹಿತ ಜನರಿಗೆ ಅವರ ಗೋವು, ದನಕರು ಮೇಯಿಸಲು ಭೂಮಿ ಇಲ್ಲದಂತಾಗಿದೆ. ತಕ್ಷಣ ಗೋಮಾಳ ಭೂಮಿ ಸಮೀಕ್ಷೆ ಮಾಡಿ, ಒತ್ತುವರಿ ತೆರವುಗೊಳಿಸಬೇಕು ಎಂದು ಗೌಳಿ ಸಮುದಾಯದವರು ಮನವಿ ಮಾಡಿದರು. 

ನಂತರ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, 1980 ರ ಸುಮಾರಿನಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಅಡಿಗಲ್ಲು ಹಾಕಿದ್ದ ಹೂಲಿಕೇರಿಯ ಈ ಇಂದ್ರಮ್ಮನ ಕೆರೆ ಅತ್ಯಂತ ಸುಙದರ ಮತ್ತು ನಿಸರ್ಗ ರಮಣೀಯವಾಗಿದೆ. ಇದನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸಲು ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಲಾಗುವುದು ಎಂದರು. 

ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕಾಳಜಿ ಮತ್ತು ಅನುದಾನದಿಂದ ಇಂದಿರಮ್ಮನ ಕೆರೆ ಸುಂದರವಾಗಿ ರೂಪುಗೊಂಡಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ರೂ. 9 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಸಚಿವರು ರೂ.6 ಕೋಟಿ ವೆಚ್ಚದಲ್ಲಿ ನೀರಾವರಿಗಾಗಿ ಕಾಲುವೆ ನಿರ್ಮಿಸಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಮಾನ್ಯ ಸಚಿವರ ಗಮನಕ್ಕೆ ತಂದು, ಕಿರು ಸೇತುವೆ ನಿರ್ಮುಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಸರಕಾರಿ ಭೂಮಿ, ಗೋಮಾಳ ಭೂಮಿ ಒತ್ತುವರಿ ಮಾಡವುದನ್ನು ಸರಕಾರ ನಿಷೇಧಿಸಿದೆ. ಹೂಲಿಕೇರಿಯಲ್ಲಿ ಗೋಮಾಳ ಭೂಮಿ ಒತ್ತುವರಿ ಆಗಿರುವ ಕುರಿತು ಗ್ರಾಮಸ್ಥರು ದೂರು ಸಲ್ಲಿಸಿದ್ದು, ಶೀಘ್ರವಾಗಿ ಇದನ್ನು ಪರೀಶೀಲಿಸಿ, ಒತ್ತುವರಿ ತೆರವುಗೊಳಿಸಲು ತಹಶೀಲ್ದಾರ ಅವರು ಕ್ರಮ ಕೈಗೊಂಡು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದರು. 

ನಂತರ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಪರವಾಗಿ ಇಂದಿರಮ್ಮನ ಕೆರೆಗೆ ಬಾಗಿನ ಅರ​‍್ಿಸಿದರು. ಗ್ರಾಮಸ್ಥರ ಸನ್ಮಾನ ಗೌರವ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಅಳ್ನಾವರ ತಹಶೀಲ್ದಾರ ಬಸವರಾಜ ಬೆಣ್ಣಿಶಿರೂರ, ಕ್ಷೇತ್ರಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ತಾಲೂಕು ಪಂಚಾಯತ ಇಓ ಪ್ರಶಾಂತ ತುರಕಾಣಿ, ಅಳ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ  ಪ್ರಕಾಶ ಮಗದುಮ್ಮ, ಸಣ್ಣ ನಿರಾವರಿ ಇಲಾಖೆಯ ಸಹಾಯಕ ಅಭಿಯಂತರ ಪಾಟೀಲ ಹಾಗೂ ಹುಲಿಕೇರಿ ಗ್ರಾಮದ ಹಿರಿಯರಾದ ಬಸವರಾಜ ಇನಾಮದಾರ, ಶಿವಾಜಿ ಡೊಳ್ಳಿನ, ಮಲ್ಲಿಕಾರ್ಜುನ ಕಲ್ಲೂರ, ರಮೇಶ ಕಿತ್ತೂರ, ಸುಶೀಲಾ ಟೋಪಣವರ, ಕುಶಾ ಕಿತ್ತೂರ, ಗೀತಾ ಜಿನ್ನಪ್ಪಗೋಳ, ನೇತ್ರಾನಂದ ಬೆಳಗಾವಿ, ಈರಣ್ಣಾ ಕಲ್ಲೂರ, ರವಿ ಬೇಕ್ವಾಡಕರ ಹಾಗೂ ಇತರರು ಇದ್ದರು. 

