ಅಂಗನವಾಡಿ ಮಕ್ಕಳಿಗೆ ಬಾಣಂತಿಯರಿಗೆ ಆಹಾರ ವಿತರಣೆ

ಲೋಕದರ್ಶನ ವರದಿ

ಗದಗ 22: ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ 73ರಲ್ಲಿ ಕೊರೊನ ವೈರಸ್ 19 ಲಾಕ್ ಡೌನ್ ಆಗಿರುವುದರಿಂದ ಅಂಗನವಾಡಿ ಮಕ್ಕಳು 3-6 ವರ್ಷದ ಮಕ್ಕಳಿಗೆ ಹಾಗು ಗಭರ್ಿಣಿಯರಿಗೆ, ಬಾಣಂತಿಯರಿಗೆ ಈ ಫಲಾನುಭವಿಗಳಿಗೆ ಆಹಾರವನ್ನು ವಿತರಿಸಲಾಯಿತು. 

  ಸರಕಾರ ಆದೇಶದ ಪ್ರಕಾರ ನಿಗದಿ ಪಡಿಸಿದ ಗ್ರಾಮಗಳನ್ನು ಸರಿಯಾದ ಪ್ರಮಾಣದಲ್ಲಿ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಅಹಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ  ಎಎಸ್ ಗೌಡರ ಹಾಗೂ ಅಂಗನವಾಡಿ ಕಾರ್ಯಕತರ್ೆಯರಾದ ಅನ್ನಕ್ಕ ಹ ಬೇವಿನಗಿಡದ, ಎನ್ ಆರ್ ನವಛಿದ್ರ, ಆಶಾ  ಕಾರ್ಯಕತರ್ೆಯರಾದ ಎನ್ ಬಿ ಕೊಡತಗೇರಿ, ಎಸ್ ಎಂ ವಸ್ತ್ರ್ರದ ಮತ್ತು ಸಹಾಯಕಿಯರು ಮನೆ  ಮನೆಗೆ ಹೋಗಿ ಆಹಾರ ವಿತರಿಸಿದರು. ಮತ್ತು ಇದರ ಜೊತೆಗೇ ಅಧ್ಯಕ್ಷರು ಮಾಸ್ಕ್ ವಿತರಿಸಿದರು.