ಹಳ್ಳಿಬೈಲ್ ಗ್ರಾಮದಲ್ಲಿ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಣೆ
Distribution of house titles to beneficiaries in Hallibail village
ಹಾನಗಲ್ 11 :ಕಳೆದ 30-40 ವರ್ಷಗಳಿಂದ ಹಳ್ಳಿಬೈಲ್ ಗ್ರಾಮಸ್ಥರು ಆತಂಕದಲ್ಲಿ ದಿನ ದೂಡುತ್ತಿದ್ದು, ಆ ದಿನಗಳೀಗ ದೂರಾಗಿವೆ. ಗ್ರಾಮಸ್ಥರು ಶಾಶ್ವತವಾಗಿ ಮನೆ ಮಾಲಿಕತ್ವ ಪಡೆದುಕೊಂಡಿದ್ದು ಇನ್ನೇನಿದ್ದರೂ ಸುಖ, ಸಂತೋಷ, ನೆಮ್ಮದಿಯ ಜೀವನ ನಡೆಸಲಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಹಳ್ಳಿಬೈಲ್ ಗ್ರಾಮದಲ್ಲಿ ನೂತನ ಕಂದಾಯ ಗ್ರಾಮ ಪಾಂಡವಪುರದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಸ್ಥರು ವಾಸವಿದ್ದ ಮನೆಗಳ ತೆರವಿಗೆ ಆಗಾಗ ಬುಲ್ಡೋಜರ್ ಬಂದು ನಿಲ್ಲುತ್ತಿತ್ತು. ನಾಳೆ ಏನಾಗುತ್ತದೆಯೋ ಎನ್ನುವ ಆತಂಕದಲ್ಲಿಯೇ ದಿನದೂಡುವಂಥ ಸ್ಥಿತಿ ಇತ್ತು. ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಸಾಕಷ್ಟು ಹೋರಾಟ ನಡೆಸಿದ್ದರು. ಅಮರಣಾಂತ ಉಪವಾಸ ಸಹ ನಡೆಸಿದ್ದರು. ಗ್ರಾಮಸ್ಥರ ಹೋರಾಟ ಕೊನೆಗೂ ಫಲ ನೀಡಿದ್ದು ಇಂದು ಪಾಂಡವಪುರ ಹೆಸರಿನಲ್ಲಿ ನೂತನ ಕಂದಾಯ ಗ್ರಾಮ ರಚಿಸಿ ಎಲ್ಲ ಕುಟುಂಬಗಳಿಗೂ ಮನೆ ಮಾಲಿಕತ್ವದ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಗ್ರಾಮದ ಪ್ರತಿಯೊಂದು ಕುಟುಂಬಗಳೂ ಅತಂತ್ರದ ಕಡೆಯಿಂದ ಸ್ವತಂತ್ರದ ಕಡೆಗೆ ಬಂದಿವೆ. ಪಾಂಡವಪುರ ಮತ್ತು ಹಳ್ಳಿಬೈಲ್ ಗ್ರಾಮಗಳ 375 ಕ್ಕೂ ಹೆಚ್ಚು ಕುಟುಂಬಗಳು ಮನೆ ಮಾಲಿಕತ್ವ ಪಡೆಯುತ್ತಿದ್ದು, 20 ವರ್ಷದ ರಾಜಕಾರಣದ ಜೀವನದಲ್ಲಿ ಮನೆಗಳಿಗೆ ಮಾಲಿಕತ್ವ ದೊರಕಿಸಿದ ವಿಷಯ ಹೆಚ್ಚು ತೃಪ್ತಿ ತಂದುಕೊಟ್ಟಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗ್ರಾಮದ ವಿರಕ್ತಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಕಿರವಾಡಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಹಿರೇಮಠ, ಉಪಾಧ್ಯಕ್ಷ ಮಾರುತಿ ಮೂಕನವರ, ಸದಸ್ಯರಾದ ನಿರಂಜನ ಪಾಟೀಲ, ಮಮತಾ ಕುಬಟೂರ, ಮಂಜಮ್ಮ ಹೊಳಿಯಣ್ಣನವರ, ಯಲ್ಲಪ್ಪ ಕಲ್ಲೇರ, ತಹಶೀಲ್ದಾರ್ ರೇಣುಕಾ ಎಸ್., ಉಷಾ ಮಾನೆ, ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಟಾಕನಗೌಡ ಪಾಟೀಲ, ಪುಟ್ಟಪ್ಪ ನರೇಗಲ್, ಕೊಟ್ರ್ಪ ಕುದರಿಸಿದ್ದನವರ, ಜಗದೀಶಗೌಡ ಪಾಟೀಲ, ಯಲ್ಲಪ್ಪ ಕಲ್ಲೇರ, ಸುನೀಲಗೌಡ ಪಾಟೀಲ, ಚಂದ್ರ್ಪ ಜಾಲಗಾರ, ಯಾಸೀರ್‌ಅರಾಫತ್ ಮಕಾನದಾರ, ಪ್ರಕಾಶ ವಡ್ಡರ, ಸಿದ್ದನಗೌಡ ಪಾಟೀಲ, ಹನುಮಂತಪ್ಪ ಮರಗಡಿ, ಪರಶುರಾಮ ಹೊಳಿಯಣ್ಣನವರ, ಸಿದ್ದರಾಮಗೌಡ ಸಿ.ಕೆ., ವೀರನಗೌಡ ಪಾಟೀಲ ಸೇರಿದಂತೆ ಇನ್ನೂ ಹಲವರು ಇದ್ದರು.
-ಬಾಕ್ಸ್ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಧರ್ಮಪತ್ನಿ ಉಷಾ ಅವರಿಗೆ ಗ್ರಾಮಸ್ಥರು ಉಡಿ ತುಂಬಿದ್ದು ಗಮನ ಸೆಳೆಯಿತು. ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪ್ರಮುಖ ಬೀದಿಗಳನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಪ್ರತಿಯೊಂದು ಮನೆಗಳ ಎದುರು ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಶ್ರೀನಿವಾಸ ಮಾನೆ ದಂಪತಿಗೆ ಆರತಿ ಬೆಳಗಿ ಗ್ರಾಮಸ್ಥರು ಸ್ವಾಗತಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 