ಇಂದಿರಮ್ಮನ ಕೆರೆಯ ಪ್ರಗತಿ ನೋಟ: ಧಾರವಾಡ ಜಿಲ್ಲೆ ಅಳ್ಳಾವರ ತಾಲೂಕಿನ ಹೂಲಿಕೆರೆ ಗ್ರಾಮದಲ್ಲಿರುವ ಹೂಲಿಕೆರೆ (ಇಂದಿರಮ್ಮನ ಕೆರೆ) ಸಣ್ಣ ನೀರಾವರಿ ಕೆರೆ 1984ರಲ್ಲಿ ತಟ್ಟಿಹಳ್ಳದ ಉಪನದಿಯ ಮೇಲೆ ನಿರ್ಮಿಸಲ್ಪಟ್ಟಿದ್ದು, ಅಳ್ಳಾವರ ಹಾಗೂ ಕಿತ್ತೂರು ತಾಲೂಕುಗಳ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಒಟ್ಟು 637 ಮೀ ಉದ್ದದ ಈ ಕೆರೆಯು 51.80 ಚ.ಕಿ.ಮೀ ಸಂಗ್ರಹಣಾ ಸಾಮಥ್ರ್ಯವನ್ನು ಹೊಂದಿದ್ದು, 2 ನೀರಾವರಿ ಸ್ಲೂಸ್‌ಗಳನ್ನು ಹೊಂದಿದೆ. ಇದರ ಎಡದಂಡೆ ಕಾಲುವೆಯ ಉದ್ದ 9.87 ಕಿ.ಮೀ ಇದ್ದು, ಇದರಿಂದ 1036ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಹಾಗೂ ಇದರ ಬಲದಂಡೆ ಕಾಲುವೆಯ ಉದ್ದ 2.95 ಕಿ.ಮೀ ಇದ್ದು ಇದರಿಂದ 172.00 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಒಟ್ಟಾರೆಯಾಗಿ  1208 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು  ಈ ಹೂಲಿಕೇರಿಯು ಒದಗಿಸುತ್ತದೆ. 

2019-20 ರಲ್ಲಿ ಧಾರವಾಡ ಜಿಲ್ಲೆಯಲ್ಲಿ ನಿರಂತರ 10-15 ದಿನಗಳ ಕಾಲ ಸುರಿದ ಭಾರೀ ಮಳೆಯಿಂದ ಕೆರೆಯ ವೇಸ್ಟ್‌ ವೀಯರ್ ಕೆಳಭಾಗದಲ್ಲಿ ಆಳವಾದ ಕಂದಕ ಉಂಟಾಗಿತ್ತು. ಏಪ್ರಿಲ್ 2022-23 ರಲ್ಲಿ ಈ ಕೊರೆದುಹೋದ ಭಾಗದಲ್ಲಿ ಹೊಸದಾಗಿ ವೇಸ್ಟ್‌ ವೀಯರ್‌ನ್ನು ಸುಮಾರು 90.00 ಮೀ ಉದ್ದ ಹಾಗೂ 14 ಮೀ ಆಳದಿಂದ ಮರು ನಿರ್ಮಾಣ ಮಾಡಲಾಗಿದೆ ಹಾಗೂ ಇದು 6258 ಕ್ಯೂಸೆಕ್ಸ್‌ ನೀರನ್ನು ಹೊರಹಾಕುವ ಸಾಮಥ್ರ್ಯವನ್ನು ಹೊಂದಿರುತ್ತದೆ. 

ವೇಸ್ಟ್‌ ವೀಯರ್‌ನಿಂದ ಕೊರೆದ ಮಣ್ಣು-ಕಲ್ಲು ಎಡದಂಡೆ ಕಾಲುವೆಯ 0.570 ಕಿ.ಮೀ ನಲ್ಲಿರುವ ಅಕ್ವಾಡೆಕ್ಷಿನ ಪಿಯರ್‌ಗೆ ಧಕ್ಕೆ ಉಂಟಾಗಿ ಅದು ಬಿದ್ದಿದ್ದರಿಂದ ಎಡದಂಡೆ ಕಾಲುವೆಯ 1036.00 ಹೆಕ್ಟೇರ್ ಪ್ರದೇಶ ನೀರಾವರಿಯಿಂದ ವಂಚಿತವಾಯಿತು. 

ಇದನ್ನು ಮರು ನಿರ್ಮಾಣ ಮಾಡಲು ಸುಮಾರು ರೂ.600 ಲಕ್ಷಗಳ ಅಂದಾಜು ವೆಚ್ಚದಲ್ಲಿ ಎಡದಂಡೆ ಕಾಲುವೆಯ ಅಕ್ವಾಡೆಕ್ಟ್‌ ಮರು ನಿರ್ಮಾಣ, ಕಾಲುವೆ ಲೈನಿಂಗ್ ಹಾಗೂ ಕಟ್ ್ಘ ಕವರ್ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. 

ಇದರಲ್ಲಿ ಎಡದಂಡೆ ಕಾಲುವೆಯ 2.50 ಕಿ.ಮೀ ಲೈನಿಂಗ್ ಹಾಗೂ 320 ಮೀ ಕಟ್ ್ಘ ಕವರ್ ಕಾಮಗಾರಿ ಪೂರ್ಣಗೊಂಡಿದೆ. ಬಲದಂಡೆ ಕಾಲುವೆಯ 0.500 ಕಿ.ಮೀ ಭಾಗದ ಲೈನಿಂಗ್ ಕೆಲಸವೂ ಪೂರ್ಣಗೊಂಡಿದ್ದು, ಬಾಕಿ ಉಳಿದ 2.00 ಕಿ.ಮೀ ಲೈನಿಂಗ್ ಕಾಮಗಾರಿ ಜೊತೆಗೆ ಚೈನೇಜ 0.570 ಮೀಟರ್ ನಲ್ಲಿರುವ ಂಡಣಚಿಜಣಛಿಣ ಮರು ನಿರ್ಮಾಣ ಕಾಮಗಾರಿಯನ್ನು ಮಾಡಬೇಕಾಗಿರುತ್ತದೆ. ಸದರಿ ಮಳೆಗಾಲದ ಅವಧಿ ಮುಗಿದ ಬಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.