ಶಾಸಕ ರಾಘವೇಂದ್ರ ಹಿಟ್ನಾಳರಿಂದ ಆಹಾರ ಕಿಟ್ ವಿತರಣೆ
ಲೋಕದರ್ಶನ ವರದಿ
ಕೊಪ್ಪಳ 21: ಕೊರೊನಾ ಭೀತಿ ಹರಡುತ್ತಿರುವ ಹಿನ್ನೆಲೆ, ರಾಜ್ಯವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಕೂಲಿ ಕಾಮರ್ಿಕರು ಹಾಗೂ ವಿವಿಧ ವಾಡರ್್ನ ಬಡಕುಟುಂಬಗಳಿಗೆ ಅಗತ್ಯ ವಸ್ತುಗಳ ಸಮಸ್ಯೆ ಎದುರಾಗಿದೆ ಈ ಹಿನ್ನೆಲೆ ಸುಮಾರು 3000 ಕ್ಕಿಂತ ಹೆಚ್ವು ಅಗತ್ಯ ವಸ್ತುಗಳ ರೇಷನ್ ಕಿಟ್ಗಳನ್ನು ಸ್ಥಳೀಯ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ನಗರದ ತಮ್ಮ ನಿವಾಸದ ಆವರಣದಲ್ಲಿ ವಿತರಿಸಿದರು.
ಕಿಟ್ನಲ್ಲಿ ಅಕ್ಕಿ, ಬೇಳೆ ಸೇರಿಸಿದಂತೆ ಅಗತ್ಯವಸ್ತುಗಳ ರೇಷನ್ ಕಿಟ್ನ್ನು, ವಿವಿಧ ವಾಡರ್್ ಗಳ ಬಡವರಿಗೆ ಹಂಚಲಾಗುವುದು ಅಗತ್ಯ ಬಿದ್ರೆ ಇನ್ನಷ್ಟು ಪೂರೈಸಲಾಗುವುದು. ಎಲ್ಲರೂ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಪಾಡುವ ಮೂಲಕ ಆರೋಗ್ಯದ ಕಡೆ ಗಮನಹರಿಸಬೇಕಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್, ಮಾಜಿ ಜಿ.ಪಂ ಅಧ್ಯಕ್ಷರುಗಳಾದ ಎಸ್.ಬಿ ನಾಗರಳ್ಳಿ, ರಾಜಶೇಖರ ಕೆ ಹಿಟ್ನಾಳ, ಜುಲ್ಲುಸಾಬ ಖಾದ್ರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಧಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಾಷಕಾಟನ್,ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಹಿರಿಯ ಸದಸ್ಯ ಅಮ್ಜದ್ ಪಟೇಲ್,ಕೃಷ್ಣ ಇಟ್ಟಂಗಿ, ನಗರಸಭೆ ಸದಸ್ಯರಾದ ಅಕ್ಬರ್ ಪಲ್ಟನ್, ಅಜೀಮ್ ಅತ್ತಾರ್,ಪ್ರಸನ್ನ ಗಡಾದ, ಮಾಜಿ ನಗರ ಸಭೆ ಸದಸ್ಯ ಮಾನ್ವಿ ಪಾಷಾ, ಮಾಧ್ಯಮ ವಕ್ತಾರ ಕುರಗೋಡ ರವಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 