ಅಮೃತ ಯೋಜನೆಯಡಿ ವಿಜಯಪುರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾ ಯೋಜನೆಗೆ ಸಮಗ್ರ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ

ಅಮೃತ ಯೋಜನೆಯಡಿ ವಿಜಯಪುರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾ ಯೋಜನೆಗೆ ಸಮಗ್ರ ಮಾಹಿತಿ ಒದಗಿಸಲು  ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ District Collector Dr. Anand K. instructed to provide comprehensive information for the Maha Yojana

        ವಿಜಯಪುರ, ಫೆ.20: ವಿಜಯಪುರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ತಾತ್ಕಾಲಿಕ ಮಹಾಯೋಜನೆ-2041(ಪ-11) ರ ಅನುಮೋದನೆಗೊಂಡಿದ್ದು ಅದರಂತೆ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧರಿತ ಮಹಾಯೋಜನೆ 2041ರ ಅವಧಿಯವರೆಗಿನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಸಮಗ್ರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸೂಚನೆ ನೀಡಿದರು. ಅವರು ಶುಕ್ರವಾರ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಜಯಪುರ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿ.ಐ.ಎಸ್  ಆಧಾರಿತ ತಾತ್ಕಾಲಿಕ ಮಹಾಯೋಜನೆ-2041ರ ಸಿದ್ದಪಡಿಸುವ ಕುರಿತು ಕೈಗೊಳ್ಳಬೇಕಾಗಿರುವ ವಿವಿಧ ಕಾಮಗಾರಿಗಳ ಯೋಜನೆಯ ಸಿದ್ಧಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು 

ಭಾರತ ಸರ್ಕಾರದ ಅಮೃತ ಯೋಜನೆಯಲ್ಲಿ ಮೂಲಭೂತ ನಾಗರಿಕ ಸೌಕರ್ಯಗಳಾದ ನೀರು ಸರಬರಾಜು, ಒಳ ಚರಂಡಿ, ನಗರ ಸಾರಿಗೆ, ಉದ್ಯಾನವನಗಳು, ವಿಶೇಷವಾಗಿ ಬಡವರಿಗೆ ಮತ್ತು ಹಿಂದುಳಿದ ವರ್ಗದವರ ಗುಣಮಟ್ಟ ಸುಧಾರಣೆ ಉದ್ದೇಶದಿಂದ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ  ದೇಶದ 500 ನಗರಗಳನ್ನು ಗುರುತಿಸಲಾಗಿದೆ. ರಾಜ್ಯದ 26 ನಗರಗಳಲ್ಲಿ ವಿಜಯಪುರ ನಗರವನ್ನು ಅಮೃತ ಯೋಜನೆಯಡಿ ಗುರುತಿಸಿ ಆಯ್ಕೆಯಾಗಿರುತ್ತದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಾವು ಕೈಗೊಂಡಿರುವ ಪ್ರಮುಖ ಹಾಗೂ ಯೋಜಿತ ಬೆಳವಣಿಗೆಗಳು ಇಲಾಖಾ ನಿರ್ಮಾಣಗಳು ಅಧಿಸೂಚನೆ, ವಿಶೇಷ ವಲಯಗಳು, ಕೈಗಾರಿಕಾ ವಸಾಹತುಗಳು, ನೀರಾವರಿ ಯೋಜನೆಗಳು, ಜಲಮೂಲಗಳು, ಸೇರಿದಂತೆ ಯಾವುದೇ ಮಾಹಿತಿ ಕೈಬಿಟ್ಟು ಹೋಗದಂತೆ ನೋಡಿಕೊಂಡು ಜಿ.ಐ.ಎಸ್ ಆಧಾರಿತ ಮಹಾ ಯೋಜನೆ 2041ಕ್ಕೆ ಸಮಗ್ರ ಮಾಹಿತಿ ಒದಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಆದಷ್ಟು ಶೀಘ್ರವಾಗಿ ನಿಖರ ಮಾಹಿತಿ ವಿವರ ಸಲ್ಲಿಸುವಂತೆ ಅವರು ಸೂಚಿಸಿದರು. 

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರ ಸಂಬಣ್ಣಿ, ಜಲಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ಗೋವಿಂದ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಪಂಚಾಯತ ರಾಜ್ ಇಂಜನಿಯರಿಂಗ ವಿಭಾಗದ ಕಾರ್ಯನಿರ್ವಾಹಕರಾದ ವಿಧ್ಯಾಧರ ನ್ಯಾಮಗೊಂಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.