ಶಿಗ್ಗಾವಿ-ಸವಣೂರ ಕ್ಷೇತ್ರದ 4,188 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ : ಶಾಸಕ ಪಠಾಣ

ಶಿಗ್ಗಾವಿ-ಸವಣೂರ ಕ್ಷೇತ್ರದ 4,188 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ : ಶಾಸಕ ಪಠಾಣ Distribution of entitlement certificates to 4,188 beneficiaries of Shiggavi-Savanur constituency: M

ಶಿಗ್ಗಾವಿ 13 : ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ 4,188 ಫಲಾನುಭವಿಗಳು ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಭೂ ಗ್ಯಾರಂಟಿ ಯೋಜನೆಯ ಎರಡನೇ ಹಂತ ಹಾವೇರಿಯಲ್ಲಿ ಫೆ.14 ರಂದು ಅನುಷ್ಠಾನಗೊಳ್ಳಲಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.  ಹಾವೇರಿಯಲ್ಲಿ ನಡೆಯುವ ರಾಜ್ಯ ಸರಕಾರದ ಸಾಧನಾ ಸಮಾವೇಶದಲ್ಲಿ ಇವರೆಲ್ಲರಿಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಭೂ ಗ್ಯಾರಂಟಿ ಯೋಜನೆ ಎರಡನೇ ಹಂತ ಸಮಾವೇಶದಲ್ಲಿ ಹಾವೇರಿ, ಚಿಕ್ಕಮಂಗಳೂರ, ಧಾರವಾಡ, ಉತ್ತರ ಕನ್ನಡ, ಡಾವಣಗೆರೆ, ಚಿತ್ರದುರ್ಗ ಸೇರಿದಂತೆ ಒಟ್ಟು 9 ಜಿಲ್ಲೆಗಳ 1.10 ಲಕ್ಷ ಜನರಿಗೆ ಭೂ ಮಾಲೀಕತ್ವದ ಹಕ್ಕಪತ್ರಗಳನ್ನು ಇದರಲ್ಲಿ ವಿತರಿಸಲಾಗುತ್ತಿದೆ.   ಸರಕಾರಿ ಜಾಗಗಳಲ್ಲಿ ತಲೆಮಾರುಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಸಾವಿರಾರರು ಕುಟುಂಬಗಳು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿವೆ.

ಅನೇಕ ದಶಕಗಳಿಂದ ಮನೆ ನಿರ್ಮಿಸಿಕೊಂಡಿದ್ದರೂ ಹಕ್ಕು ಪತ್ರ ಸಿದ್ದ ಸರಕಾರಿ ಜಾಗದಲ್ಲಿ ವಾಸ ಮಾಡುತ್ತಿರುವ ಕುಟುಂಬಕ್ಕೆ ಅವರ ಮನೆ ಇರುವಷ್ಟು ವಿಸ್ತೀರ್ಣದ ಭೂಮಿ ಹಕ್ಕು ಪತ್ರವನ್ನು ಇ-ಸ್ವತ್ತು ಮಾಡಿ ಮನೆ ಮುಖ್ಯಸ್ಥನ ಹೆಸರಿಗೆ ಮಾಡಿಕೊಡಲಾಗುತ್ತಿದೆ. ಆದರೆ, ಗರಿಷ್ಠ 4 ಸಾವಿರ ಚದುರಡಿಯಲ್ಲಿ ಜಾಗ ಕೊಡಲಾಗುತ್ತಿದೆ. ಶಿಗ್ಗಾವಿ ತಾಲೂಕಿನಲ್ಲಿ 37ಉಪ ಗ್ರಾಮಗಳು 2913 ಫಲಾನುಭವಿಗಳಿಗೆ ಹಕ್ಕಪತ್ರ ಸಿದ್ದಗೊಂಡಿವೆ.  ಈ ಯೋಜನೆ ಯಶಸ್ವಿಗೆ ಕ್ಷೇತ್ರದ ಅಧಿಕಾರಿ ಸಿಬ್ಬಂದಿ ಶ್ರಮ ಶ್ಲಾಘನೀಯ. ವಿಧಾನಸಭಾ ಮತ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ಇಲ್ಲದಿರುವ ಫಲಾನುಭವಿಗಳಿದ್ದಾರೆ. ಹಂತ, ಹಂತವಾಗಿ ಎಲ್ಲರಿಗೂ ವಿತರಿಸುವ ಗುರಿ ಹೊಂದಲಾಗಿದೆ. ಬಡವರಿಗೆ ಹಕ್ಕುಪತ್ರ ವಿತರಿಸುವ ಸೌಭಾಗ್ಯ ನನ್ನದಾಗಿದೆ ಜಾಗವೇ ಅವರ ಹೆಸರಿನಲ್ಲಿ ಇಲ್ಲದ ಕಾರಣ ಸರಕಾರದ ಹಲವು ಸೌಲಭ್ಯಗಳಿಂದವಂಚಿತರಾಗುತ್ತಿದ್ದ ಕ್ಷೇತ್ರದ 6 ಸಾವಿರಕ್ಕೂ ಹೆಚ್ಚು ಕುಟುಂಬಕ್ಕೆ ಮನೆಗಳ ನಿವೇಶನದ ಹಕ್ಕುಪತ್ರಗಳು ಸಿಗಲಿವೆ ಎಂದರು. 


9 districts 1.10 lakh beneficiaries Government land rights