ಬಂಕಾಪುರ ನಗರದ ಸ್ವಚ್ಛತೆ ಹಾಗೂ ಕಾಮಗಾರಿಗಳನ್ನು ಪರೀಶೀಲಿಸಿದ ಜಿಲ್ಲಾಧಿಕಾರಿಗಳು

ಬಂಕಾಪುರ ನಗರದ ಸ್ವಚ್ಛತೆ ಹಾಗೂ ಕಾಮಗಾರಿಗಳನ್ನು ಪರೀಶೀಲಿಸಿದ ಜಿಲ್ಲಾಧಿಕಾರಿಗಳು District Collector inspects cleanliness and works in Bankapura city

ಬಂಕಾಪುರ ನಗರದ ಸ್ವಚ್ಛತೆ ಹಾಗೂ ಕಾಮಗಾರಿಗಳನ್ನು ಪರೀಶೀಲಿಸಿದ ಜಿಲ್ಲಾಧಿಕಾರಿಗಳು 

ಹಾವೇರಿ 15 : ಬಂಕಾಪುರ ಪುರಸಭೆ ಕಾರ್ಯಾಲಯ ಹಾಗೂ ನಾಡಕಚೇರಿಗೆ ಬುಧವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ  ಭೇಟಿ ನೀಡಿ ಪರೀಶೀಲಿಸಿದರು.  ಪುರಸಭೆ ಕಾರ್ಯಾಲಯದಲ್ಲಿನ ಸಿಬ್ಬಂದಿಗಳ ಕಾರ್ಯನಿರ್ವಹಣೆ,  ಸ್ವಚ್ಛತೆ, ಸಾರ್ವಜನಿಕ ಕುಂದು ಕೊರತೆಯನ್ನು ಜಿಲ್ಲಾಧಿಕಾರಿಗಳು  ಆಲಿಸಿದರು ಹಾಗೆಯೇ ಈಗಿರುವ ಹಳೆಯ ನಾಡ ಕಚೇರಿಯನ್ನು ವೀಕ್ಷಿಸಿ ಕಚೇರಿಯ ದುರಸ್ತಿ ಕಾರ್ಯವನ್ನು ಆದಷ್ಟು ಬೇಗನೆ ಮುಗಿಸಿ ಸಿಬ್ಬಂದಿಗಳ ಉಪಯೋಗಕ್ಕೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.  ನಾಡಕಛೇರಿಯ ಕಾರ್ಯವೈಕರಿಯನ್ನು ಪರೀಶೀಲಿಸಿ ಸಾರ್ವಜನಿಕ ಸೇವೆಗಳು ಸಕಾಲದಲ್ಲಿ ಸಿಗುವಂತೆ ಕಾರ್ಯನಿರ್ವಹಿಸಬೇಕು ಎಂದು ಸಿಬ್ಬಂದಿಗಳು ಅಗತ್ಯ ಸಲಹೆ ಸೂಚನೆ ನೀಡಿದರು ಬಳಿಕ ಬಂಕಾಪುರ  ನಗರ ಪ್ರಾದೇಶದಲ್ಲಿ ಸುತ್ತಾಡಿ ಚಾಲ್ತಿಯಲಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ  ನಗರದ ಸ್ವಚ್ಛತೆಯನ್ನು ಪರೀಶೀಲಿಸಿ,  ನಗರವನ್ನು ಆದಷ್ಟು ಸುಂದರವಾಗಿಟ್ಟುಕೊಳ್ಳಿ ನಗರದ ಸ್ವಚ್ಛತೆಗೆ ಹೆಚ್ಚು  ಆದ್ಯತೆ ನೀಡಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ  ಬಂಕಾಪುರ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ, ಉಪ ತಹಸೀಲ್ದಾರ ವೆಂಕಟೇಶ ಕುಲಕರ್ಣಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.