ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಮೇಲಾಟ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ
District Collector inaugurates primary and high school children's jumping competition
ಗದಗ 12: ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿರಲಿ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ನುಡಿದರು. ಗದಗ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕೆ ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣ ದಲ್ಲಿ ಏರಿ್ಡಸಿದ್ದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ 14 ಮತ್ತು 17 ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ/ ಬಾಲಕಿಯರ ಮೇಲಾಟಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಮಾನಸಿಕ ಹಾಗೂ ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಬಾಲ್ಯದ ಜೀವನ ಕೂಡಿರಬೇಕು. ಆಗ ಮಾತ್ರವೇ ಸದೃಢ ಹಾಗೂ ಆತ್ಮವಿಶ್ವಾಸ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಕ್ರೀಡಾ ಸೌಲಬ್ಯ ಜಿಲ್ಲೆಯಲ್ಲಿ ಉತ್ತಮವಾಗಿದೆ ಇವುಗಳನ್ನು ಬಳಸಿಕೊಂಡು ಕ್ರೀಡಾ ಸಾಧನೆ ಮಾಡಲು ಕರೆ ನೀಡಿದರು. ಜಿಲ್ಲೆಯಲ್ಲಿ ಇರುವ ಕ್ರೀಡಾ ಸೌಲಬ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವದು ಸಹ ಉತ್ತಮ ನಡೆ. ಕ್ರೀಡೆಯಲ್ಲಿ ಸದಾ ಪಾಲ್ಗೊಳ್ಳಿ, ಸೋಲು ಗೆಲವು ಇದ್ದೇ ಇರುತ್ತದೆ. ಶಕ್ತಿ, ಶಿಸ್ತು, ಉತ್ಸಾಹ ಹಾಗೂ ಆತ್ಮ ವಿಶ್ವಾಸದ ಪ್ರತೀಕವಾಗಿರುವ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವುದೇ ಪ್ರಮುಖ ಎಂದರು. ಕ್ರೀಡೆಯೆಂದರೆ ಕೇವಲ ಗೆಲುವು ಸೋಲಿನ ವ್ಯವಹಾರವಲ್ಲ. ಅದು ವ್ಯಕ್ತಿಯ ವಿಕಾಸದ ಪಾಠಶಾಲೆ, ಶಿಸ್ತಿನ ಪಾಠಪುಸ್ತಕ ಮತ್ತು ಸಹಕಾರದ ಪಠ್ಯ. ಅಥ್ಲೆಟಿಕ್ ಕ್ರೀಡೆಗಳು ನಮ್ಮ ದೈಹಿಕ ಸಾಮರ್ಥ್ಯ ಅಷ್ಟೇ ಅಲ್ಲ. ಮನೋಬಲ ಮತ್ತು ಧೈರ್ಯವನ್ನು ಪರೀಕ್ಷಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೆಮನಿ, ಡಾ.ಬಸವರಾಜ ಬಳ್ಳಾರಿ, ಬಿ.ಎಫ್.ಪೂಜಾರ, ವಿ.ಎಂ.ಹಿರೇಮಠ, ವಿ.ಎಫ್.ಕಲಕಂಬಿ, ಎಂ.ಕೆ.ಲಮಾಣಿ, ರಾಜು ಚವ್ಹಾಣ, ಶರಣಪ್ಪ ನಾವಳ್ಳಿ, ಎಲ್.ಸಿ.ಚೌಕಿಮಠ, ಎಸ್.ಡಿ.ಮುಳಗುಂದ, ರವಿರಾಜ ಪವಾರ, ವಿ.ವಿ.ನಡುವಿನಮನಿ, ಆರ್.ವಿ.ಶೆಟ್ಟೆಪ್ಪನವರ, ಶಂಕರ ಹಡಗಲಿ, ಶಿವಕುಮಾರ ಕುರಿಯವರ, ಶರಣು ಗೋಗೇರಿ, ವಸಂತ ಮಡ್ಲೂರ, ಎನ್.ಆರ್.ನಿಡಗುಂದಿ, ಎಂ.ವಿ. ಪಾಟೀಲ, ಎಲ್.ಡಿ.ಪಾಟೀಲ, ಆರ್.ಎಸ್.ನರೇಗಲ್, ಎಲ್.ಬಿ.ಹುಡೇದ, ಎಸ್.ಕೆ, ಮಂಗಳಗುಡ್ಡ ಸೇರಿದಂತೆ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೆಕೆಪಿಪಿಜಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಎಂ ಎಸ್ ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು. ಜೆ.ಬಿ. ಅಣ್ಣಿಗೇರಿ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 